ಇಂದು ಈ ಪಟ್ಟಿಯಲ್ಲಿರುವವರಿಗೆ ಅನ್ನಭಾಗ್ಯದ ಹಣ ಜಮೆ

Written by Ramlinganna

Updated on:

Annabhagya beneficiary list ರಾಜ್ಯದ ಪಡಿತರ ಚೀಟಿ ಹೊಂದಿರುವವರ ಖಾತೆಗೆ  ಇಂದು ಅನ್ನಭಾಗ್ಯದ ಯೋಜನೆಯಡಿ ಹಣ ವರ್ಗವಣೆ ಮಾಡಲಾಗುವುದು. ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲವೋ ಇಲ್ಲೇ ಚೆಕ್ ಮಾಡಿ.

ಹೌದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ ಇಂದು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು.

Annabhagya beneficiary list ಅನ್ನಭಾಗ್ಯದ ಯೋಜನೆ ಫಲಾನುಭವಿಗಳ ಹೆಸರು ಚೆಕ್ ಮಾಡುವುದು ಹೇಗೆ?

ಅನ್ನಭಾಗ್ಯದ ಯೋಜನೆಯಡಿ ರ್ಯಾರಾರು ಬರುತ್ತಾರೆ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೇಶನ್ ಕಾರ್ಡ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ಇ ಪಡಿತರ ಚೀಟಿ (e Ration Card) ಮೇಲೆ ಕ್ಲಿಕ್ ಮಾಡಬೇಕು. ನಂತರ ಕೆಳಗಡೆ ಕಾಣುವ ಹಳ್ಳಿಪಟ್ಟಿ (Show village list) ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಅಲ್ಲ ನಿಮ್ಮ ಊರಿನಲ್ಲಿ ಯಾರು ಯಾರು ರೇಶನ್ ಕಾರ್ಡ್ ಹೊಂದಿದ್ದಾರೆ ಅವರ ಹೆಸರು ಕಾಣಿಸುತ್ತದೆ.

ಅಲ್ಲಿ ನಿಮ್ಮ ಕಾರ್ಡ್ ಯಾವ ಪ್ರಕಾರದ್ದಾಗಿದೆ ಎಂಬುದನ್ನು ಬರೆಯಲಾಗಿರುತ್ತದೆ.ಅಂತ್ಯೋದಯ ಕಾರ್ಡ್ ಹಾಗೂ ಪ್ರಿಯಾರಿಟಿ ಹೋಸ್ ಹೌಲ್ಡ್ ಎಂದು ಬರೆಯಲಾಗಿರುತ್ತದೆ. ಇವರಿಗೆ ಹಣ ಜಮೆಯಾಗುವ ಸಾಧ್ಯತೆಯಿದೆ.

ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬದವರಿಗೆ ಜಮೆಯಾಗಲಿದೆ ಹಣ

ಅನ್ನಭಾಗ್ಯ ಯೋಜನೆ ಅಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬದ ಸದಸ್ಯರಿಗೆ ಪ್ರಸ್ತುತ ವಿತರಿಸುತ್ತಿರುವ 5 ಕೆ.ಜಿ ಅಕ್ಕಿ ಜತೆಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಅಕ್ಕಿ ಲಭ್ಯವಾಗದ ಕಾರಣ ಪ್ರತಿ ವ್ಯಕ್ತಿಗೆ (5 ಕೆ.ಜಿ. ಅಕ್ಕಿ ದರ) ತಿಂಗಳಿಗೆ 170 ರೂಪಾಯಿಗಳಂತೆ ಕುಟುಂಬ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಹೌದು, ಇಂದು ಸೋಮವಾರ ಸಾಯಂಕಾಲ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಈ ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗೆ ಏಕಕಾಲದಲ್ಲಿ ಹಣ ಜಮಗೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ : ಬೆಳೆ ವಿಮೆ ಹಣ ಜಮೆಯಾಗಲು ರೈತರೇನು ಮಾಡಬೇಕು? ಇಲ್ಲಿದೆ ಮಾಹಿತಿ

ನಗದು ರೂಪದಲ್ಲಿ ಇಱದೆ ಹಣವು ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುವುದು. ಕುಟುಂಬದ ಮುಖ್ಯಸ್ಥರ ಖಾತೆಗೆ ಅಂದರೆ ಆ ಕುಟುಂಬದ ಸದಸ್ಯರನುಸಾರವಾಗಿ ಜಮೆ ಮಾಡಲಾಗುವುದು.

ಅಂತ್ಯೋದಯ ಅನ್ನ ಯೋಜನೆ (ಎಎವೈ) ಬಿಪಿಎಲ್  ಪಡಿತರ ಚೀಟಿ ಹೊಂದಿರುವವರ ಕುಟುಂಬದ ಮುಖ್ಯಸ್ಥರ ಖಾತೆಗಳ ಮಾಹಿತಿಯನ್ನು ಈಗಾಗಲೇ ಪಡೆಯಲಾಗಿದೆ. ಸೋಮವಾರದಿಂದ ಜುಲೈ ತಿಂಗಳ ಕಂತಿನ ಙಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಅನ್ನಭಾಗ್ಯದ ಹಣ ಯಾರು ಯಾರಿಗೆ ಸಿಗಲಿದೆ?

ಅನ್ನಭಾಗ್ಯದ ಯೋಜನೆಯಡಿಯಲ್ಲಿ ನೋಂದಾಯಿಸಿದ ಫಲಾನುಭವಿಗಳು ಅಂದರೆ ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಸಿಗಲಿದೆ. 4 ಕ್ಕಿಂತ ಹೆಚ್ಚು ಜನರಿರುವ ಅಂತ್ಯೋದಯ ಕುಟುಂಬಗಳಿಗೆ ಈ ಭಾಗ್ಯ ಸಿಗಲಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಸೂಚಿಸಿದವರ ಖಾತೆಗೆ ಜಮೆ ಮಾಡಲಾಗುವುದು. ಆಧಾರ್ ಲಿಂಕ್ ಮಾಡಿಸಿ ಸಕ್ರಿಯವಾಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು.

ಅನ್ನಭಾಗ್ಯದ ಹಣ ಯಾರು ಯಾರಿಗೆ ವರ್ಗಾವಣೆಯಾಗುವುದಿಲ್ಲ?

ಅನ್ನಭಾಗ್ಯದ ಹಣ ಎಪಿಎಲ್, 3 ಕ್ಕಿಂತ ಕಡಿಮೆ ಜನರಿರುವ ಅಂತ್ಯೋದಯ ಕಾರ್ಡುದಾರರಿಗೆ ಹಣ ಜಮೆಯಾಗುವುದಿಲ್ಲ. ಕಳೆದ 3 ತಿಂಗಳಿಂದ ಪಡಿತರ ಅಂಗಡಿಯಿಂದ ಧಾನ್ಯ ಪಡೆಯದವರಿಗೂ ಹಣ ಜಮೆಯಾಗುವುದಿಲ್ಲ. ಕುಟುಂಬದ ಮುಖ್ಯಸ್ಥರ ಸೂಚಿಸಿದವರು 1 ಕ್ಕಿಂತ ಹೆಚ್ಚು ಮುಖ್ಯಸ್ಥರಿರುವರಿಗೂ ಹಣ ವರ್ಗಾವಣೆಯಾಗುವುದಿಲ್ಲ.

Leave a Comment