Job interview for job : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಆಗಸ್ಟ್ 8 ರಂದು ಬೆಳಗ್ಗೆ 8.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆದಿತ್ರಿ ಮ್ಯಾಡುಲರ್ ಇಂಡಸ್ಟ್ರೀಸ್ ದಲ್ಲಿ ಸೈಟ್ ಇಂಜನೀಯರ್ ಆಫೀಸರ್ ಹುದ್ದೆಗೆ ಡಿಪ್ಲೋಮಾ ಬಿಇ (ಸಿವಿಲ್) ವಿದ್ಯಾರ್ಹತೆ ಹೊಂದಿರಬೇಕು. ಫುಲ್ ಟೈಮ್ ಅಕೌಂಟೆಂಟ್ ಹುದ್ದೆಗೆ ಬಿಕಾಂ, ಎಂಕಾಂ ವಿದ್ಯಾರ್ಹತೆ ಹೊಂದಿರಬೇಕು. ಬ್ಯಾಂಕ್ ಆಪರೇಶನ್ ಹುದ್ದೆಗೆ ಯಾವುದೇ ಪದವಿ (ಆಟೋ ಕ್ಯಾಡ್) ಪಾಸಾಗಿರಬೇಕು. ವಯೋಮಿತಿ 20 ರಿಂದ 35 ವಯೋಮಾನದೊಳಗಿರಬೇಕು.
ಹೀರೋ ಮೋಟಾರ್ಸ್ (ವೆಂಕಟೇಶ್ವರ ಆಟೋಮೊಬೈಲ್ಸ್) ದಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪಿಯುಸಿ ಪಾಸಾಗಿರಬೇಕು. ನೆಟ್ ವರ್ಕ್ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಡಿಪ್ಲೋಮಾ ಅಥವಾ ಯಾವುದೇಪದವಿ ಪಾಸಾಗಿರಬೇಕು. ಟೆಕ್ನಿಶಿಯನ್ ಹುದ್ದೆಗೆ ಐಟಿಐ (ಮೆಕ್ಯಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 35 ವಯೋಮಾನದೊಳಗಿರಬೇಕು.ಮತ್ತೂಟ್ ಫೈನಾನ್ಸ್ ದಲ್ಲಿ ಇಂಟರ್ನಶಿಫ್ ಟ್ರೈನಿ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 30 ವಯೋಮಾನದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು.
ಇದನ್ನೂ ಓದಿ : ನಿಮ್ಮ ಮನೆಯ ಆಸ್ತಿ ತೆರಿಗೆ ಕಟ್ಟುವುದು ಎಷ್ಟಿದೆ? ಇಲ್ಲೇ ಚೆಕ್ ಮಾಡಿ
ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 96200 95270 ಅಥವಾ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ
Job interview for job ಆಗಸ್ಟ್ 12 ರಂದು ಟ್ರೈನಿ ಹುದ್ದೆಗೆ ವಾಕ್ ಇನ್ ಆಪ್ಟಿಟ್ಯೂಡ್ ಹಾಗೂ ಟ್ರೈನಿ ಪರೀಕ್ಷೆ
ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಒಂದು ವರ್ಷದ ಅವಧಿಗೆ ವಿಸ್ತರಿಸಬಹುದಾದ ಟ್ರೈನಿ ಎಲೆಕ್ಟ್ರಾನಿಕ್ಸ್ ಹುದ್ದೆಗೆ ಎಲೆಕ್ಟ್ರಾನಿಕ್ಸ್ ಟ್ರೇಡ್ ನಲ್ಲಿ 2020-21, 2022-23ನೇ ಸಾಲಿನಲ್ಲಿಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಇದೇ ಆಗಸ್ಟ್ 12 ರಂದು ಬೆಳಗ್ಗೆ 9.30 ಗಂಟೆಗೆ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆಯಲಿರುವ ವಾಕ್ಇನ್ ಆಪ್ಟಿಟ್ಯೂಡ್ ಮತ್ತು ಟ್ರೇಡ್ ಪರೀಕ್ಷೆಗೆ ಹಾಜರಾಗಬೇಕೆಂದು ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ.
ತರಬೇತಿ ಅವಧಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 22 ಸಾವಿರ ರೂಪಾಯಿಗಳ ಸ್ಟೇಪಂಡ್ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು 10ನೇ ಅಥವಾ ಐಟಿಐ ಮೂಲ ಅಂಕಪಟ್ಟಿಹಾಗೂ ಇದರ ಝರಾಕ್ಸ್ ಪ್ರತಿ, ಪಾಸ್ಪೋರ್ಟ್ ಅಳತೆಯ ಫೋಟೋ 2 ಫೋಟೋ ಹಾಗೂ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಯನ್ನು ತರಬೇಕು.
ಮತ್ತಿತರಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರವನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 270608 ಗೆ ಸಂಪರ್ಕಿಸಲು ಕೋರಲಾಗಿದೆ.
ಐಟಿಐ ವಿವಿಧ ವೃತ್ತಿಗಳಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ
ಕಲಬುರಗಿ (ಮಹಿಳಾ) ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 2024ನೇ ಶೈಕ್ಷಣಿಕ ಸಾಲಿಗಾಗಿ ಪಿಪಿಪಿ ಮತ್ತು ಸರ್ಕಾರಿ ಕೋಟಾದ ಸೀಟ್ ಗಳ ನೇರ ಪ್ರವೇಶಕ್ಕಾಗಿ ಮೊದಲ ಬಂದವರಿಗೆ ಮೊದಲ ಪ್ರವೇಶ ನೀಡಲಾಗುತ್ತಿದೆ. ಪ್ರವೇಶ ಪಡೆಯಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಂದು ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.