ರೈತರಿಗೆ  ಮಧ್ಯಮಾವಧಿ ಸಾಲದ ಬಡ್ಡಿಯಲ್ಲಿ ಶೇ. 40 ರಷ್ಟು ರಿಯಾಯಿತಿ ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷರು ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರಿಗೆ ಅನುಕೂಲವಾಗಲು ಒನ್ ಟೈಪ್ ಸೆಟ್ಲಮೆಂಟ್ (ಒಂದೇ ಕಂತಿನಲ್ಲಿ ಸಾಲ ಮರುಪಾವತಿ) ಯೋಜನೆ ಜಾರಿ ತರಲಾಗಿದೆ.

ಈ ಯೋಜನೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ತರಲಾಗಿದ್ದು, ಬ್ಯಾಂಕ್ ನ ಅಭಿವೃದ್ಧಿಯಲ್ಲಿ ಪ್ರಮುಖವಾಗಿ ಹೊಸದಾಗಿ ಸಾಲ ವಿತರಿಸಲು ಮಧ್ಯಮಾವಧಿ ಸಾಲ ವಸೂಲಾಗುವುದು ಬಹು ಮುಖ್ಯವಾಗಿದೆ ಎಂದಿದ್ದಾರೆ.

ಸಾಲ ವಸೂಲಾತಿ ಸಂಬಂಧ ಈಗಾಗಲೇ ರಾಯಚೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ಈಗಾಗಲೇ ನೋಟಿಸ್ ನೀಡಿದ್ದಲ್ಲದೆ ಸಿವಿಲ್ ಕೋರ್ಟ್ ನಲ್ಲಿದಾವಿ ಹೂಡಿ ಆಸ್ತಿ ಹರಾಜಿಗೆ ಮುಂದಾಗಿದ್ದಾರೆ. ಆದ್ದರಿಂದ ಇದ್ಯಾವುದಕ್ಕೂ ಅವಕಾಶ ಮಾಡಿಕೊಡದೆ ಸಾಲ ಮರುಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.

ನಬಾರ್ಡ್ ಆರ್.ಬಿ.ಐ ಮಾರ್ಗಸೂಚಿಗಳ ಪ್ರಕಾರ ನಿಯಮಗಳನ್ನು ರೂಪಿಸಿ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಒಟಿಎಸ್ ಗೆ ಅನುಮೋದನೆ ನೀಡಲಾಗಿರುತ್ತದೆ. ಹೀಗಾಗಿ ಮುಂದಿನ ತಿಂಗಳು ಡಿಸೆಂಬರ್ 31 ರವರೆಗೂ ಬಡ್ಡಿ ರಿಯಾಯಿತಿಯಲ್ಲಿ ಸಾಲ ತುಂಬಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್ ಈಗ ಲಾಭದತ್ತ ಹೆಜ್ಜೆ ಹಾಕಲಿದ್ದು, ಒಟಿಸ್ ಜಾರಿಗೆ ತಂದು 18 ಕೋಟಿ ನಷ್ಟ ಸರಿದೂಗಿಸಲು ಮಂದಾಗಿದ್ದೇವೆ ಎಂದಿದ್ದಾರೆ.

ರೈತರು ಇದನ್ನು ಕೊನೆ ಅವಕಾಶ ಎಂದು ತಿಳಿದು ಹಾಗೂ ಆಸ್ತಿ ಹರಾಜಿಗೆ ಅವಕಾಶ ನೀಡದೆ ಮಧ್ಯಮಾವಧಿ ಸಾಲವನ್ನು ರಿಯಾಯಿತಿ ಬಡ್ಡಿಯೊಂದಿಗೆ ಮರು ಪಾವತಿಸಬೇಕು. ಸಾಲ ಮರುಪಾವತಿಸಿದರೆ ತಕ್ಷಣವೇ ಹೊಸದಾಗಿ ಸಾಲ ವಿತರಿಸಲಾಗುವುದುಎಂದು ತೇಲ್ಕೂರ ತಿಳಿಸಿದ್ದಾರೆ.

