ಅನ್ನಭಾಗ್ಯ ಹಣ ಜಮೆ ಆಗದವರು ಜನವರಿ7 ರೊಳಗೆ ಈ ಕೆಲಸ ಮಾಡಿ

Written by Ramlinganna

Updated on:

Annabhagya amount not credited  ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಜಮೆಯಾಗಿಲ್ಲವೇ? ಜನವರಿ 7 ಯಾವ ದಾಖಲೆಯೊಂದಿಗೆ ಎಲ್ಲಿ ಸರಿಪಡಿಸಬೇಕೆಂಬುದರ  ಮಾಹಿತಿ ಇಲ್ಲಿದೆ.

ಅನ್ನಭಾಗ್ಯ ಯೋಜನೆಯಡಿ ಸರ್ಕಾರದ ವತಿಯಿಂದ ಅಂತ್ಯೋದಯ ಅನ್ನ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 5 ಕೆ.ಜಿ ಯಂತೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇನ್ನೂ 5 ಕೆ.ಜಿ. ಹೆಚ್ಚುವರಿಯಾಗಿ ಆಹಾರ ಧಾನ್ಯಗಳನ್ನು ವಿತರಿಸಲು ಉದ್ದೇಶಿಸಲಾಗಿರುತ್ತದೆ. ಆದರೆ ಇದರ ಬದಲಾಗಿ ಪ್ರತಿ ಫಲಾನುಭವಿಗೆ ಪ್ರತಿ ಕೆಜಿ.ಗೆ 34 ರೂಪಾಯಂತೆ 5 ಕೆಜಿಯ ಹಣ 170 ರೂಪಾಯಿಗಳನ್ನು ಪಡಿತರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಮೂಲಕ ವರ್ಗಾಯಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಅಫಜಲ್ಪುರ ತಹಶೀಲ್ದಾರ ಸಂಜೀವ ಕುಮಾರ ದಾಸರ್ ಅವರು ತಿಳಿಸಿದ್ದಾರೆ.

ಅಫಜಲ್ಪುರ ತಾಲೂಕಿನಲ್ಲಿ ಒಟ್ಟು 3423 ಡಿಬಿಟಿ ವಂಚಿತ ಕಾರ್ಡುದಾರರ  ಬ್ಯಾಂಕ್ ಖಾತೆಗಳನ್ನು ಸರಿಪಡಿಸುವ ಪ್ರಕ್ರಿಯೆ ನಡೆದಿರುತ್ತದೆ. ಇನ್ನ ಆ್ಯಕ್ಟಿವ್ ಕೇಸ್ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆ  ಇಕೆವೈಸಿ ಮಾಡಿಸಬೇಕು. ನಾಟ್ ಅವಲೇಬಲ್ ಇನ್ ಡಿಬಿರಿ ಫಲಾನುಭವಿಗಳು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಫಲಾನುಭವಿಗಳು ಹೊಸ ಬಯಾಂಕ್ ಖಾತೆಯನ್ನು ತೆರೆಯಬೇಕು. ನಾಟ್ ವಾಲಿಡ್ ಆಧಾರ್ ನಂಬರ್ ಫಲಾನುಭವಿಗಳು ಕಡ್ಡಾಯವಾಗಿ ಅವರ ನಿಖರವಾದ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು.ಬ್ಯಾಂಕ್ ಖಾತೆಯಲ್ಲಿ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರು ಹೊಂದಾಣಿಕೆ ಆಗದೆ ಇರುವವರು ಸರಿಪಡಿಸಿಕೊಳ್ಳಬೇಕು.

ಇದನ್ನೂ ಓದಿ ನಿಮ್ಮ ಜಮೀನಿನ ಒರಿಜಿನಲ್ ಟಿಪ್ಪಣಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಡಿಬಿಟಿ ವಂಚಿತ ಫಲಾನುಭವಿಗಳ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿವಾರು ಈಗಾಗಲೇ ನೀಡಲಾಗಿರುತ್ತದೆ. ಪಡಿತರ ಚೀಟಿದಾರರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಜನವರಿ 7 ರೊಳಗಾಗಿ ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಳ್ಳಬೇಕು. ಫಲಾನುಭವಿಗಳು ಒಂದು ವೇಳೆ ನಿಗದಿತ ಸಮಯದೊಳಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಈ ಯೋಜನೆಯಿಂದ ವಂಚಿತಗೊಳ್ಳುವ ಸಂಭವವಿರುತ್ತದೆ. ಅಫಜಲ್ಪುರ ತಾಲೂಕಿನ ಫಲಾನುಭವಿಗಳು ತಮ್ಮ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಪಡಿತರ ಚೀಟಗಳನ್ನು ಪರಿಶೀಲಿಸಿಕೊಂಡು ಬ್ಯಾಂಕ್ ಖಾತೆಗಳನ್ನು ಮೇಲ್ಕಂಡಂತೆ ಸರಿಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಶೀಘ್ರ ಇಕೆವೈಸಿ ಮಾಡಿಸಿಕೊಳ್ಳಿ

ಪಡಿತರ ಚೀಟಿ ಹೊಂದಿರುವ ಸದಸ್ಯರು ತಮ್ಮ ಇಕೆವೈಸಿ ಆಗಿಲ್ಲದಿದ್ದರೆ ಕೂಡಲೇ ನ್ಯಾಯ ಬೆಲೆ ಆಂಗಡಿಗಳಲ್ಲಿ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ದೊಂದಿಗೆ ತಮ್ಮ ನ್ಯಾಯಬೆಲೆ ಅಂಗಡಿಗೆ ತೆರಳಿ ಶೀಘ್ರ ಇಕೆವೈಸಿ ಮಾಡಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Annabhagya amount not credited  ಇಕೆವೈಸಿ ಆಗಿದೆಯೋ ಇಲ್ಲವೋ? ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ತಮ್ಮ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/lpg/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಆಲ್ಲಿನೀವು ನಿಮ್ಮ ರೇಶನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಲು ನಾಲ್ಕು ವಿಭಾಗವಾರು ಲಿಂಕ್ ಗಳನ್ನು ನೋಡುತ್ತೀರಿ. ಅದರಲ್ಲಿ ನೀವು ಯಾವ ವಿಭಾಗದ ಜಿಲ್ಲೆಯವರಾಗಿದ್ದೀರೆಂಬುದನ್ನು ನಿರ್ಧರಿಸಿ ಆ ಜಿಲ್ಲ ವಿಭಾಗಾವಾರು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ಇಕೆವೈಸಿ ಆಗಿದೆಯೋಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.

Leave a Comment