ವಿವಿಧ ಹುದ್ದೆಗಳಿಗೆ ಜನವರಿ10 ರಂದು ಉದ್ಯೋಗ ಮೇಳ

Written by Ramlinganna

Updated on:

Job interview : ಕಲಬುರಗಿ, ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜನವರಿ 10 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐಕಾಲೇಜಿನ ಎದುರುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Job interview ನೇರ ಸಂದರ್ಶನದಲ್ಲಿ ಭಾಗವಹಿಸುವ ಕಂಪನಿಗಳ ವಿವರ ಇಂತಿದೆ.

ಸ್ಪೇಕ್ಟ್ರಮ್ ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ದಲ್ಲಿ ಅಸೆಂಬ್ಲಿಗೆ ಆಪರೇಟರ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ (ಬಿ.ಇ, ಪಿಜಿ ಹೊತರುಪಡಿಸಿ) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವಯೋಮಾನದೊಳಗಿರಬೇಕು. ಜೋಯೋಲುಕಾಸ್ ದಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಹುದ್ದೆಗೆ ಯಾವುದೇ ಪದವಿ /  ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಸೇಲ್ಸ್ ಟ್ರೇನಿ ಹುದ್ದೆಗೆ ಯಾವುದೇ ಪದವಿ / ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವಯೋಮಾನದೊಳಗಿರಬೇಕು.

ಓಂ ಇನೇವೇಶನ್ಸ್ ದಲ್ಲಿ ಟೆಲಿಕಾಲರ್ಸ್ ಹುದ್ದೆಗೆ ಪಿಯುಸಿ ಅಥವಾ ಇತರೆ ಯಾವುದೇ ವಿದ್ಯಾರ್ಹತೆ ಪಾಸಾಗಿರಬೇಕು.ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು. ಟ್ಯಾಲಿ ಸೊಲುಶನ್ಸ್ ದಲ್ಲಿ ಟ್ಯಾಲಿ ಸೊಲ್ಯುಶಸ್ಸ್ ಹುದ್ದೆಗೆ ಪಿಯುಸಿ, ಬಿಬಿಎ, ಬಿಕಾಂ, ಬಿಬಿಎಂ, ಎಂಬಿಎ, ಎಂಕಾಂ, ಹುದ್ದೆಗೆ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.

ಇದನ್ನೂ ಓದಿ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದೀರಿ? ಇಲ್ಲೇ ಚೆಕ್ ಮಾಡಿ

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ವಿದ್ಯಾರ್ಹತೆಗಳ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 8003343944 (ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ) ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿಯ ದಾಸರಹಳ್ಳಿ ವೃತ್ತದ ಗ್ರಾಮ ಸಹಾಯಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಸ್ಥಳೀಯ ಅಭ್ಯರ್ಥಿಗಳು ಹುದ್ದೆಗೆ ಅಗತ್ಯ ವಿರುವ ದಾಖಲೆಗಳೊಂದಿಗೆ ಜನವರಿ 28 ರೊಳಗೆ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೆಚ್ಚಿನ ಮಾಹಿತಿಗೆ ತಾಲೂಕು ತಹಶೀಲ್ದಾರ ಕಚೇರಿಯನ್ನು, ಕಚೇರಿ  ವೇಳೆಯಲ್ಲಿ ಭೇಟಿ ನೀಡಿ ಅಥವಾ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ತಾಲೂಕು  ತಹಶೀಲ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯೋಜನಾ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ತುಮಕೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿಯಿರುವ ಜಿಲ್ಲಾ ಯೋಜನಾ ಸಹಾಯಕರ ಹುದ್ದೆಯನ್ನು ನೇರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ ಬರ ಪರಿಹಾರ ಜಮೆಯಾಗಲು ಯಾವ ಷರತ್ತುಗಳಿವೆ? ಇಲ್ಲಿದೆ ಮಾಹಿತಿ

ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಚೇರಿ, ತುಮಕೂರು ಇವರಿಂದ ಜನವರಿ 20 ರೊಳಗೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ ಜನವರಿ 25 ರೊಳಗಾಗಿ ಸಲ್ಲಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816 2956624 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರ ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment