ನವೆಂಬರ್ 8 ,9 ಹಾಗೂ19 ರಂದು ರೈತರ ಮಕ್ಕಳಿಗೆ ಉದ್ಯೋಗ ಮೇಳ

Written by Ramlinganna

Updated on:

ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಐಟಿಐ, ಪದವಿ ಉತ್ತೀರ್ಣ ಅನುತ್ತೀರ್ಣ ವಿದ್ಯಾರ್ಥಿಗಳಿಗಾಗಿ ತುಮಕೂರು, ಮೈಸುರು ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಹೌದು, ನವಂಬರ್ 8 ರಂದು ಹಾವೇರಿ ಜಿಲ್ಲೆಯಲ್ಲಿ, ನವೆಂಬರ್ 9 ರಂದು ತುಮಕೂರು ಜಿಲ್ಲೆಯಲ್ಲಿ ಹಾಗೂ ನವೆಂಬರ್ 19 ರಂದು ಮೈಸೂರುಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಯಾ ಜಿಲ್ಲೆಗಳಲ್ಲಿ ತಮ್ಮ ದಾಖಲಾತಿಗಳೊಂದಿಗೆ ನೇರ ಸಂದರ್ಶಕ್ಕ ಹಾಜರಾಗಬಹುದು.

ಒಕ್ಕಲಿಗ ಯುವ ಬ್ರಿಗೇಡ್, ಎನ್.ಆರ್.ಐ ಒಕ್ಕಲಿಗರ ಬ್ರಿಗೇಡ್ ವತಿಯಿಂದ ನವೆಂಬರ್ 19 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮೈಸೂರು ಜಿಲ್ಲೆಯ ಹೆಬ್ಬಾಳು ಶ್ರೀ ಲಕ್ಷ್ಮೀಕಾಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾ ಭವನದಲ್ಲಿ ಅನ್ನದಾತರ ಮಕ್ಕಳಿಗಾಗಿ ಉಧ್ಯೋಗ ಮೇಳ ಏರ್ಪಡಿಸಲಾಗಿದೆ.

ಅನ್ನ ಅಕ್ಷರ ಉದ್ಯೋಗ ಕಲ್ಪಿಸುವುದು ಇದರ ಸಂಕಲ್ಪವಾಗಿದೆ. ಈ ಉದ್ಯೋಗ ಮೇಳ ಸಂಪೂರ್ಣ ಉಚಿತವಾಗಿರುತ್ತದೆ. ಪ್ರತಿು ಅಭ್ಯರ್ಥಿಯು ಐದು ಸಂಸ್ಥೆಗಳ ಸಂದರ್ಶನದಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ ಅನ್ನಭಾಗ್ಯ ಗೃಹಲಕ್ಷ್ಮೀ ಯೋಜನೆಯ ಹಣ ಇವರಿಗೆ ಜಮೆ: ಮೊಬೈಲ್ ನಲ್ಲೇ ಚೆಕ್ ಮಾಡಿ

