Job Fair ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೋಮಾ ಪಾಸಾದವರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಯಾವುದೇ ಪರೀಕ್ಷೆಯಲ್ಲಿದೆ ನೇರವಾಗಿ ಕಚೇರಿಗೆ ಬಂದು ತಮ್ಮ ದಾಖಲೆಗಳನ್ನು ಸಲ್ಲಿಸಿ ನೇರ ಸಂದರ್ಶನದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬಹುದು.
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಕಲಬುರಗಿ ಜಿಲ್ಲಾಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಫೆಬ್ರವರಿ 8 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ? ಇಲ್ಲೇ ಚೆಕ್ ಮಾಡಿ
ಜೋಶ್ ಮ್ಯಾನೇಜ್ಮೆಂಟ್ ಆ್ಯಂಡ್ ಸೊಲ್ಯೂಶನ್ ದಲ್ಲಿ ಬ್ಯಾಂಕಿಂಗ್ ಪ್ರೋಸೆಸ್ ಹುದ್ದೆಗೆ ಎಸ್.ಎಸ್.ಎಲ್.ಸಿ , ಪಿಯುಸಿ, ಯಾವುದೇ ಪದವಿ ಹಾಗೂ ಎಂಬಿಎ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 45 ವಯೋಮಾನದೊಳಗಿರಬೇಕು. ಮ್ಯಾನುಫ್ಯಕ್ಟರಿಂಗ್ ಫ್ಲ್ಯಾಂಟ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಹಾಗೂ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು.
ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ಪಾಸಾದವರಿಗೆ ಜಾಬ್ (job fair)
ಆಧ್ಯಶ್ರೀ ಸೋಲಾರ್ ಗ್ರೂಪ್ಸ್ ದಲ್ಲಿ ಏರಿಯಾ ಸೆಲ್ಸ್ ಮ್ಯಾನೇಜರ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 28 ವಯೋಮಾನದೊಳಗಿರಬೇಕು. ಬಿವರೆಜ್ ದಲ್ಲಿ ಅಪ್ರೆಂಟಿಶಿಫ್ ಗೆ ಐಟಿಐ ಎಲಕ್ಟ್ರಿಶಿಯನ್ ಅಥವಾ ಪಿಟ್ಟರ್ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು.
ಇದನ್ನೂ ಓದಿ : Drought Compensation released: ಈ ರೈತರಿಗೆ ಬರ ಪರಿಹಾರ ಜಮೆ
ಜೂಮಟೆಕ್ ಐಜಿದಲ್ಲಿ ಪ್ರೋಡೆಕ್ಷನ್ ಅಥವಾ ಪ್ಯಾಕರ್ ಹುದ್ದೆಗೆ ಐಟಿಐ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಹೆಚ್.ಆರ್. ರಿಕ್ಯೂಟರ್, ಡೆಕ್ಸ್ ಟಾಪ್ ಇಂಜಿನಿಯರಿಂಗ್, ಟೆಕ್ನಿಶಿಯನ್ ಸಪೋರ್ಟರ್ ಮತ್ತಿತರ ಹುದ್ದೆಗೆ ಯಾವುದೇ ಪದವಿ, ಬಿಇ, ಬಿಟೆಕ್, ಬಿಸಿಎ, ಎಂಸಿಎ, ಎಂಬಿಎ, ಬಿಎಸ್.ಸಿ, ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು.
ಮೆಡ್ ಪ್ಲಸ್ ದಲ್ಲಿ ಫಾರ್ಮಸಿಸ್ಟ್ ಹುದ್ದೆಗೆ ಡಿಫಾರ್ಮ, ಬಿಫಾರ್ಮ ಮತ್ತು ಎಂ ಫಾರ್ಮ ವಿದ್ಯಾರ್ಹತೆ ಹೊಂದಿರಬೇಕು. ಸಿಎಸ್.ಸಿ ಹುದ್ದೆಗೆ ಎಸ್.ಎಸ್.ಎಲ್.ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು.
ಐಟಿಐ ಪಾಸಾದವರಿಗೂ ಜಾಬ್ (Job fair)
ಕ್ರೆಡಿಟ್ ಎಕ್ಸಸ್ ಗ್ರಾಮೀಣದಲ್ಲಿ ಕೇಂದ್ರ ಮ್ಯಾನೇಜರ್ ಹುದ್ದೆಗೆ ಪಿಯುಸಿ, ಐಟಿಐ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಪುರುಷರಿಗೆ ವಯೋಮಿತಿ 19 ರಿಂದ 28 ವಯೋಮಾನದೊಳಗಿರಬೇಕು. ಮಹಿಳೆಯರಿಗೆ 19 ರಿಂದ 36 ವಯೋಮಾನದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಇದನ್ನೂ ಓದಿ : ಈ ಎಲ್ಲಾ ಮಹಿಳೆಯರಿಗೆ Gruhalakshmi ಹಣ ಜಮೆ
ನೇರ ಸಂದರ್ಶದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 8003343944 (ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕರೆ ಮಾಡಬಹುದಾಗಿದೆ) ಗೆ ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು.