ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಬೆಳೆ ವಿಮೆ

Written by Ramlinganna

Updated on:

Farmer will received insurance money ಮುಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆಯನ್ನು ಮಾಡಿದರೆ ಮಾತ್ರ ಇನ್ನೂ ಮುಂದೆ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುವುದು. ಹೌದು, ರೈತರು ತಮ್ಮ ಬೆಳೆಗಳಿಗೆ ಸಮೀಕ್ಷೆ ಮಾಡಬೇಕು. ಇದನ್ನೂ ರೈತರು ಮೊಬೈಲ್ ನಲ್ಲೇ ಮಾಡಬಹುದು. ಅಥವಾ ಬೆಳೆ ಸಮೀಕ್ಷೆಗೆ ನೇಮಿಸಿದ ಖಾಸಗಿ ವ್ಯಕ್ತಿಗಳಿಂದಲೂ ಸಮೀಕ್ಷೆ ಮಾಡಬಹುದು. ತನ್ನ ಮೊಬೈಲ್ ನಲ್ಲೆ ಬೆಳೆ ಸಮೀಕ್ಷೆ ಮಾಡಲು ಯಾರ ಸಹಾಯವೂ ಇಲ್ಲದೆ ಬೆಳೆ ಸಮೀಕ್ಷೆ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Farmer will received insurance money ಬೆಳೆ ಸಮೀಕ್ಷೆ ಯಾವ ಯಾವ ಯೋಜನೆಗಳಿಗೆ ಕಡ್ಡಾಯವಾಗಿದೆ?

ರೈತರು ತಮ್ಮ ಬೆಳೆ ಸಮೀಕ್ಷೆ ಮಾಡುವುದರಿಂದ ಹಲವಾರು ಉಪಯೋಗಗಳಿವೆ. ಮೊದಲನೇಯದಾಗಿ  ಬೆಳೆ ವಿಮೆಗೆ ನೋಂದಣಿ ಮಾಡಿಸಿದ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಬೇಕು.ಇಲ್ಲವಾದಲ್ಲಿ ಬೆಳೆ ವಿಮಾ ಅರ್ಜಿ ತಿರಸ್ಕೃತವಾಗುವ ಸಾಧ್ಯತೆಯಿದೆ. ಬೆಳೆ ವಿಮೆ ಹಣ ಜಮೆಯಾಗಲು ಸಮಸ್ಯೆಯಾಗಬಹುದು.

ಸರ್ಕಾರದಿಂದ ಅತೀವೃಷ್ಟಿ, ಅಥವಾ ಅನಾವೃಷ್ಟಿಯಿಂದಾಗಿ ಬೆಳೆ ಹಾನಿಯಾದಾಗ ಪರಿಹಾರ ಘೋಷಣೆ ಮಾಡಲಾಗುವುದು. ಆಗ ರೈತರಿಗೆ ಬೆಳೆ ಹಾನಿ ಪರಿಹಾರ ಪಡೆಯಲು ಬೆಳೆ ಸಮೀಕ್ಷೆಯಾಗಿರಬೇಕು. ರೈತರಿಗೆ ಬೆಳೆವಾರು ಪರಿಹಾರ ಮೊತ್ತ ಘೋಷಣೆ ಮಾಡಲಾಗಿರುತ್ತದೆ. ಆಗ ರೈತರ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಆಗಿರಬೇಕು.

ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುವುದು. ಈ ಸಂದರ್ಭದಲ್ಲಿಯೂ ಬೆಳೆ ಸಮೀಕ್ಷೆಯಾಗಿರಬೇಕು. ಇದರೊಂದಿಗೆ ವಿವಿಧ ಬ್ಯಾಂಕುಗಳಲ್ಲಿ ರೈತರು ಬೆಳೆ ಸಾಲ ಪಡೆಯುವಾಗ ಸಹ ಬೆಳೆ ಸಮೀಕ್ಷೆಯಾಗಿರುವುದನ್ನು ಚೆಕ್ ಮಾಡಲಾಗುವುದು.

ಇದನ್ನೂಓದಿ : ಈ ಪಟ್ಟಿಯಲ್ಲಿರುವವರಿಗೆ ಅನ್ನಭಾಗ್ಯದ ಹಣ ಜಮೆ- ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಕಳೆದ ವರ್ಷ ಕಲಬುರಗಿ, ಬೀದರ್. ರಾಯಚೂರು, ಯಾದಗಿರಿ ಜಿಲ್ಲೆಯ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಹಾಳಾಗಿತ್ತು. ಈ ರೈತರಿಗೆ ಪ್ರತಿ ಹೆಕ್ಟೇರಿಗೆ 10 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಯಿತು. ಆದರೆ ಯಾವ ರೈತರು ಬೆಳೆ ಸಮೀಕ್ಷೆ ಮಾಡಿರುತ್ತಾರೋ ಆ ರೈತರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಹಾಗಾಗಿ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಿಸಬೇಕು.

ರತೈರು ಸ್ವತಃ ಬೆಳೆ ಸಮೀಕ್ಷೆ ಮಾಡದಿದ್ದರೆ ಸರ್ಕಾರದ ಖಾಸಗಿ ಸಮೀಕ್ಷೆಗಾರರ ಮೂಲಕವೂ ಸಮೀಕ್ಷೆ ಮಾಡಿಸಬಹುದು. ಬೆಳೆ ಸಮೀಕ್ಷೆ ಮಾಡುವಾಗ ಸರ್ವೆ ನಂಬರ್, ಹಿಸ್ಸಾ ನಂಬರ್ ನಮೂದಿಸುವುದನ್ನು ಮರೆಯಬಾರದು.

ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಬೇಕಾದರೆ ಈ

https://play.google.com/store/apps/details?id=com.csk.farmer23_24.cropsurvey

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಂಗಾರು ರೈತರ ಬೆಳೆ ಸಮೀಕ್ಷೆ 2023 ಆ್ಯಪ್ ಓಪನ್ ಆಗುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು. ನಂತರ Open ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಬೆಳೆ ಸಮೀಕ್ಷೆ ಮಾಡಬೇಕಾಗುತ್ತದೆ.

ಬೆಳೆ ಸಮೀಕ್ಷೆ ಮಾಡುವಾಗ ಯಾವ ಯಾವ ಮಾಹಿತಿ ಭರ್ತಿ ಮಾಡಬೇಕು?

ರೈತರು ತಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವಾಗ ಆಧಾರ್ ಕಾರ್ಡ್, ಮೊಬೈಲ್ ನಂಬರ್ ನಮೂದಿಸಬೇಕಾಗುತ್ತದೆ. ಜಿಲ್ಲೆ, ತಾಲೂಕು, ಹೋಬಳಿ  ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಬೆಳೆಗಳ ಛಾಯಾಚಿತ್ರ ತೆಗೆದು ಅಪ್ಲೋಡ್ ಮಾಡಲೇಬೇಕು. ಬೆಳೆ ವಿವರ ಅಂದರೆ ಯಾವ ಬೆಳೆ ಬಿತ್ತಲಾಗಿದೆ ಎಂಬುದನ್ನು ನಮೂದಿಸಬೇಕು. ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್ ಹಾಗೂ ಎಷ್ಟು ಎಕರೆ ಜಮೀನಿನಲ್ಲಿ ಯಾವ ಬೆಳೆ ಬಿತ್ತಲಾಗಿದೆ ಎಂಬುದನ್ನು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕಿ ಕೇಂದ್ರಕ್ಕೆ ಭೇಟಿ ನೀಡಬಹುದು.

Leave a Comment