ಕಲಬುರಗಿ ಜಿಲ್ಲೆಯ ಹಳ್ಳಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಲೈಸನ್ಸ್/ ಪರವಾನಿಗೆ ಇಲ್ಲದೆ ಯಾವುದೇ ತರಹದ ಪರಿಕರಗಳು ಮಾರಾಟ ಮಾಡುವುದು ಕಂಡು ಬಂದಲ್ಲಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಅಧಿಕಾರಿಗಳಿಗೆ ತಕ್ಷಣವಾಗಿ ಮಾಹಿತಿ ನೀಡಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರಾದ ರಿತೇಂದ್ರನಾಥ ಸೂಗೂರು ಅವರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.

ರೈತರು ಲೈಸನ್ಸ್/ ಪರವಾನಿಗೆ ಇಲ್ಲದೇ ಇರುವ ಅಪರಿಚಿತ ವ್ಯಕ್ತಿಗಳಿಂದ ಬೀಜ, ರಸಗೊಬ್ಬರ, ಕೀಟನಾಶಕ   ಹಾಗೂ ಯಾವುದೇ ತರಹದ ಪರಿಕರಗಳನ್ನು ಖರೀದಿಸಬಾರದು. ರೈತರು ಪರವಾನಿಗೆ ಪಡೆದು ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ, ರಸಗೋಬ್ಬರ, ಕೀಟನಾಶಕ  ಪರಿಕರಗಳನ್ನು ಮಾತ್ರ ಖರೀದಿಸಿ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಅವಧಿ ಮೀರಿದ ಯಾವುದೇ ಪರಿಕರಗಳನ್ನು ಖರೀದಿಸಬಾರದು.

ರೈತರು ರಸಗೊಬ್ಬರ ಚೀಲದ ಮೇಲೆ ಮುದ್ರಿಸಿದ ದರವನ್ನು ಮಾತ್ರ ಪಾವತಿ ಮಾಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ  ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಬೇಕು.

ಕೃಷಿಗೆ ಸಂಬಂಧಿಸಿದ ಯಾವುದೇ ತರಹದ ಮಾಹಿತಿ ಬೇಕಾದಲ್ಲಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳಿಂದ ಪಡೆಯಬಹುದಾಗಿದೆ.

ತಾಲೂಕುವಾರು ಕೃಷಿ ಇಲಾಖೆಯ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದ್ದು, ವಿವರ ಇಂತಿದೆ ಅಫಜಲಪೂರ ಸಹಾಯಕ ಕೃಷಿ ನಿದೇಶಕರ ಮೊಬೈಲ್ ಸಂಖ್ಯೆ 8277931510, ಆಳಂದ ಸಹಾಯಕ ಕೃಷಿ ನಿದೇಶಕರ ಮೊಬೈಲ್ ಸಂಖ್ಯೆ-8277931512, ಚಿಂಚೋಳಿ ಸಹಾಯಕ ಕೃಷಿ ನಿರ್ದೇಶಕರ ಮೊಬೈಲ್ ಸಂಖ್ಯೆ 8277931514, ಚಿತ್ತಾಪೂರ ಸಹಾಯಕ ಕೃಷಿ ನಿರ್ದೇಶಕರ ಮೊಬೈಲ್ ಸಂಖ್ಯೆ 8277931517, ಕಲಬುರಗಿ ಸಹಾಯಕ ಕೃಷಿ ನಿರ್ದೇಶಕರ ಮೊಬೈಲ್ ಸಂಖ್ಯೆ 8277931508, ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರ ಮೊಬೈಲ್ ಸಂಖ್ಯೆ 8277931519 ಹಾಗೂ ಸೇಡಂ ಸಹಾಯಕ ಕೃಷಿ ನಿರ್ದೇಶಕರ ಮೊಬೈಲ್ ಸಂಖ್ಯೆ 8277931521. ಗೆ ಕರೆ ಮಾಡಿ ತಿಳಿಸಬಹುದು.

Leave a Reply

Your email address will not be published. Required fields are marked *