ತೋಟಗಾರಿಕೆ ಬೆಳೆಗಳಿಗೆ 1 ಲಕ್ಷ ರೂಪಾಯಿಬೆಳೆ ವಿಮೆ

Written by Ramlinganna

Updated on:

Insure your horticulture crop ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತೀವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆ ಹಾನಿಯ ನಷ್ಟದ ಪರಿಹಾರವನ್ನುಬೆಳೆ ವಿಮೆಯಡಿ ನೀಡಲಾಗುವುದು.

ಹೌದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ)ಯೋಜನೆಯಡಿಯಲ್ಲಿ ರೈತರು ಬೆಳೆ ವಿಮೆ ಮಾಡಿಸಿದರೆ ವಿಮಾ ಪರಿಹಾರ ಹಣವನ್ನು ಪಡೆಯಬಹುದು. ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ವಾರದೊಳಗಾಗಿ (14 ದಿನಗಳು) ಚಂಡಮಾರುತ ಸಹಿತ ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದಲ್ಲಿ ನಷ್ಟ ಪರಿಹಾರವನ್ನು ನೀಡಲಾಗುತ್ತದೆ.

Insure your horticulture crop  ಟೊಮ್ಯಾಟೋ ಈರುಳ್ಳಿ ಬೆಳಗೆ ವಿಮೆ ನೋಂದಣಿ ಮಾಡಲು ಜೂನ್ 30 ಕೊನೆಯ ದಿನ

2023-24ನೇ ಸಾಲಿನ ಮುಂಗಾರು ಹಂಗಾಮಿನ ಅವಧಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮ್ಯಾಟೋ ಹಾಗೂ ಈರುಳ್ಳಿ (ನೀರಾವರಿ) ಬೆಳೆಗಳನ್ನು ವಿಮೆಯಡಿ ಅಧಿಸೂಚಿಸಲಾಗಿದೆ.  ಜಿಲ್ಲೆಯ ಆರು ತಾಲೂಕಿನ ಎಲ್ಲಾ ಹೋಬಳಿಗಳು ಯೋಜನೆಯಡಿ ಬರುತ್ತದೆ.

ಇದನ್ನೂ ಓದಿ :  ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ರಾಜ್ಯ ಸರ್ಕಾರದ ಪಿಎಂ ಕಿಸಾನ್ ಹಣ ಜಮೆ- ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಟೊಮ್ಯಾಟೋ ಬೆಳೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 1,41500 ರೂಪಾಯಿಯಾಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಹೆಕ್ಟರಿಗೆ 7075 ರೂಪಾಯಿಯಾಗಿರುತ್ತದೆ. ಅದೇ ರೀತಿ ಈರುಳ್ಳಿ (ನೀರಾವರಿ) ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 80,500 ರೂಪಾಯಿಯಾಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 4025 ರೂಪಾಯಿಗಳಾಗಿರುತ್ತದೆ.  ಜೂನ್ 30 ರವರೆಗೆ ವಿಮಾ ನೋಂದಣಿ ಮಾಡಿಸಲು ಅವಕಾಶವಿದೆ.:

ಹತ್ತಿ ಬೆಳೆಗೆ ಪ್ರತಿ ಹೆಕ್ಟೇರಿಗೆ 49,750 ರೂಪಾಯಿ, ಕೆಂಪು ಮೆಣಸಿನ ಕಾಯಿ ಬೆಳೆಗೆ 107500 ವಿಮಾ ಮೊತ್ತವಾಗಿದೆ. ಉದ್ದು ಬೆಳೆಗೆ ಪ್ರತಿ ಹೆಕ್ಟೇರಿಗೆ 32750 ರೂಪಾಯಿ ಹೆಸರು ಬೆಳೆಗೆ 33250ರೂಪಾಯಿ ಹಾಗೂ ಎಳ್ಳು ಬೆಳೆಗೆ 28750 ರೂಪಾಯಿ ವಿಮಾ ಮೊತ್ತವಾಗಿದೆ. ಸೂರ್ಯಕಾಂತಿ ಬೆಳೆಗೆ ಪ್ರತಿ ಹೆಕ್ಟೇರಿಗೆ 40750 ರೂಪಾಯಿ, ತೊಗರೀಿ 48000 ಶೇಂಗಾ 54500 ರೂಪಾಯಿ ಹಾಗೂ ಮುಸುಕಿನ ಜೋಳ 56500 ರೂಪಾಯಿ ವಿಮಾ ಮೊತ್ತವಾಗಿದೆ.

ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಚೆಕ್ ಮಾಡಬೇಕೇ?

ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದೆಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/Premium/Crops_You_Can_Insure.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಂಡು Display ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅದರ ಮುಂದುಗಡೆ  ನಿಮಗೆ ಯಾವ ಬೆಳೆಗೆ ಎಷ್ಟುಹಣ ಪ್ರತಿ ಹೆಕ್ಟೇರಿಗೆ ಜಮೆಯಾಗುತ್ತದೆ ಹಾಗೂ ಎಷ್ಟು ಹಣ ನೀವು ಪಾವತಿಸಬೇಕು ಎಂಬುದು ಕಾಣಿಸುತ್ತದೆ.

ಈ ಯೋಜನೆಯಡಿ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಬೆಳೆ ಸಾಲ ಪಡೆಯದ ರೈತರು ನೋಂದಣಿ ಮಾಡಿಕೊಳ್ಳಬಹುದು.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀದಿಯಂತಹ ದಾಖಲೆ ನೀಡಬೇಕು. ಬೆಳೆ ವಿಮೆಗೆ ನೋಂದಣಿ ಮಾಡಲು ರೈತರ ಗುರುತಿನ ಚೀಟಿ ಸಂಖ್ಯೆ (ಎಫ್ಐಡಿ)  ಕಡ್ಡಾಯವಾಗಿರುತ್ತದೆ.  ಬೆಳೆ ವಿಮೆ ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ್ ಸಂಖ್ಯೆ ಜೋಡಿಸಿದ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ ಸಂಖ್ಯೆಯೊಂದಿಗೆ ಬ್ಯಾಂಕ್, ಗ್ರಾಮ ಒನ್  ಸಿಎಸ್ಸಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು.

Leave a Comment