ಬರಗಾಲ ಘೋಷಣೆ : ಯಾವ ರೈತರಿಗೆ ಎಷ್ಟು ಜಮೆ?

Written by Ramlinganna

Updated on:

drought declared in karnataka : ಮಳೆ ಅಭಾವದಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದರಿಂದ ರಾಜ್ಯದ 100 ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಿದರೆ ಯಾವ ರೈತರಿಗೆ ಎಷ್ಟು ಪರಿಹಾರ ಸಿಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದೆ. ವಾಸ್ತವಿಕ ಅಧ್ಯಯನದ ನಂತರ ರಾಜ್ಯದಲ್ಲಿ 100 ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲ ಪೀಡಿತವೆಂದು ಸೆಪ್ಟೆಂಬರ್ ಮೊದಲವಾರ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶೇ. 79 ರಷ್ಟು ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದಾಗಿ ಬಹುತೇಕ ಬೆಳೆಗಳು ಒಣಗುತ್ತಿವೆ. ಇನ್ನೊಂದು ವಾರದೊಳಗೆ ಮಳೆ ಬಂದರೆ ಶೇ. 50 ರಿಂದ 60 ರಷ್ಟು ಬೆಳೆ ಉಳಿಯಬಹುದು.ಆದರೆ ಮಳೆ ಬರುವ ಸಾಧ್ಯತೆ ತುಂಬಾ ಕಡಿಮೆಯಿದೆ.ಹಾಗಾಗಿ ಬಿತ್ತನೆ ಮಾಡಿದ ಬೆಳೆ ಕೈಗೆ ಬರುವ ನಿರೀಕ್ಷೆಗಳಿಲ್ಲ ಎಂದರು.

drought declared in karnataka ಬರಗಾಲ ಘೋಷಣೆಯಾದರೆ ಎಕರೆಗೆ ಎಷ್ಟು ಹಣ ನೀಡಬೇಕು?

ತಮಗೆಲ್ಲಾ ಗೊತ್ತಿದ್ದ ಹಾಗಿ ಪ್ರಸಕ್ತ ವರ್ಷ ಬಿತ್ತನೆಯಾದ ಕೆಲವು ಕಡೆ ಬೆಳೆ ಅಲ್ಲೇ ಕಮರಿಹೋಗಿದೆ. ಇನ್ನೊಂದು ಕಡೆ ಬೆಳೆ ಬಿತ್ತನೆಯೇ ಆಗಿಲ್ಲ ಹೀಗಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರವು ಬರಗಾಲವೆಂದು ಘೋಷಣೆ ಮಾಡಿದರೆ ಎಕರೆಗೆ ಎಷ್ಟು ಹರ ರೈತರಿಗೆ ನೀಡಬೇಕೆಂಬುದನ್ನು ರಿಪ್ಲೈ ಮಾಡಿ ತಿಳಿಸಿದರೆ ಸರ್ಕಾರದ ಗಮನಕ್ಕೆ ಬರುವ ಸಾಧ್ಯತೆಯಿದೆ. ಹಾಗಾಗಿ ರೈತರು ಇಲ್ಲೇ ಎಕರೆಗೆ ಎಷ್ಟು ಹಣ ನೀಡಬೇಕೆಂಬುದನ್ನು ಮೆಸೆಜ್ ಮಾಡಿ ತಿಳಿಸಲು ಕೋರಲಾಗಿದೆ.

ಬರಗಾಲಕ್ಕೆ ಸರ್ಕಾರದ ನಿಯಮಾವಳಿ ಏನಿದೆ?

ಬರಗಾಲ ಘೋಷಣೆ ಮಾಡಲು ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು.ಈ ನಿಯಮಾವಳಿಯೇ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ.  ಶೇ. 33 ರಷ್ಟು ಬೆಳೆ ಹಾನಿಯಾದರೆ ಪರಿಹಾರ ನೀಡಲು ಅವಕಾಶವಿದೆ. ಆದರೆ ಬರಕ್ಕೆ ಶೇ. 50 ರಷ್ಟುಬೆಳೆ ಹಾನಿ ಯಾಗಬೇಕು. ಬರ ಘೋಷಣೆಗೆ ಕನಿಷ್ಠ ಶೇ. 60 ರಷ್ಟು ಮಳೆ ಕೊರತೆಯಾಗಬೇಕು. ಕನಿಷ್ಠ ಮೂರು ವಾರಗಳು ಕಡಿಮೆ ಇರದಂತೆ ಮಳೆ ಆಗಿರಬಾರದು. ಮಳೆ ಕೊರತೆ ಪ್ರಮಾಣ ಶೇ. 60 ರಿಂದ 30ಕ್ಕೆ ಇಳಿಸಬೇಕೆಂದು ಸಿದ್ದರಾಮಯ್ಯನವರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕನಿಷ್ಠ ಮಾನದಂಡದ ಅಡಿ ನಿಯಮಾವಳಿಗೆ ತಿದ್ದುಪಡಿಗೆ ಅನುಮತಿನೀಡಬೇಕೆಂದು ಮನವಿ ಮಾಡಿದ್ದಾರೆ. ಕೇಂದ್ರದ ಕೃಷಿ ಇಲಾಖೆಯು ಅನುಮತಿಸಿದರೆ ರಾಜ್ಯದಲ್ಲಿ 100 ಕ್ಕೂ ಹೆಚ್ಚು ತಾಲುಗಳನ್ನು ಬರಗಾಲಪ್ರದೇಶವೆಂದು ಘೋಷಣೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ ಅನ್ನಭಾಗ್ಯದ ಹಣ ಬಿಡುಗಡೆ- ನಿಮಗೆ ನಿಮಗೆಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಸಚಿವ ಸಂಪುಟ ಉಪಸಮಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ತೀವ್ರ ಬರಪೀಡಿತ ಪ್ರದೇಶದಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ ಮಾಡಲಾಗುತ್ತಿದೆ.ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ವರದಿ ಪಡೆದು ಮತ್ತೊಮ್ಮೆ  ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುವುದು. ಬರ ಘೋಷಣೆಗೆ ಕೇಂದ್ರದ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದವಲ್ಲಿ ಬರ ಪರಿಸ್ಥಿತಿ ಇರುವ 113 ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜಂಟಿ ಸಮೀಕ್ಷೆ ನಡೆಸಿ ಬೆಳೆ ಪರಿಸ್ಥಿತಿಯ ವಾಸ್ತವ ವರದಿಯನ್ನು ಆಗಸ್ಟ್ 31 ರೊಳಗೆ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಕೇವಲ ಕಚೇರಿಯಲ್ಲಿರದೆ ರೈತರ ಜಮೀನಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿ ಸಲಹೆ, ಸಹಕಾರ ನೀಡುವುದರ ಜೊತೆಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಸಚಿವ ಚಲುವರಾಯ ಸ್ವಾಮಿ ತಿಳಿಸಿದ್ದಾರೆ.

ನಿಯೋಜಿತ ನೋಡಲ್ ಅಧಿಕಾರಿಗಳಉ ಆಗಿಂದಾಗ್ಗೆ ಜಿಲ್ಲೆಗಳಿಗೆಭೇಟಿ ನೀಡಿ ಬರ ಪರಿಸ್ಥಿತಿ, ಇಲಾಖಾ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಬೇಕೆಂದು ತಿಳಿಸಿದ್ದಾರೆ.

Leave a Comment