ಪಿಎಂ ಕಿಸಾನ್ ಹಣ ಜಮೆಯಾಗಬೇಕಾದರೆ ಈ ಕೆಲಸ ಮಾಡಿ

Written by Ramlinganna

Updated on:

If you want PM Kisan money do these work ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಎರಡು ದಿನ ಕಾಲಾವಕಾಶವಿದೆ.ಈ ಎರಡು ದಿನಗಳಲ್ಲಿ ಇಕೆವೈಸಿ ಮಾಡಿಸಿದರೆ ಮಾತ್ರ ಮುಂದಿನ ಕಂತು ನಿಮ್ಮ ಖಾತೆಗೆ ಜಮೆಯಾಗುತ್ತದೆ.

ಹೌದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರು ಇ-ಕೆವೈಸಿ ಮಾಡಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಈ ಯೋಜನೆಯಡಿಯಲ್ಲಿ ನೋಂದಾಯಿಸಿರುವರೈತರು ಇಕೆವೈಸಿ ಮಾಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇಲ್ಲದಿದ್ದರೆ ಪಿಎಂ ಕಿಸಾನ್ ಯೋಜನೆಯ ಸಹಾಯಧನ ಕಡಿತವಾಗಲಿದೆ. ಪಿಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲಿಗೆ ಓಟಿಪಿ ಪಡೆದು ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ಮೂಲಕವೂ ಇ-ಕೆವೈಸಿ ಮಾಡಿಸಬಹುದು.

ರೈತರು ಒಂದು ವೇಳೆ ಇಕೆವೈಸಿ ಮಾಡಿಸದಿದ್ದರೆ ಕೇವಲ ಪಿಎಂ ಕಿಸಾನ್ ಯೋಜನೆಯ ಸಹಾಯಧನ ಅಷ್ಟೇ ಅಲ್ಲ  ರಾಜ್ಯ ಸರ್ಕಾರದಿಂದ ನೀಡುವ 4 ಸಾವಿರ ರೂಪಾಯಿಯ ಸಹಾಯಧನವೂ ಕಡಿತವಾಗುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಯೋಜನೆಯಡಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ಉತ್ತಮ ಕೃಷಿ ಪರಿಕರಗಳನ್ನು ಬಳಸಲು ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ 10 ಸಾವಿರ ರೂಪಾಯಿ (ಕೇಂದ್ರ ಸರ್ಕಾರದ 6 ಸಾವಿರ, ರಾಜ್ಯ ಸರ್ಕಾರದ 4 ಸಾವಿರ ರೂಪಾಯಿ) ಜಮೆ ಮಾಡಲು ಇಕೆವೈಸಿ ಕಡ್ಡಾಯವಾಗಿದೆ.

ಈ ಯೋಜನೆಯಡಿಯಲ್ಲಿ ನೋಂದಾಯಿತರಾಗಿರುವ ರೈತರು ಹಾಗೂ ಇನ್ನೂ ಹೊಸದಾಗಿ ನೋಂದಣಿ ಮಾಡುವವರು ಸಹ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹೀಗಾಗಿ ನೈಜ ಫಲಾನುಭವಿಗಳಿಗೆ ನೇರವಾಗಿ ರೈತರ ಖಾತೆಗೆ ಆರ್ಥಿಕ ನೆರವು ವರ್ಗಾವಣೆಯಾಗಬೇಕಾದರೆ ಇ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

If you want PM Kisan money do these work ರೈತರು ಇಕೆವೈಸಿ ಮೊಬೈಲ್ ನಲ್ಲಿಹೇಗೆ ಮಾಡಬೇಕು?

ರೈತರು ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸಲು

https://pmkisan.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಇಕೆವೈಸಿ ನ್ಯೂ ಬಾಕ್ಸ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ  ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ಒಂದು ವೇಳೆ ನೀವು ಇಕೆವೈಸಿ ಮಾಡಿಸಿದ್ದರೆ ಈಗಾಗಲೇ ನಿಮ್ಮ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಸಂದೇಶ ಕಾಣುತ್ತದೆ. ಇಲ್ಲದಿದ್ದರೆ ನೀವು ನಿಮ್ಮ ಆಧಾರ್ ಕಾರ್ಡ್ ನಮೂದಿಸಿದ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ.ಅದನ್ನು ನಮೂದಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಇಕೆವೈಸಿ ಏಕೆ ಕಡ್ಡಾಯಗೊಳಿಸಲಾಗಿದೆ?

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಲ್ಲದೆ ಸರ್ಕಾರಿ ನೌಕರರು, ತೆರಿಗೆ ಪಾವತಿಸುತ್ತಿರುವವರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ನಿಜವಾದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯ ಪ್ರಯೋಜನೆ ಸಿಗಲಿ ಎಂಬ ಉದ್ದೇಶದಿಂದ ಇಕೆವೈಸಿ ಕಡ್ಡಾಯಗೊಳಿಸಲಾಗಿದೆ. ಆದರೆ ಇನ್ನೂ ಬಹುತೇಕ ರೈತರು ಇಕೆವೈಸಿ ಮಾಡಿಸಿಲ್ಲ. ಈಗಾಗಲೇ ಎರಡು ಮೂರು ಹಂತಗಳಲ್ಲಿ ಇಕೆವೈಸಿ ಮಾಡಿಸುವದನ್ನು ಕಾಲಾವಕಾಶ ನೀಡಲಾಗಿತ್ತು. ಇನ್ನೂ ಮುಂದೆ ಮತ್ತೆ ಕಾಲಾವಕಾಶ ನೀಡುವ ಸಾಧ್ಯತೆ ಕಡಿಮೆಯಿರುವುದರಿಂದ ರೈತ ಬಾಂಧವರು ಉಳಿದ ಇನ್ನೆರಡು ದಿನಗಳಲ್ಲಿ ತಮ್ಮ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.

ಇದನ್ನೂ ಓದಿ  : ನಿಮ್ಮ ಮಕ್ಕಳಿಗೆ ಸ್ಕಾಲರಶಿಪ್ ಬಂದಿದೆಯೇ? ಮೊಬೈಲ್ ನಲ್ಲಿ ಹೀಗೆ ಸ್ಟೇಟಸ್ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ 6 ಸಾವಿರ ರೂಪಾಯಿ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ 4 ಸಾವಿರ ರೂಪಾಯಿ ಒಟ್ಟು 10 ಸಾವಿರ ರೂಪಾಯಿ ನೀಡಲಾಗುತ್ತದೆ. ಒಂದು ವೇಳೆ ನೀವು ಇಕೆವೈಸಿ ಮಾಡಿಸದಿದ್ದರೆ ಪ್ರತಿ ವರ್ಷ 10 ಸಾವಿರ ರೂಪಾಯಿ ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಬರುವುದಿಲ್ಲ. ಇನ್ನೆರಡೇ ದಿನ ಉಳಿದಿದೆ. ಇಂದೇ ಇಕೆವೈಸಿ ಮಾಡಿಸಿಕೊಳ್ಳಬಹುದು.

Leave a Comment