ಬರ ಪರಿಹಾರ ಬಿಡುಗಡೆ: ಯಾರಿಗೆಷ್ಟು ಜಮೆ?

Written by Ramlinganna

Updated on:

Drought amount released : ಬರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ನೆರವಾಗಲು ರಾಜ್ಯ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 324  ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರದಿಂದ ಅನುದಾನ ನಿರೀಕ್ಷೆಯ ನಡುವೆಯೇ ಬರ ನಿರ್ವಹಣೆಗಾಗಿ ಜಿಲ್ಲಾವರು ಹಣ ನಿಗದಿ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಒಟ್ಟಾರೆ ಲಭ್ಯವಿದ್ದ  432.02 ಕೋಟಿ ರೂಪಾಯಿಗಳ ಪೈಕಿ 324 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಕನಿಷ್ಠ ಮೂರು ಕೋಟಿ ರೂಪಾಯಿಗಳಿಂದ ಗರಿಷ್ಠ 22.50 ಕೋಟಿ ರೂಪಾಯಿಯವರೆಗೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರಾಜ್ಯ ವಿಪತ್ತು ಪರಿಹಾರ ನಿಯಮದಡಿ 930.14 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಶೇ. 75 ರಷ್ಟು ಕೇಂದ್ರದ ಪಾಲು 697.80 ಕೋಟಿ ರೂಪಾಯಿ ಇದೆ. ರಾಜ್ಯದ ಪಾಲು ಶೇ. 25 ರಷ್ಟು ಅಂದರೆ 232.54 ಕೋಟಿ ರೂಪಾಯಿ ಸೇರಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಬಳ್ಳಾರಿ, ಕೊಡಗು ಜಿಲ್ಲೆಗಳಿಗೆ ತಲಾ 7.50 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.

ಇದನ್ನೂ ಓದಿ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ- ಯಾರಿಗೆ ಜಮೆ? ಇಲ್ಲೇ ಚೆಕ್ ಮಾಡಿ

ಬೀದರ್, ಉಡುಪಿ ಜಿಲ್ಲೆಗಳಿಗೆ ತಲಾ 4.50 ಕೋಟಿ ರೂಪಾಯಿಗಳನ್ನು ಬಿಡುಗಡೆ ಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 3 ಕೋಟಿರೂಪಾಯಿಗಳ ಅನುದಾನ ನೀಡಲಾಗಿದೆ.

Drought amount released ಯಾವ ಜಿಲ್ಲೆಗೆ ಎಷ್ಟು ಪರಿಹಾರ ಬಿಡುಗಡೆ ಆಗಿದೆ?

ಬೆಳಗಾವಿ ಜಿಲ್ಲೆಗೆ 22.50, ಬಾಗಲಕೋಟೆ 13.50, ವಿಜಯಪುರ 18, ಗದಗ ಜಿಲ್ಲೆಗೆ 10.50, ಹಾವೇರಿ ಜಿಲ್ಲೆಗೆ 12 ಕೋಟಿ, ಧಾರವಾಡ ಜಿಲ್ಲೆಗೆ 12 ಕೋಟಿ, ಶಿವಮೊಗ್ಗ ಜಿಲ್ಲೆಗೆ 10.50, ಹಾಸನ ಜಿಲ್ಲೆಗೆ 12 ಕೋಟಿ, ಚಿಕ್ಕಮಗಳೂರು ಜಿಲ್ಲೆಗೆ 12 ಕೋಟಿ, ಕೊಡಗು ಜಿಲ್ಲೆಗೆ 7.50, ದಕ್ಷಿಣ ಕನ್ನಡ ಜಿಲ್ಲೆಗೆ 3 ಕೋಟಿ ರೂಪಾಯಿ, ಉಡುಪಿ ಜಿಲ್ಲೆಗೆ 4.50 ಕೋಟಿ, ಉತ್ತರಕನ್ನಡ ಜಿಲ್ಲೆಗೆ 16.50 ಕೋಟಿ ರೂಪಾಯಿ, ಬೆಂಗಳೂರು ನಗರ ಜಿಲ್ಲೆಗೆ 7.50 ಕೋಟಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 6 ಕೋಟಿ ರೂಪಾಯಿ, ರಾಮನಗರ ಜಿಲ್ಲೆಗೆ 7.50, ಕೋಟಿ, ಕೋಲಾರ ಜಿಲ್ಲೆಗೆ 9 ಕೋಟಿ, ತುಮಕೂರು 15 ಕೋಟಿ, ಚಿತ್ರದುರ್ಗ ಜಿಲ್ಲೆಗೆ 9 ಕೋಟಿ, ದಾವಣಗೆರೆ ಜಿಲ್ಲೆಗೆ 9 ಕೋಟಿ ರೂಪಾಯಿ, ಯಾದಗಿರಿ 9 ಹಾಗೂ ವಿಜಯಪುರ ಜಿಲ್ಲೆಗೆ 9 ಕೋಟಿ ರೂಪಾಯಿಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.

ಬರಗಾಲ ಪರಿಹಾರ ಜಮೆಯಾಗಿರುವುದನ್ನುಚೆಕ್ ಮಮಾಡುವುದು ಹೇಗೆ ?

ಬರಗಾಲ ಪರಿಹಾರ ಯಾವ ರೈತರಿಗೆ ಎಷ್ಟು ಜಮೆಯಾಗಿದೆ ಎಂಬುದನ್ನು ರೈತರು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಹೌದು, ರೈತರು  ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ  ಅಲ್ಲಿ ಕಾಣುವ ಆಯ್ಕೆಗಳಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಇದಾದ ಮೇಲೆ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಿದ್ದರೆ ಎಷ್ಟು ಎಕರೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದು ಕಾಣಿಸುತ್ತದೆ. ಅತೀ ಶೀಘ್ರದಲ್ಲಿ ಎಲ್ಲಾ ರೈತರ ಖಾತೆಗೆ ಹಣ ಜಮೆಯಾಗಲಿದೆ. ಆಗ ರೈತರಿಗೆ ಜಮೆಯಾಗಿದ್ದು ಕಾಣಿಸುತ್ತದೆ.

ಸದ್ಯ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ನಂತರ ಕೇಂದ್ರ ಸರ್ಕಾರದಿಂದಲೂ ಹಣ ಬಿಡುಗಡೆಯಾಗಲಿದೆ. ಆಗ ರೈತರಿಗೆ ಕೇಂದ್ರ ಸರ್ಕಾರದ ಹಣ ಜಮೆಯಾಗಲಿದೆ.

Leave a Comment