ಎಸ್.ಸ್.ಎಲ್.ಸಿ, ಪಿಯುಸಿ, ಯಾವುದೇ ಪದವಿ ಉತ್ತೀರ್ಣ –ಅನುತ್ತೀರ್ಣ, ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್, ಸ್ನಾತಕೋತ್ತರ, ಎನ್ಟಿಟಿ, ಟಿಸಿಎಚ್, ಬಿಇಡಿ, ಎಂ.ಇಡಿ, ವಿದ್ಯಾರ್ಹತೆ ಹೊಂದಿರುವವರು ಭಾಗವಹಿಸಬಹುದು. ಹೌಸ್ ಕೀಪಿಂಗ್, ಸೇಲ್ಸ್ ಬಾಯ್, ಆಫೀಸ್ ಅಸಿಸ್ಟೆಂಟ್, ಡ್ರೈವರ್ಸ್ , ಡೆಲಿವರಿ ಬಾಯ್ಸ್, ಸೆಕ್ಯುರಿಟಿ ಸರ್ವಿಸೆಸ್, ಡಿಟಿಪಿ, ಸಾಫ್ಟ್ ವೇರ್, ಹಾರ್ಡ್ ವೇರ್, ಟೀಚಿಂಗ್, ಟ್ರೈನಿಂಗ್, ಕಲೆಕ್ಷನ್, ಕೌಂಟರ್ ಸೆಲ್ಸ್, ಸೇಲ್ಸ್ ಮಾರ್ಕೆಟಿಂಗ್, ಟೆಲಿ ಮಾರ್ಕೇಟಿಂಗ್, ಇನ್ಸುರೆನ್ಸ್ , ಬ್ಯಾಂಕಿಂಗ್, ಅಡ್ಮಿನಿಸ್ಟ್ರೇಶನ್, ಬಿಪಿಓ, ಕೆಪಿಓ, ಎಂಟಿಉದ್ಯೋಗಾವಶಗಳು ಲಭ್ಯವಿದೆ. ಆಸಕ್ತರು ಕಡ್ಡಾಯವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಮೋಹನ್ , ಮೊಬೈಲ್ ಸಂಖ್ಯೆ 96865 64192, ರವಿಚಂದ್ರ, ಮೊಬೈಲ್ ನಂಬರ್ 9886942810, ಕಿರಣ ಕುಮಾರ86605 69173 ಗೆ ಸಂಪರ್ಕಿಸಬಹಬುದು ಎಂದು ಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ.

ತುಮಕೂರಿನಲ್ಲಿ ನವೆಂಬರ್ 9 ರಂದು ಉದ್ಯೋಗ ಮೇಳ

ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಾದರಿ ವೃತ್ತಿ ಕೇಂದ್ರದಲ್ಲಿ ನವೆಂಬರ್ 9 ರಂದು ಬೆಳಗ್ಗೆ 10 ಗಂಟೆಗೆ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ತುಮಕೂರಿನ ಹೆಸರಾಂತ ಕಂಪನಿಗಳು ಭಾಗವಹಿಸಲಿವೆ. ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಯಾವುದೇ ಪದವಿ, ಐಟಿಐ ಹಾಗೂ ಡಿಪ್ಲೋಮಾ ಪಾಸಾದ 18 ರಿಂದ 35 ವಯೋಮಾನದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು.

ಇದನ್ನೂ ಓದಿ ಬರ ಪರಿಹಾರ ಬಿಡುಗಡೆ: ಯಾರಿಗೆ ಎಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅರ್ಹ ಅಭ್ಯಕರ್ಥಿಗಳನ್ನು ನೇರ ಸಂದರ್ಶನದಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತರು ತಮ್ಮ ವೈಯಕ್ತಿಕ ವಿವರ ಹಾಗೂ ಗುರುತಿನ ಚೀಟಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

8 ರಂದು ನೇರ ಸಂದರ್ಶನ

ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಮನೋವಿಜ್ಞಾನ, ಗಣಿತಶಾಸ್ತ್ರ, ಇಂಗ್ಲೀಷ್ ಮತ್ತು ಕನ್ನಡ ವಿಷಯಗಳ ಅರೆಕಾಲಿಕ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ನವೆಂಬರ್ 8 ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10.30 ರಂದು ಇಂಗ್ಲೀಷ್ ವಿಷಯದ ಅಭ್ಯರ್ಥಿಗಳು,11.30ಕ್ಕೆ ಕನ್ನಡ ವಿಷಯದ ಅಭ್ಯರ್ಥಿಗಳು, ಮಧ್ಯಾಹ್ನ 2.30 ಗಂಟೆಗೆ ಮನೋವಿಜ್ಞಾನ ವಿಷಯದ ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ  4 ಗಂಟೆಗೆ ಗಣಿತಶಾಸ್ತ್ರದ ಅಭ್ಯರ್ಥಿಗಳು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಕಚೇರಿಗೆ ತಮ್ಮ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಅರ್ಜಿಯನ್ನು ಮುಂಚಿತವಾಗಿ ಕಳುಹಿಸಬಹುದು. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಇನ್ನೇಕೆ ತಡ, ಕೂಡಲೇ ಉದ್ಯೋಗ ಮೇಳಕ್ಕೆ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬಹುದು.

Leave a Comment