ಇದನ್ನೂ ಓದಿ ಮುಂಗಾರು ಹಂಗಾಮಿನ ಈ ಬೆಳೆಗಳಿಗೆ ವಿಮೆ ಹಣ ಬಿಡುಗಡೆ: ಯಾವ ಬೆಳೆಗೆ ಎಷ್ಟು ಜಮೆಯಾಗಲಿದೆ? ಇಲ್ಲೇ ಚೆಕ್ ಮಾಡಿ

ಸಾಲ ವಸೂಲಾತಿಗೆ  ಸಂಬಂಧಿಸಿದಂತೆ ಬ್ಯಾಂಕ್ ಉಪಾಧ್ಯ ಸುರೇಶ ಸಜ್ಜನ್, ವ್ಯವಸ್ಥಾಪಕ ನಿರ್ದೇಶಕ ಶರಣಬಸಪ್ಪ ಬೆಣ್ಣೂರ, ನಿರ್ದೇಶಕ ಬಾಪುಗೌಡ ಪಾಟೀಲ್, ಸೋಮಶೇಖರ ಗೋನಾಕ, ಶರಣಬಸಪ್ಪ ಪಾಟೀಲ್ ಅಷ್ಟಗಿ, ಗೌತಮ ಪಾಟೀಲ್  ಅವರನ್ನೊಳಗೊಂಡ ಒಟಿಎಸ್ ಸಮಿತಿ ರಚಿಸಲಾಗಿದೆ. ರೈತರು ಮಾಹಿತಿಗಾಗಿ ಬ್ಯಾಂಕ್ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಬಹುದು.

ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು ಜಾರಿ- ಬಸವರಾಜ ಬೊಮ್ಮಾಯಿ

ರೈತರು ಬ್ಯಾಂಕುಗಳಲ್ಲಿ ಮಾಡಿದ ಸಾಲ ಮರುಪಾವತಿಸದೆ ಸುಸ್ತಿದಾರರಾದಲ್ಲಿ ಅವರ ಆಸ್ತಿಯನ್ನುಜಪ್ತಿ ಮಾಡದಂತೆ ನಿರ್ಭಂದ ವಿಧಿಸಲು ಕಾನೂನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಭಾರಿ ಪ್ರವಾಹದಿಂದಾಗಿ ಬೆಳೆನಷ್ಟ ಅನುಭವಿಸುತ್ತಿರುವ ರೈತರಿಗೆ ಈ ಮೂಲಕ ಸಮಾಧಾನಕರ ಸಂಗತಿಯೊಂದನ್ನು ಹೇಳಿದ್ದಾರೆ.

ಇತ್ತೀಚೆಗೆ  ಕೃಷಿ ಮೇಳದಲ್ಲಿ ಮಾತನಾಡಿದ ಅವರು, ರೈತರ ಆಸ್ತಿ ಜಪ್ತಿ ಬದಲಿಗೆ ಸಾಲ ಮರು ಪಾವತಿಗೆ ಸಮಯ ನೀಡಬೇಕೆಂಬ ಕಾನೂನು ತರಲು ಕಾನೂನು ತಜ್ಞರು ಸೇರಿ ಇನ್ನಿತರ ಜತೆ ಚರ್ಚಿಸಲಾಗಿದೆ ಎಂದರು.

ರೈತರಿಗೆ ದಿನೇ ದಿನೇ ಕೃಷಿ ಕಾರ್ಯ ಕಡಿಮೆಯಾಗುತ್ತಿದೆ. ರೈತರ ಆದಾಯದಲ್ಲಿ ಕುಸಿತ ಕಾಣುತ್ತಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದು ರಾಜ್ಯ ಸರ್ಕಾರವು ಅದಕ್ಕೆ ನೆರವಾಗುತ್ತಿದೆ. ಬೆಳೆ ನಷ್ಟ ಸೇರಿ ಇನ್ನಿತರ ಕಾರಣಗಳಿಂದಾಗಿ ರೈತರು ಬ್ಯಾಂಕುಗಳಲ್ಲಿ ಮಾಡಿದ ಸಾಲ ಮರುಪಾವತಿಸಲು ಪರದಾಡುವಂತಾಗಿದೆ. ಬ್ಯಾಂಕುಗಳು ರೈತರ ಆಸ್ತಿ ಜಪ್ತಿ ಮಾಡಲು ಮುಂದಾಗುತ್ತಿದೆ. ಕೃಷಿ ಕಾರಣದಿಂದಾಗಿ ಬ್ಯಾಂಕುಗಳಲ್ಲಿ ಸುಸ್ತಿದಾರರಾದವರ ಆಸ್ತಿಯನ್ನು ಜಪ್ತಿ ಮಾಡಬಾರದೆಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *