ನೀವು ನಿಂತಿರುವ ಜಮೀನಿನ ಮಾಲಿಕರು ಯಾರು? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Check land information within a minute ರೈತರು ತಾವು ಯಾವುದೇ ಜಮೀನಿನಲ್ಲಿ ನಿಂತುಕೊಳ್ಳಲಿ ಆ ಜಮೀನಿನ ಮಾಲಿಕರು ಯಾರೆಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಈಗ ತೆಂತ್ರಜ್ಞಾನ ಎಷ್ಟರಮಟ್ಟಗೆ ಬೆಳೆದಿದೆಯೆಂದರೆ ತಮ್ಮ ಬಳಿ ಮೊಬೈಲ್ ಇದ್ದರೆ ಸಾಕು, ಕ್ಷಣಮಾತ್ರದಲ್ಲಿ ಎಲ್ಲಾ ಮಾಹಿತಿಯನ್ನು ಒಂದೇ ನಿಮಿಷದಲ್ಲಿ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ರೈತರು ಮೊಬೈಲ್ ನಲ್ಲೇ ಪಡೆಯಲು ಈಗ ಹಲವಾರು ಆ್ಯಪ್ ಗಳು ಬಂದಿವೆ. ಅದರಲ್ಲಿ ವಿಶೇಷವಾಗಿ ದಿಶಾಂಕ್ ಆ್ಯಪ್ ಸಹ ಒಂದಾಗಿದೆ. ಈ ಆ್ಯಪ್ ಸಹಾಯದಿಂದ ರೈತರು ಕರ್ನಾಟಕದ ಯಾವುದೇ ಮೂಲೆಯಲ್ಲಿ ನಿಂತುಕೊಳ್ಳಲಿ ಆ ಜಮೀನಿನ ಮಾಲಿಕರು ಯಾರು ಹಾಗೂ ಸರ್ವೆ ನಂಬರ್ ಏನಿದೆ? ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು.

Check land information within a minute ನೀವು ನಿಂತುಕೊಂಡಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಚೆಕ್ ಮಾಡಿ?

ರೈತರು ತಾವು ನಿಂತುಕೊಂಡಿರುವ ಜಮೀನಿನ ಮಾಲಿಕರು ಯಾರಿದ್ದಾರೆಂಬುದನ್ನು ಚೆಕ್ ಮಾಡಲು ಈ

https://play.google.com/store/apps/details?id=com.ksrsac.sslr&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಗ ದಿಶಾಂಕ್ ಆ್ಯಪ್ ತೆರೆದುಕೊಳ್ಳುತ್ತದೆ. ಆಗ ನೀವು install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಿ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಿ ನೀವು ಯಾವ ಭಾಷೆಯಲ್ಲಿ ಮಾಹಿತಿ ನೋಡಬೇಕೆಂದುಕೊಂಡಿದ್ದೀರೋ ಆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನೀವು ಇಂಗ್ಲೀಷ್ ಅಥವಾ ಕನ್ನಡ ಆಯ್ಕೆ ಮಾಡಿಕೊಳ್ಳಬಹುದು.

ನೀವು ನಿಮ್ಮ ಹೆಸರು ಬರೆಯಬೇಕು. ಈ ಮೇಲ್ ಐಡಿಯನ್ನ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕುವುದು ಕಡ್ಡಾಯವಾಗಿದೆ. ಆಗ ನಿಮ್ಮ ಮೊಬೈಲಿಗೆ ಓಟಿಪಿ ಕಳುಹಿಸಲಾಗುವುದು. ಹಾಗಾಗಿ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದ. ಅದನ್ನು ನಮೂದಿಸಿ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಮೊಬೈಲ್ ನಲ್ಲಿ ದಿಶಾಂಕ್ ಆ್ಯಪ್ ಇನ್ಸಾಟಾಲ್ ಆಗುತ್ತದೆ.  ಆಗ ನೀವು ಯಾವ ಜಮೀನಿನಲ್ಲಿ ನಿಂತಿರುತ್ತೀರೋ ಆ ಜಮೀನಿನ ಪಾಯಿಂಟ್ ಕಾಣಿಸುತ್ತದೆ. ಅಂದರೆ ಯಾವ ಸರ್ವೆ ನಂಬರ್ ನಲ್ಲಿ ನಿಂತಿರುತ್ತೀರೋ ಆ ಸರ್ವೆ ನಂಬರ್ ನಿಮಗೆ ಕಾಣಿಸುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ 14ನೇ ಕಂತು ಈ ದಿನ ಬಿಡುಗಡೆ : ಲಿಸ್ಚ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ಯಾವ ಜಮೀನಿನಲ್ಲಿ ನಿಂತಿರುತ್ತಾರೋ ಆ ಜಮೀನಿನ ಸರ್ವೆ ನಂಬರ್ ಅಷ್ಟೇ ಅಲ್ಲ, ಅದರ ಅಕ್ಕಪಕ್ಕದಲ್ಲಿರುವ ಸರ್ವೆ ನಂಬರ್ ಗಳು ಸಹ ಕಾಣಿಸುತ್ತವೆ. ಒಂದು ವೇಳೆ ನೀವು ನಗರ, ಪಟ್ಟಣದಲ್ಲಿದ್ದರೆ ಅಕ್ಕಪಕ್ಕದ ಓಣಿಗಳು (ಕಾಲೋನಿಗಳ) ಮಾಹಿತಿ ಇರುತ್ತವೆ.  ಅಲ್ಲಿ ಕಾಣುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಮತ್ತೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಸರ್ವೆ ನಂಬರ್, ಊರಿನ ಹೆಸರು, ಹೋಬಳಿ, ತಾಲೂಕು ಹಾಗೂ ಜಿಲ್ಲೆ ಕಾಣಿಸುತ್ತದೆ.

ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಿ ಈ ಮಾಹಿತಿ ಪಡೆಯಿರಿ

ಅಲ್ಲಿ ಮೊಬೈಲ್ ಪರದೆ ಮೇಲೆ ಕಾಣುವ ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಿದ ನಂತರ ಸರ್ನೋಕ್ ಸಂಖ್ಯೆಯಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಹಲವಾರು, ಹಿಸ್ಸಾ ನಂಬರ್ ಗಳು ಕಾಣಿಸುತ್ತವೆ. ಅದರಲ್ಲಿ ಒಂದೊಂದಾಗಿ ಆಯ್ಕೆ ಮಾಡಿಕೊಂಡು ಆ ಸ್ಥಳ ಯಾರ ಹೆಸರಿಗೆ ಇದೆ ಎಂಬುದನ್ನು ರೈತರು ಅತೀ ಸುಲಭವಾಗಿ ಚೆಕ್ ಮಾಡಬಹುದು. ಇದಕ್ಕಾಗಿ ರೈತರು ಯಾರ ಸಹಾಯವೂ ಬೇಕಿಲ್ಲ. ಜಮೀನು ಜಂಟಿಯಾಗಿದ್ದರೆ, ಆ ಜಮೀನು ಯಾರ ಯಾರ ಹೆಸರಿಗೆ ಜಂಟಿಯಾಗಿದೆ ಹಾಗೂ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು.

Leave a Comment