ಜೀವ ಜಲ (ಗಂಗಾ ಕಲ್ಯಾಣ) ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಪಟ್ಟಿ ಬಿಡುಗಡೆ- ನಿಮ್ಮ ಹೆಸರು ಚೆಕ್ ಮಾಡಿ

Written by Ramlinganna

Published on:

ಜೀವ ಜಲ (ಗಂಗಾ ಕಲ್ಯಾಣ) ಯೋಜನೆಯಡಿಯಲ್ಲಿ 2021-22ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಜೀದಾರರು ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಬಳಿ ಇರುವ ಫೋನ್ ನಲ್ಲಿ ಮನೆಯಲ್ಲಿ ಕುಳಿತು ಚೆಕ್ ಮಾಡಬಹುದು.  ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್ ಮಾಡುವುದು ಹೇಗೆ?

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ  ಕೊಳವೆ ಬಾವಿ ಕೊರೆಯಲು 2021-22ನೇ ಸಾಲಿನಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈಗ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು  ಚೆಕ್ ಮಾಡಲು ಈ

https://kvldcl.karnataka.gov.in/31/jeevajala-beneficiary-list/kn

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಫಲಾನುಭವಿಗಳ ಆಯ್ಕೆ ಪಟ್ಟಿ ಕಾಣುತ್ತದೆ.  ಅಂದರೆ  ಕ್ರಮ ಸಂಖ್ಯೆ, ಜಿಲ್ಲೆಗಳ ಹೆಸರು ಕಾಣುತ್ತದೆ. ಜಿಲ್ಲೆಗಳ ಹೆಸರು ಮುಂದುಗಡೆ ಒಂದು ಲಿಂಕ್ ಕಾಣಿಸುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಜಿಲ್ಲಾವಾರು ಆಯ್ಕೆಯಾದ ಫಲಾನುಭವಿಗಳ ಪಟ್ಟಿಯಲ್ಲಿಓಪನ್ ಆಗುತ್ತದೆ. ಅಲ್ಲಿ ತಾಲೂಕುವಾರು ವಿಧಾನಸಭಾಕ್ಷೇತ್ರ ಅಂದರೆ ತಾಲೂಕುಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಹೆಸರು ಇರುತ್ತದೆ.

ಫಲಾನುಭವಿಯ ಹೆಸರು, ಜಿಲ್ಲೆ. ತಾಲೂಕು, ಗ್ರಾಮ ರೈತರ ಸರ್ವೆ ನಂಬರ್ ಹಾಗೂ ಜಮೀನಿನ ವಿಸ್ತೀರ್ಣದ ಮಾಹಿತಿ ಇರುತ್ತದೆ.

ಏನಿದು ಜೀವಜಲ ಯೋಜನೆ

ಜೀವ ಎಂದರೆ ಜೀವನ ಅಥವಾ ಬದುಕು. ಜಲ ಅಂದರೆ ಗಂಗೆ. ನೀರು. ರೈತರ ಆರ್ಥಿಕ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಗಿದೆ.

ಜೀವ ಜಲ ಯೋಜನೆಯಡಿ ಯಾವ ರೈತರಿಗೆ ಆಯ್ಕೆ ಮಾಡಲಾಗಿತ್ತು?

ಜೀವ ಜಲ ಯೋಜನೆಯಡಿ ಸೌಲಭ್ಯ ಪಡೆಯಲು ಸಣ್ಣ ಹಾಗೂ ಅತೀ ಸಣ್ಣ ರೈತರಾಗಿರಬೇಕು. ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆಯೊಳಗೆ ಜಮೀನು ಹೊಂದಿರಬೇಕು. ಕೊಳವೆ ಬಾವಿಗೆ ನಿಗದಿಪಡಿಸಿರುವ ಘಟಕ ವೆಚ್ತಕ್ಕೆ 3.50 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು.

ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹತೆ ಏನಿತ್ತು?

ಅರ್ಜಿದಾರರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರಬೇಕು. ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ಹಾಲಿ ಜಮೀನುಗಳಿಗೆ ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಮಳೆ ಆಧಾರಿತವಾಗಿ ಖುಷ್ಕಿಯಾಗಿರಬೇಕು. ಸಣ್ಣ ಹಾಗ ಅತೀ ಸಣ್ಣ ಹಿಡುವಳಿ ಪ್ರಮಾಣ ಪತ್ರ ಹೊಂದಿರಬೇಕು. ನಿಗಮದಿಂದ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಅಂತಹ ರೈತರಿಗೆ ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ : ಸರ್ವೆ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಗಂಗಾ ಕಲ್ಯಾಣ ಯೋಜನೆಯಂತೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಮಗದ ವತಿಯಿಂದ ಜೀವಜಲ ಯೋಜನೆಯನ್ನು ಆರಂಭಿಸಲಾಗಿದೆ.  ಈ ಯೋಜನೆಯಡಿಯಲ್ಲಿ ರೈತರು ಗಂಗಾ ಕಲ್ಯಾಣ ಯೋಜನೆಯಂತೆ ತಮ್ಮ ಜಮೀನುಗಳಲ್ಲಿಬೋರವೆಲ್ (ಕೊಳವೆಬಾವಿ) ಕೊರೆಯಲು ಸಹಾಯಧನ ನೀಡಲಾಗುವುದು. ಈ ಯೋಜನೆಯಲ್ಲಿ 2021-22ನೇ ಸಾಲಿನಿಂದ ಆರಂಭಿಸಲಾಗಿದೆ.  ಗಂಗಾ ಕಲ್ಯಾಣ ಯೋಜನೆಗೆ ಇರುವ ಅರ್ಹತೆ ಈ ಯೋಜನೆಗೆ ಇಡಲಾಗಿದೆ. ಕೇವಲ ಗಂಗಾ ಕಲ್ಯಾಣ ಯೋಜನೆಯ ಬದಲಾಗಿ ಕರ್ನಾಟಕ ವೀರಶೈಲ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಅರ್ಜಿ ಕರೆಯಲಾಗುವ ಈ ಯೋಜನೆಗೆ ಜೀವಜಲ ಯೋಜನೆ ಎಂದು ಹೆಸರಿಡಲಾಗಿದೆ. ರೈತರು ಜೀವಜಲ ಯೋಜನೆಯಡಿ ತಮ್ಮ ಹೆಸರು ಆಯ್ಕೆಯಾಗಿರುವುದನ್ನು ಮನೆಯಲ್ಲಿ ಕುಳಿತು ಚೆಕ್ ಮಾಡಬಹುದು.

2 thoughts on “ಜೀವ ಜಲ (ಗಂಗಾ ಕಲ್ಯಾಣ) ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಪಟ್ಟಿ ಬಿಡುಗಡೆ- ನಿಮ್ಮ ಹೆಸರು ಚೆಕ್ ಮಾಡಿ”

  1. Somashekar.erappa mallappanahalli holenarasepurhassan karnataka st the gangakalyan.yojan moeny30000rsmoeny helpmadabekuhendubedekuty.thesbibankacno*********5924in.link.adar.madabku.hendu.bedekutywelcom

    Reply

Leave a comment