ಜೂನ್ 15, 16 ಹಾಗೂ 17 ರಂದು ವಿವಿಧೆಡೆ ಉದ್ಯೋಗ ಮೇಳ

Written by Ramlinganna

Published on:

ವಿವಿಧ ಜಿಲ್ಲೆಗಳಲ್ಲಿ ಜೂನ್ 15 ರಿಂದ 17 ರವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜಿನ ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಜೂನ್ 16 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದುಪ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೇಳದಲ್ಲಿ ಭಾಗವಹಿಸುವ ವಿವಿಧ ಕಂಪನಿಗಳ ವಿವರ

ಕಲಬುರಗಿ ಎಸ್.ಆರ್.ಜೆ ಗ್ರೂಪ್ ಆಫ್ ಇನ್ಸಟಿಟ್ಯೂಶನ್ ದಲ್ಲಿ ಶಿಕ್ಷಕರ ಹುದ್ದೆಗೆ ಯಾವುದೇ ಪದವಿ ಮತ್ತು ಬಿಇಡಿ ಪಾಸಾಗಿರಬೇಕು. ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು.

ಭಾರತೀಯ ಏರ್ ಟೇಲ್ ದಲ್ಲಿ ಸಿಆರ್ಓ ಹುದ್ದೆಗೆ ಯಾವುದೇ ಪದವಿ ಅಥವಾ ಎಂಬಿಎ ಪಾಸಾಗಿರಬೇಕು. ವಯೋಮಿತಿ 18 ರಿಂದ  30 ವರ್ಷದೊಳಗಿರಬೇಕು. ಸಾಜ್ 85 ವೇಲ್ತ್ ಗ್ರೋವ್ ಪ್ರೈವೆಟ್ ಲಿಮಿಟೆಡ್ ದಲ್ಲಿ ಟೇಲಿ ಕಾಲರ್, ಅಡ್ಮಿನಿಸ್ಟ್ರೇಟರ್, ಟೀಮ್ ಲೀಡರ್, ಅಕೌಂಟೆಂಟ್, ಮಾರ್ಕೇಟೆಂಗ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಪಿಯುಸಿ ಅಥವಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಲು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

ಜೂನ್ 15 ಕ್ಕೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

ಕೌಶಲ ಮಿಷನ್ ಬೆಂಗಳೂರು, ಕೆಎಸ್ಟಿಡಿಸಿ ಹಾಗೂ ಹೋಟೆಲ್ ಅಸೋಸಿಯೇಶನ್ ಸಹಯೋಗದೊಂದಿಗೆ ಜೂನ್ 15 ರಂದು ಬೆಳಗ್ಗೆ 9.30 ಕ್ಕೆ ಬೆಂಗಳೂರಿನ ಡೇರಿ ಸರ್ಕಲ್, ಕೌಶಲಭವನ ಕೆಎಸ್.ಟಿಡಿಸಿ ಕಚೇರಿಯಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಸ್ಟೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಇತ್ಯಾದಿ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ, ಊಟ, ಇಎಸ್ಐ, ಪಿಎಫ್ ಸೌಲಭ್ಯವಿದೆ. 10, 12ನೇ ತರಗತಿ ಡಿಪ್ಲೋಮಾ, ಅಥವಾ ಐಟಿಐ ಉತ್ತೀರ್ಣ ಅನುತ್ತೀರ್ಣರಾದ ಆಸಕ್ತ ಜಿಲ್ಲೆಯ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬಹುದು ಎಂದು ವಿಜಯಪುರ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣಿತ ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

2023-24ನೇ ಶೈಕ್ಷಣಿಕ ಸಾಲಿನಲ್ಲಿ ಖಾಲಿಯಿರುವ ಗಣಿತ ಮತ್ತು ವಿಜ್ಞಾನ ವಿಷಯದ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲೆಯ ಮೋಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಹಿ. ವ.) ಪ್ರಾಂಶಪಾಲರಾದ ಮಾಣಿಕ ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಜವಳಿ ಇಲಾಖೆಯ ಹೈಟೆಕ್ ಪಾರ್ಕ್ ಬಂದಳ್ಳಿಯಲ್ಲಿ ನಡೆಯುತ್ತಿರುವ ತಾ.ಜಿ. ಯಾದಗಿರಿ ಮೊಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸದರಿ ವಸತಿ ಶಾಲೆಯಲ್ಲಿ, ಶೈಕ್ಷಣಿಕ ಸಾಲಿಗಾಗಿ ಗಣಿತ ಮತ್ತು ವಿಜ್ಞಾನ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2023ರ ಜೂನ್ 17 ರೊಳಗೆ ಖುದ್ದಾಗಿ ವಸತಿ ಶಾಲೆಯ ಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ಮೊಬೈಲ್ ನಂಬರ್ 9972617201 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment