Drought Compensation released: ಈ ರೈತರಿಗೆ ಬರ ಪರಿಹಾರ ಜಮೆ

Written by Ramlinganna

Published on:

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮುಂಗಾರು ಮಳೆಯಿಲ್ಲದೆ ರಾಜ್ಯಾದ್ಯಂತ ಬೆಳೆ ಹಾನಿಯಾದ ರೈತರಿಗೆ ಎರಡು ಸಾವಿರ ರೂಪಾಯಿ ತಾತ್ಕಾಲಿಕ ಬರ ಪರಿಹಾರ ಹಣ ಬಿಡುಗಡೆ (Drought Compensation released)  ಮಾಡಲಾಗಿದೆ. ಹೌದು, ದಾವಣಗೆರೆ, ಹಾಸನ, ರಾಮನಗರ  ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳರೈತರ ಖಾತೆಗೆ ತಾತ್ಕಾಲಿಕ 2 ಸಾವಿರ ರೂಪಾಯಿು ಹಣ ಜಮೆ ಮಾಡಲಾಗಿದೆ.

ದಾವಣಗೆರೆ ಜಿಲ್ಲೆಗೆ 16 ಕೋಟಿ ರೂಪಾಯಿ ಬಿಡುಗಡೆ

ದಾವಣಗೆರೆ ಜಿಲ್ಲೆಯಿಂದ ತೀವ್ರ ಬರಗಾಲದಿಂದ 1,50,621 ಹೆಕ್ಟೇರ್ ನಷ್ಟು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರುವ ರೈತರಿಗೆ 5 ಹಂತಗಳಲ್ಲಿ 16 ಕೋಟಿ ರೂಪಾಯಿ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕೇಟೇಶ ತಿಳಿಸಿದ್ದಾರೆ.

ಎನ್.ಡಿ.ಆರ್.ಎಫ್ ನಲ್ಲಿ ಹಣ ಬರಬೇಕಿತ್ತು. ಅದು ಬಾರದೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ತಾತ್ಕಾಲಿಕವಾಗಿ ಪ್ರತಿ ಹೆಕ್ಟೇರಿಗೆ 2 ಸಾವಿರ ರೂಪಾಯಿ ಬಿಡುಗಡೆ ಮಾಡಿದೆ. ಕೇಂದ್ರದಿಂದ ಹಣ ಬಂದ ನಂತರ ಇನ್ನಷ್ಟು ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಫ್ರೂಟ್ಸ್ ತಂತ್ರಾಂಶದಲ್ಲಿಶೇ. 87 ರಷ್ಟು ರೈತರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಯಾವ ಯಾವ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೋ ಅವರಿಗೆಲ್ಲಾ ಹಣ ಜಮೆ ಮಾಡಲಾಗುವುದು.

ಇದನ್ನೂ ಓದಿ ಪಿಎಂ ಕಿಸಾನ್ ಅರ್ಹ,ಅನರ್ಹ ರೈತರ ಪಟ್ಟಿ ಬಿಡುಗಡೆ- ನಿಮ್ಮ ಹೆಸರು ಚೆಕ್ ಮಾಡಿ

ರೈತರು ತಮ್ಮ ಜಮೀನಿನ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶಕ್ಕೆ (ಫಾರ್ಮರ್ ರಿಜಿಸ್ಟ್ರೇಶನ್ ಆ್ಯಂಡ್ ಯೂನಿಪೈಡ್ ಬೆನಿಫಿಶಿಯರಿ ಇನ್ಫರ್ಮೇಶನ್ ಸಿಸ್ಟಂ) ಸೇರಿಸಿರಬೇಕು. ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿರುವ ಬ್ಯಾಂಕ್ ಖಾತೆಯ ಸಂಖ್ಯೆಯು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿದ್ದರೆ ಮತ್ತು ಎನ್.ಪಿಸಿಐ ಮ್ಯಾಪಿಂಗ್ ಆಗಿದ್ದರೆ, ಅಂತಹ ರೈತರ ಖಾತೆಗೆ ಡಿಬಿಟಿ ಮೂಲಕ ಪರಿಹಾರ ಹಣ ಜಮಾ ಮಾಡಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 4,81345 ರೈತರಲ್ಲಿ 4,14,436 ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೆಲವು ರೈತರ ಜಮೀನುಗಳು ಪೋಡಿಯಾಗಿ ಪಹಣಿಯಾಗಿರುವುದಿಲ್ಲ.ಜಂಟಿ ಖಾತೆ, ಬೇರೆಯವರಿಗೆ ಮಾರಾಟ ಮುಂತಾದ ಕಾರಣಗಳಿಂದ ಕೆಲವು ರೈತರ ಅರ್ಜಿಗಳು ತಿರಸ್ಕೃತಗೊಂಡಿದ್ದು, ಅವರಿಗೆ ಹಣ ಬಂದಿರುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಸನ ಜಿಲ್ಲೆಗೆ 34.36 ಕೋಟಿ ರೂಪಾಯಿ ಬಿಡುಗಡೆ

