ಜುಲೈ 31 ರೊಳಗೆ ವಿಮೆ ಮಾಡಿಸಿ ವಿಮೆ ಹಣ ಪಡೆಯಿರಿ

Written by Ramlinganna

Updated on:

Insure these horticulture crops  ಮುಂಗಾರು ಹಂಗಾಮಿಗೆ ಈ ಸಲ ಮಾವು, ಅಡಕೆ, ಕಾಳುಮೆಣಸು, ಶುಂಠಿ, ದ್ರಾಕ್ಷಿ, ಪಪ್ಪಾಯ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ. ಈ ಮೇಲಿನ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಇದೇ ಜುಲೈ 31 ಕೊನೆಯ ದಿನವಾಗಿದೆ.

ಯಾವ ಯಾವ ತೋಟಗಾರಿಕೆ ಬೆಳೆಗಳಿಗೆ ಯಾವ ಯಾವ ಜಿಲ್ಲೆಯ ರೈತರು ವಿಮೆ ಮಾಡಿಸಬಹುದು ಹಾಗೂ ವಿಮಾ ಕಂತಿನ ಮೊತ್ತವೆಷ್ಟು? ರೈತರೆಷ್ಟು ವಿಮೆ ಹಣ ಪಾವತಿಸಬೇಕೆಂಬುದರ ಮಾಹಿತಿ ಇಲ್ಲಿದ

ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಈಗ ಮರುವಿನ್ಯಾಸಗೊಳಿಸಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ತಿಂಗಳಿಗೂ ಹೆಚ್ಚು ಕಾಲ ವಿಳಂಬವಾಗಿದ್ದರೂ ರೈತರು ಈಗ ನಿಟ್ಟುಸಿರು ಬಿಡುವಂತಾಗಿದೆ.

ಬೆಳೆ ವಿಮೆ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಅಡಕೆ, ಕಾಳುಮೆಣಸು ಜೊತೆಯಲ್ಲಿ ಈ ಬಾರಿ ಶುಂಠಿ, ಮಾವು ಬೆಳೆಯೂ ಸೇರ್ಪಡೆಯಾಗಿದವೆ. ಈ ಮೂಲಕ ಕಳೆದ ಎರಡು ವರ್ಷಕ್ಕೂ ಹೆಚ್ಚಿನ ಕಾಲದ ರೈತರ ಬೇಡಿಕೆ ಈಡೇರಿದಂತಾಗಿದೆ.

ಅಡಕೆ ಬೆಳೆಗೆ 2023 ರ ಆಗಸ್ಟ್ 1 ರಿಂದ 2024 ರ ಜೂನ್ 30, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ವಿಮಾ ಅನ್ವಯಿಸುವ ಅವಧಿ 2023ರ ಆಗಸ್ಟ್ 1 ರಿಂದ 2024ರ ಜೂನ್ 30 ಆಗಿರುತ್ತದೆ.

ಬೆಳೆ ಸಾಲ ಪಡೆದ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಹಾಗೂ ಪಾವತಿಸಬೇಕಾದರ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ.

2017 ರ ಅವಧಿಯಲ್ಲಿ ಆರಂಭವಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಪ್ರತಿವರ್ಷ ಜೂನ್ ತಿಂಗಳಲ್ಲಿ ಆರಂಭವಾಗುತ್ತಿತ್ತು. ಬೆಳೆಸಾಲ ಪಡೆಯುವಾಗಲೇ ರೈತರಿಂದ ವಿಮಾ ಕಂತನ್ನು ಭರಣ ಮಾಡಿಕೊಳ್ಳಲಾಗುತ್ತಿತ್ತು. ಆದರೆ  ಈ ವರ್ಷ ಮುಂಗಾರು ಹಂಗಾಮು ಪ್ರಾರಂಭವಾಗಿ ಒಂದುವರೆ ತಿಂಗಳು ಕಳೆದರೂ ಈ ಯೋಜನೆ ಆರಂಭವಾಗಿರಲಿಲ್ಲ. ಹೀಗಾಗಿರೈತರು ಸಹ ಈ ಯೋಜನೆ ಅನುಷ್ಠಾನಗೊಳ್ಳುತ್ತದೆಯೋ ಇಲ್ಲವೋ ಎಂಬ ಸಂಶಯದಲ್ಲಿದ್ದರು. ಆದರೀಗ ಈ ತಿಂಗಳ ಅಂತ್ಯದವರೆಗೆ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ಅವಕಾಶವಿದೆ. ಕಳೆದ ಬಾರಿಯಂತೆ ಪಡೆದ ಬೆಳೆಸಾಲದ ಶೇ. 5.ರಷ್ಟು ಕಂತು ರೂಪದಲ್ಲಿ ಭರಣ ಮಾಡಬೇಕಿದೆ.

