ಜುಲೈ 31 ರೊಳಗೆ ಈ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶ: ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

ಜುಲೈ 31 ರೊಳಗೆ ಯಾವ ಯಾವ ತೋಟಗಾರಿಕೆ, ತರಕಾರಿ ಹಾಗೂ ಇತರ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಮುಂಗಾರು ಹಂಗಾಮಿಗೆ ಕೆಲವು ಬೆಳೆಗಳಿಗೆ ವಿಮೆ ಮಾಡಿಸಲು ಇನ್ನ ಕೇವಲ 10 ದಿನ ಮಾತ್ರ ಉಳಿಯಿತು. ಈ ಬೆಳೆಗಳಿಗೆ ಹತ್ತು ದಿನದಲ್ಲಿ ವಿಮೆ ಮಾಡಿಸಿದರೆ ಮಾತ್ರ ನೀವು ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದು. ಬೆಳೆ ವಿಮೆಯ ಕೊನೆಯ ದಿನಾಂಕದ ನಂತರ ನಿಮ್ಮ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಹಾಳಾದರೂ ನಿಮಗೆ ವಿಮೆಯ ಹಣ ಜಮೆಯಾಗುವುದಿಲ್ಲ. ಹಾಗಾಗಿ ಜುಲೈ 31 ರೊಳಗೆ ನೀವು ನಿಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದು. ಹಾಗಾದರೆ ನಿಮ್ಮಊರಿನಲ್ಲಿ ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದೆಂಬುದನ್ನು ಚೆಕ್ ಮಾಡೋಣವೇ.. ಇಲ್ಲಿದೆ ಚೆಕ್ ಮಾಡುವ ವಿಧಾನ.

ಜುಲೈ 31 ರೊಳಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? ಹೀಗೆ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದೆಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಫಾರ್ಮರ್ಸ್ ಕಾಲಂ ಕೆಳಗಡೆ View cut off dates ಮೇಲೆ ಕ್ಲಿಕ್ ಮಾಡಬೇಕು ಅಥವಾ ಈ

https://samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನೀವು31 ರೊಳಗೆ ಯಾವ ಯಾವ ಬೆಳೆಗಳಿಗೆ ವಿಮೆಮಾಡಿಸಬಹುದು ಎಂಬುದನ್ನು ಚೆಕ್ ಮಾಡಬಹುದು.

ಉದಾಹರಣೆಗೆ ನೀವು ಯಾದಗಿರಿ ಜಿಲ್ಲೆಯವರಾಗಿದ್ದರೆ ತೊಗರಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹತ್ತಿ, ದ್ರಾಕ್ಷಿ, ಪರಂಗಿ (ಪಪ್ಪಾಯ), ದಾಳಿಂಬೆ, ಈರುಳ್ಳಿ, ಮುಸುಕಿನ ಜೋಳ, ಸಜ್ಜೆ, ಜೋಳ ಹಾಗೂ ಸಾವೆ ಬೆಳೆಗಳಿಗೆ ಜುಲೈ 31 ರೊಳಗೆ ವಿಮೆ ಮಾಡಿಸಲು ಅವಕಾಶವಿದೆ.

ಅದೇ ರೀತಿ ನೀವು ಮೈಸೂರುಜಿಲ್ಲೆಯವರಾಗಿದ್ದರೆ ಹತ್ತಿ, ಮುಸುಕಿನ ಜೋಳ, ರಾಗಿ, ಅರಿಶಿಣ ಬೆಳೆಗಳಿಗೆ ಮಾತ್ರ ಜುಲೈ 31 ರೊಳಗೆ ವಿಮೆ ಮಾಡಿಸಬಹುದು.

ಇದನ್ನೂ ಓದಿ : ಈ ಪಟ್ಟಿಯಲ್ಲಿರುವವರಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ- ಚೆಕ್ ಮಾಡಿ ಅರ್ಜಿ ಸಲ್ಲಿಸಿ

ಹೀಗೆ ಬೆಳೆ ವಿಮೆ ಮಾಡಿಸುವ ಕೊನೆಯ ದಿನಾಂಕ ಜಿಲ್ಲೆಯಿಂದ ಜಿಲ್ಲೆಗೆ ಭಿನ್ನವಾಗಿರುತ್ತದೆ. ಬೆಳೆಗಳ ವಿಮೆಯೂ ಸಹ ಎಲ್ಲಾ ಜಿಲ್ಲೆಗಳಿಗೆ ಒಂದೇ ಆಗಿರುವುದಿಲ್ಲ. ಹೀಗಾಗಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಯಾವ ಯಾವ ಬೆಳೆಗಳಿಗೆ ಜುಲೈ 31 ರೊಳಗೆ ವಿಮೆ ಪಾವತಿಸಬಹುದು ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಹಣ ಎಲ್ಲಿ ಪಾವತಿಸಬೇಕು?

2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ವಿಮೆಯನ್ನು ಬೆಳೆ ಸಾಲ ಪಡೆಯದ ರೈತರು ಹತ್ತಿರದ ಬ್ಯಾಂಕುಗಳಲ್ಲಿ ಅಥವಾ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಾವತಿಸಬಹುದು. ನಿಮ್ಮಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಸ್ವಯಂ ಘೋಷಿತ ಬೆಲೆ  ಪ್ರಮಾಣ ಪತ್ರ ಸಲ್ಲಿಸಬೇಕು.

ರೈತರು ಫಸಲ್ ಬಿಮಾ ಯೋಜನೆಯಡಿ ನಿಗದಿತ ಕಾಲಮಿತಿಯೊಳಗೆ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ನಿರ್ಧಿಷ್ಟ ಪ್ರಕೃತಿ ವಿಕೋಗಳಾದ ಮಳೆ ಮತ್ತು ಮೇಘ ಸ್ಪೋಟ, ಪ್ರವಾಹ, ಅತೀವೃಷ್ಟಿ, ಅನಾವೃಷ್ಟಿ, ಭೂ ಕುಸಿತ, ಗುಡುಗು ಸಿಡಿಲಿನಿಂದಾಗ ಬೆಂಕಿ ಅವಘಡಕ್ಕೆ ಒಳಗಾಗಿ ಬೆಳೆ ಹಾಳಾದರೆ ಬೆಳೆ ವಿಮೆಗೆ ದೂರು ಸಲ್ಲಿಸಬಹುದು. ಬೆಳೆ ಹಾಳಾದ 72 ಗಂಟೆಯೊಳಗೆ ನಿಮ್ಮ ಜಿಲ್ಲೆಯ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿರೈತರು ಸಮೀಪದ ತೋಟಗಾರಿಕೆ ಇಾಖೆ, ಸಹಾಯಕ ಕೃಷಿ ನಿರ್ದೇಶಕ ಕಚೇರಿ, ಕೃಷಿ ಇಲಾಖೆ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸಬಹುದು.

Leave a Comment