ಮಳೆಗೆ ಬೆಳೆ ಹಾಳಾದರೆ ಇಲ್ಲಿ ರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ

Written by By: janajagran

Updated on:

apply here to get compensation ರಾಜ್ಯದಲ್ಲಿ ಕಳೆದೆರಡು ವಾರಗಳಿಂದ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ರೈತರ ಅಪಾರ ಬೆಳೆ ಹಾಳಾಗುತ್ತಿದೆ. ಗುಡುಗು ಸಿಡಿಲಿನೊಂದಿಗೆ ಜೋರಾಗಿ ಬೀಸುತ್ತಿರುವ ಗಾಳಿಯಿಂದ ತೋಟಗಾರಿಕೆ ಬೆಳೆಯೊಂದಿಗೆ ಹಿಂಗಾರು ಬೆಳೆಗೆ ನಷ್ಟವಾಗುತ್ತಿದೆ. ಇದರಿದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಅಕಾಲಿಕ ಮಳೆಯಿಂದಾಗಿ ಬೆಳೆ ಹಾಳಾದ ರೈತರು ಸರ್ಕಾರದಿಂದ ಪರಿಹಾರ ಪಡೆಯಬಹುದು. ಈ ಕುರಿತಂತೆ ಕೃಷಿ ಸಚಿವ ಬಿ.ಸಿ ಪಾಟೀಲರು  ಅಕಾಲಿಕೆ ಮಳೆಗೆ ನಷ್ಟದ ವರದಿ ಸಲ್ಲಿಸಲು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕೃಷಿ ಅಧಿಕಾರಿಗಳು ತಮ್ಮ ಕಾರ್ಯಸ್ಥಾನದಲ್ಲಿರಬೇಕು. ಹಾನಿಗೊಳಗಾದ ಬೆಳೆಯ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕೆಂದು ಸೂಚಿಸಿದ್ದಾರೆ.

ಮಳೆ ಗಾಳಿಯಿಂದ ರೈತರ ಬೆಳೆ ನಾಶವಾಗಿದೆ. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಹೀಗಾಗಿ ರೈತರೂ ಸಹ ಬೆಳೆ ಹಾಳಾದ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕೆಂದು ಕರೆ ನೀಡಿದ್ದಾರೆ.

ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದರೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಹಣ ಪಡೆಯಬಹುದು. ಇದಕ್ಕಾಗಿ ರೈತರು ಯಾವ ವಿಮಾ ಕಂಪನಿಗೆ ವಿಮೆ ಕಟ್ಟಿರುತ್ತಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಮಾಹಿತಿ ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಪರಿಶೀಲನೆ ಮಾಡುತ್ತಾರೆ.  ಪ್ರಾಕೃತಿಕ ವಿಕೋಪಗಳಾ ನೈಸರ್ಗಿಕ ಬೆಂಕಿ, ಪರ ಪರಿಸ್ಥಿತಿ, ಬಿರುಗಾಳಿ, ಅಕಾಲಿಕ ಮಳೆ, ಪ್ರವಾಹದಿಂದಾಗಿ ಬೆಳೆ ಹಾಳಾದರೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ ಗ್ರಾಮವಾರು ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ಬೆಳೆ ವಿಮೆ ಮಾಡಿಸಿದ ರೈತರು ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಿದ್ದಾರೆಂಬುದರ ಕುರಿತು ರಶೀದಿ ಇರಬೇಕು. ವಿಮಾ ಕಂಪನಿಯವರಿಗೆ ಕರೆ ಮಾಡಿದಾಗ ಅವರು ಜಮೀನಿಗೆ ಬಂದು ಹಾಳಾದ ಬೆಳೆಯ ಕುರಿತು ಪರಿಶೀಲನೆ ನಡೆಸಿ ವಿಮಾ ಪರಿಹಾರಕ್ಕೆ ಸೂಚಿಸುವರು.

ರೈತರಿಗೆ ತಮ್ಮ ಜಿಲ್ಲೆಯ ವಿಮಾ ಕಂಪನಿಯ ಮೊಬೈಲ್ ನಂಬರ್ ಗೊತ್ತಿರದಿದ್ದರೆ 1800 180 1551 ಉಚಿತ ಸಹಾಯವಾಣಿಗೆ ಕರೆ ಮಾಡಬೇಕು. ಆಗ ಅವರು ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ನಂಬರ್ ಕೊಡುತ್ತಾರೆ. 72 ಗಂಟೆಯೊಳಗೆ ಕರೆ ಮಾಡಿ ಬೆಳೆ ನಷ್ಟದ ವರದಿ ನೀಡಬೇಕು.

ಬೆಳೆ ವಿಮೆ ಮಾಡಿಸದ ರೈತರಿಗೂ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಲು ಚಿಂತನೆ ನಡೆಸುತ್ತಿದೆ. ಹಾಗಾಗಿ ರೈತರು ತಮ್ಮ ಗ್ರಾಮ ಪಂಚಾಯತಿಗೆ ತೆರಳಿ ಯಾವ ಬೆಳೆ ಹಾಳಾಗಿದೆ. ಎಷ್ಟು ಎಕರೆ ಬೆಳೆ ಹಾಳಾಗಿದೆ. ಸರ್ವೆ ನಂಬರ್, ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಅರ್ಜಿ ಸಲ್ಲಿಸಬಹುದು.

apply here to get compensation ಬೆಳೆ ಪರಿಹಾರ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಬೆಳೆನಷ್ಟವಾದ ರೈತರು ಅರ್ಜಿ ಸಲ್ಲಿಸಿದ ನಂತರ ಪರಿಹಾರ ಹಣ ತಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ನೋಡಬಹುದು. ಹೌದು, ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು.

ಅತಿವೃಷ್ಟಿ ಅಥವಾ ಪ್ರವಾಹದಿಂದ ಬೆಳೆ ಹಾಳಾದರೆ Flood ಆಯ್ಕೆ ಮಾಡಿಕೊಳ್ಳಬೇಕು.  ಆಲಿಕಲ್ಲು ಅಥವಾ ಅಕಾಲಿಕ ಮಳೆಯಿಂದ ಬೆಳೆ ಹಾಳಾದರೆ Hailstorm or Heavy rains ಆಯ್ಕೆ ಮಾಡಿಕೊಳ್ಳಬೇಕು. ಯಾವ ವರ್ಷದ ಸ್ಟೇಟಸ್ ನೋಡಬೇಕೆಂದುಕೊಂಡಿದ್ದೀರೋ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ನಮೂದಿಸಿದ ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು, ಬೆಳೆ ಪರಿಹಾರ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಇಲ್ಲಿ ಕಳೆದ ವರ್ಷ ಮುಂಗಾರು, ಹಿಂಗಾರು ಬೆಳೆ ಹಾನಿಯಾಗಿದ್ದರೆ ಆ ಸಾಲಿನ ಸ್ಟೇಟಸ್ ಸಹ ಚೆಕ್ ಮಾಡಬಹುದು. ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸಾಲಿನ ವರ್ಷ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

Leave a Comment