Insure these horticulture crops  ತೋಟಗಾರಿಕೆ ಬೆಳೆಗೆ ಎಷ್ಟು ಪಾವತಿಸಬೇಕು ವಿಮಾ ಮೊತ್ತ ಎಷ್ಟಿರುತ್ತದೆ? ಚೆಕ್ ಮಾಡಿ

ರೈತರು ತಮ್ಮ ಊರಿಂದ ಯಾವ ಯಾವ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ಎಷ್ಟು ವಿಮೆಹಣ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/Premium/Premium_Chart.aspx

ಲಿಂಕ್ ಮೇಲೆ  ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಲೂಕು, ಹೋಬಳಿ ಊರು ಆಯ್ಕೆ ಮಾಡಿಕೊಂಡು ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಎಕರೆ ನಮೂದಿಸಿ ಶೋ ಪ್ರಿಮಿಯಂ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ದ್ರಾಕ್ಷಿಗೆ ಪ್ರತಿ ಎಕರೆಗೆ 5600 ರೂಪಾಯಿ ಪಾವತಿಸಬೇಕು. ದಾಳಿಂಬೆ ಗೆ 2540 ರೂಪಾಯಿ ಪಾವತಿಸಬೇಕು. ರೈತರಿಗೆ 51396 ವಿಮಾ ಮೊತ್ತ ಆಗಿರುತ್ತದೆ. ಅದೇ ರೀತಿ ಪಪ್ಪಾಯಿಗೆ 2680 ರೂಪಾಯಿ ರೈತರು ಪಾವತಿಸಬೇಕು.

ಕಾಳು ಮೆಣಸು ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 47 ಸಾವಿರ ರೂಪಾಯಿ ಆಗಿರುತ್ತದೆ. ರೈತರು ಪಾವತಿಸಬೇಕಾಗಿರುವ ಪ್ರಿಮಿಯಂ ಮೊತ್ತ 2350 ಆಗಿದೆ. ಅಡಕೆ ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 1,28,000 ರೂಪಾಯಿ ಆಗಿರುತ್ತದೆ. ರೈತರು ಪಾವತಿಸಬೇಕಾದ ಮೊತ್ತ 6400 ರೂಪಾಯಿ ಆಗಿದೆ.

ಅಡಕೆಗೆ ಎಕರೆಗೆ 2560 ರೂಪಾಯಿ ಪಾವತಿಸಬೇಕು. ಕಾಳುಮೆಣಸಿಗೆ ಎಕರೆಗೆ ಕೇವಲ 840 ರೂಪಯಿ ಪಾವತಿಸಬೇಕು.ಅದೇ ರೀತಿ ಹೊಸದಾಗಿ ಸೇರ್ಪಡೆಯಾದ ಮಾವಿಗೆ ಎಕರೆಗೆ 1600 ಪಾವತಿಸಬೇಕು. ವಿಮಾ ಮೊತ್ತ 32376 ರೂಪಾಯಿ ಆಗಿರುತ್ತದೆ. ಹಾಗೂ ಶುಂಠಿಗೆ ಎಕರೆಗೆ 2600 ರೂಪಾಯಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ ಜುಲೈ 27 ರಂದು ಪಿಎಂ ಕಿಸಾನ್ 14ನೇ ಕಂತಿನ ಹಣ ರೈತರ ಖಾತೆಗೆ ಜಮೆ ಯಾರಿಗೆ ಜಮೆಯಾಗಲಿದೆ ಚೆಕ್ ಮಾಡಿ

ಆಸಕ್ತ ರೈತರು ಪ್ರಸಕ್ತ ಸಾಲಿನ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಪುಸ್ತಕದ ಪ್ರತಿಯೊಂದಿಗೆ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಬ್ಯಾಂಕುಗಳಲ್ಲಿ ಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಬಹುದು.

Leave a Comment