ಈ ಪಟ್ಟಿಯಲ್ಲಿರುವವರಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ- ಚೆಕ್ ಮಾಡಿ ಅರ್ಜಿ ಸಲ್ಲಿಸಿ

Written by Ramlinganna

Published on:

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ  ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಯಾರಿಗೆ ಗೃಹಲಕ್ಷ್ಮೀ ಭಾಗ್ಯ ಸಿಗಲಿದೆ? ಇಲ್ಲೇ ಚೆಕ್ ಮಾಡಿ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಗ್ಯಾರೆಂಟಿ ಯೋಜನೆ ಸಹ ಒಂದಾಗಿದೆ.  ಗೃಹಲಕ್ಷ್ಮೀ ಯೋಜನೆಗೆ ಇಂದು ಸಾಯಂಕಾಲ 5.30 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾಲನೆ ನೀಡಲಿದ್ದಾರೆ.

ಯೋಜನೆಯ ಲಾಭ ಪಡೆಯಲು ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಮನೆಯೊಡತಿ ಅರ್ಜಿ ಸಲ್ಲಿಸಬಹುದು. ಹೌದು, ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾರ್ಯಾರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು. ಅರ್ಹ ಫಲಾನುಭವಿಗಳ ಖಾತೆಗೆ ಮುಂದಿನ ತಿಂಗಳು ಆಗಸ್ಟ್ ನಿಂದ ಪ್ರತಿ ತಿಂಗಳು 2 ಸಾವಿರ ರೂಪಾಯಿಯನ್ನು ನೇರವಾಗಿ ಡಿಬಿಟಿ ಮೂಲಕ ಜಮೆ ಮಾಡಲಾಗುವುದು.

ಗೃಹಲಕ್ಷ್ಮೀ ಯೋಜನೆಗೆ ಗೃಹ ಜ್ಯೋತಿ ಯೋಜನೆ ಮಾದರಿಯಲ್ಲಿಯೇ ಆನ್ನ್ಲೈನ್ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಬದಲಿಗೆ ಸರ್ಕಾರ ನಿಗದಿಪಡಿಸಿರುವ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು.

ಗೃಹಲಕ್ಷ್ಮೀ ಯೋಜನೆಗೆ ಬೇಕಾಗಿರುವ ದಾಖಲೆಗಳು ಯಾವುವು?

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಯಸುವವರ ಬಳಿ ಆಧಾರ್ ಕಾರ್ಡ್ ಇರಬೇಕು. ಪಡಿತರ ಚೀಟಿ ಇರಬೇಕು. ಪತಿ ಹಾಗೂ ಪತ್ನಿ ಇಬ್ಬರ ಆಧಾರ್ ಕಾರ್ಡ್ ಪ್ರತಿ ನೀಡಬೇಕು. ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಬೇಕಾದರೆ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಇರಬೇಕು. ನೋಂದಣಿ ಮಾಡಿದ ಬಳಿಕ ಸ್ಥಳದಲ್ಲಿಯೇ ಮುಂಜೂರಾತಿ ಪತ್ರ ನೀಡಲಾಗುವುದು. ಒಂದು ವೇಳೆ ಪ್ರಜಾಪ್ರತಿನಿಧಿಗಳ ಮೂಲಕ ನೋಂದಣಿ ಮಾಡಿಸಿಕೊಂಡರೆ ನಿಧಾನವಾಗಿ ಮನೆಗೆ ಮಂಜೂರಾತಿ ಪತ್ರ ತಲುಪಿಸಲಾಗುವುದು.

ಪಟ್ಟಿಯಲ್ಲಿ  ಹೆಸರು ಚೆಕ್ ಮಾಡುವುದು ಹೇಗೆ?

ಗೃಹಲಕ್ಷ್ಮೀಗೆ ಯಾರ್ಯಾರು ಅರ್ಹರು ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ ನಂತರ ಹಳ್ಳಿಪಟ್ಟಿ (ವಿಲೇಜ್ ಲಿಸ್ಟ್) ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ನೋಂದಣಿ ಎಲ್ಲಿ ಮಾಡಿಸಬೇಕು?

ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಪ್ರದೇಶದವರು ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಮೊಬೈಲ್ ನಲ್ಲಿ ಸ್ವತಃ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ.

ನೋಂದಣಿ ಯಾವಾಗ ಎಲ್ಲಿ ಮಾಡಿಸಬೇಕು?

ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಮನೆಯೊಡತಿಗೆ ಅವರು ನೀಡಿರುವ ಮೊಬೈಲ್ ನಂಬರ್ ಗೆ ನೋಂದಣಿ ಮಾಡಬೇಕಾದ ದಿನಾಂಕ ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರವನ್ನು ಸಂದೇಶ ರವಾನಿಸಲಾಗುವುದು.

ಇದನ್ನೂ ಓದಿ  ಇನ್ನೂ ಮುಂದೆ ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಬೆಳೆ ವಿಮೆ, ಬೆಳೆ ಹಾನಿ ಜಮೆ ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಿ

ಅಲ್ಲಿ ಹೋಗಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು.

ಗೃಹಲಕ್ಷ್ಮೀ ಯೋಜನೆಗೆ ಯಾರು ಯಾರು ಅರ್ಹರಾಗಿರುತ್ತಾರೆ?

ಗೃಹಲಕ್ಷ್ಮೀ ಯೋಜನೆಗೆ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅಥವಾ ಜಿಎಸ್ಟಿ ರಿಟರ್ನ್ಸ್ಸಲ್ಲಿಸುವವರಾಗಿದ್ದರೆ ಅವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಜೊತೆಗೆ ಪಡಿತರ ಚೀಟಿಯಲ್ಲಿ ಒಬ್ಬರಿಗಿಂತ ಹೆಚ್ಚು ಯಜಮಾನರಿದ್ದರೆ ಅವರಿಗೂ ಈ ಯೋಜನೆ ಅನ್ವಯವಾಗುವುದಿಲ್ಲ.

ಬಿಪಿಎಸ್ ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದರೂ ಮೇಲಿನ ಸೌಲಭ್ಯ ಅಂದರೆ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಹಾಗೂ ಜಿಎಸ್.ಟಿ ರಿಟರ್ನ್ಸ್ ಸಲ್ಲಿಸುವರಾಗಿದ್ದರೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಜಮೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಗೃಹ ಲಕ್ಷ್ಮೀ ಕುರಿತಂತೆ ಹೆಚ್ಚಿನ ಮಾಹಿತಿ  ಪಡೆಯಲು 1902 ಗೆ ಕರೆ ಮಾಡಬಹುದು. ಇದಲ್ಲದೆ 8147500500 ಗೂ ಕರೆ ಮಾಡಿ ವಿಚಾರಿಸಬಹುದು. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಇಂದು ಸಾಯಂಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ ನಂತರ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

Leave a Comment