ಮಳೆಯ ಕೊರತೆಯಿಂದಾಗಿ  ಹಾಸನ ಜಿಲ್ಲೆಯ 8 ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಅದರಂತೆ ರಾಜ್ಯ ಸರ್ಕಾರದಿಂದ ಎಸ್.ಡಿ.ಆರ್.ಎಫ್ ನಡಿಯಲ್ಲಿ ಮೊದಲ ಕಂತಿನಲ್ಲಿ ಜಿಲ್ಲೆಗೆ 34.36 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.1,89,379 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ಯಾರಿಗೆ ಎಷ್ಟು ಬರ ಪರಿಹಾರ ಜಮೆ? ಮೊಬೈಲ್ ನಲ್ಲಿ ಚೆಕ್ ಮಾಡಿ

ಬರ ಪರಿಹಾರ ಹಣ ಯಾರಿಗೆ ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಅಥವಾ ಡ್ರಾಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2023ನೇ  ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

ರಾಮನಗರ ಜಿಲ್ಲೆಗೆ 10.61 ಕೋಟಿ (Drought Compensation released) ಪರಿಹಾರ ಬಿಡುಗಡೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಬರದಿಂದಾಗಿರುವ ಬೆಳೆಹಾನಿಗೆ ಜಿಲ್ಲೆಗೆ 10.61 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ.

ಬರದಿಂದಾಗಿ ಶೇ. 33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಟ 2 ಹೆಕ್ಟೇರಿಗೆ ಸೀಮಿತಗೊಳಿಸಿ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 17 ಸಾವಿರ ರೂಪಾಯಿ ಹಾಗೂ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರಿಗೆ 22500 ರೂಪಾಯಿ ಪರಿಹಾರ ನಿಗದಿಪಡಿಸಲಾಗಿದೆ.

ರೈತರಿಗೆ ಪರಿಹಾರದ ಮೊದಲ ಕಂತಾಗಿ ಬೆಳೆಹಾನಿಗೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 2 ಸಾವಿರ ರೂಪಾಯಿಯವರೆಗೆ ಪಾವತಿಸಲು ಸರ್ಕಾರ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್.ಡಿ.ಆರ್.ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಪರಿಹಾರ ಬಿಡುಗಡೆಗೊಳಿಸಲಾಗುವುದು.

ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಡಿಜಿಟಲ್ ಬೆಳೆ ಸಮೀಕ್ಷೆ ಮಾಹಿತಿ ಮತ್ತು ಎಫ್.ಐಡಿ ಹೊಂದಿರುವ ರೈತರ ಮಾಹಿತಿಯನ್ನಾಧರಿಸಿ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರ ವಿತರಣೆ ಪ್ರಕ್ರಿಯೆಪ್ರಾರಂಭವಾಗಿದೆ. ಮೊದಲನೇ , 2ನೇ ಹಾಗೂ ಮೂರನೇ ಹಂತಗಳಲ್ಲಿ ಒಟ್ಟು 59850 ರೈತರಿಗೆ 10.61 ಕೋಟಿ ಇನ್ಪುಟ್ ಸಬ್ಸಿಡಿಜಮೆ ಮಾಡಲು ಅನುಮೋದನೆ ನೀಡಲಾಗಿದೆ.

Leave a Comment