ಪಿಎಂ ಕಿಸಾನ್ ಯೋಜನೆಗೆ ರೈತರು ಈಗ ಮೊಬೈಲ್ ನಲ್ಲೇ ನೋಂದಣಿ ಮಾಡಿಸಬಹುದು. ಹೌದು, ರೈತರು ತಮ್ಮಲ್ಲಿರುವ ಮೊಬೈಲ್ ನಲ್ಲಿ ಯಾರ ಸಹಾಯವೂ ಇಲ್ಲದೆ ನೋಂದಣಿ ಮಾಡಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಆನ್ಲೈನ್ ನಲ್ಲಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸುವುದು ಹೇಗೆ?
ರೈತರು ಆನ್ಲೈನ್ ನಲ್ಲಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಲು ಈ
https://pmkisan.gov.in/RegistrationFormNew.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರು ಹೊಸದಾಗಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಗ್ರಾಮೀಣ ಪ್ರದೇಶದವರಾಗಿದ್ದರೆ Rural Farmer Registration ಹಾಗೂ ನಗರ ಪ್ರದೇಶದವರಾಗಿದ್ದರೆ Urban Farmer Registration ಎಂದು ಕ್ಲಿಕ್ ಮಾಡಬೇಕು. ನಂತರ ರೈತರು ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ಇದಾದಮೇಲೆ ಮೊಬೈಲ್ ನಂಬರ್ ಹಾಕಬೇಕು. ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾರೋ ಆ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕುಪ. ನಂತರಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ಮೊಬೈಲಿಗೆ ಓಟಿಪಿ ಬರುತ್ತದೆ. ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಏನಿದು ಪಿಎಂ ಕಿಸಾನ್ ಯೋಜನೆ?
ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವಾರು ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆ ಅತ್ಯಂತ ಪ್ರಮುಖವಾಗಿದೆ. ಈ ಯೋಜನೆಯನ್ನು 2018ರ ಡಿಸಂಬರ್ 1 ರಂದು ಆರಂಭವಾಗಿದೆ. ಈ ಯೋಜನೆಯನ್ನು ನಿಜವಾದ ಬಡ ರೈತರಿಗೆ ಸರ್ಕಾರದ ಸೌಲಭ್ಯ ಸಿಗಲೆಂದು ಜಾರಿಗೆ ತರಲಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಪಿಎಂ ಕಿಸಾನ್ ಯೋಜನೆಯ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ರೈತರ ಖಾತೆಗೆ ಇಲ್ಲಿಯವರೆಗೆ 12 ಕಂತುಗಳು ಜಮೆ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ನಾಲ್ಕು ತಿಂಗಳಿಗೊಮ್ಮೆ 3 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು. ಇದರೊಂದಿಗೆ ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 4 ಸಾವಿರ ರೂಪಿಯನ್ನು ಎರಡು ಕಂತುಗಳಲ್ಲಿ ಜಮಾ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಒಟ್ಚು 10 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡಲಾಗುವುದು.
ಪಿಎಂ ಕಿಸಾನ್ ಯೋಜನೆಯ ಯಾವ ರೈತರು ಅರ್ಹರಾಗಿರುತ್ತಾರೆ?
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸುವ ರೈತರು ಭಾರತದ ನಿವಾಸಿಯಾಗಿರಬೇಕು. ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಮೀನಿನ ಪಹಣಿ ಇರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ರೈತರು ಮುಖ್ಯವಾಗಿ ಫ್ರೂಟ್ಸ್ ಐದಿ ಹೊಂದಿರಬೇಕು. ರೈತ ಕುಟುಂಬವು ಪಡಿತರ ಚೀಟಿಯನ್ನು ಹೊಂದಿರಬೇಕು.
ಇದನ್ನೂ ಓದಿ : ಸರ್ವೆ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರ ಕುಟುಂಬದಲ್ಲಿ ಯಾವೊಬ್ಬ ಕುಟುಂಬದ ಸದಸ್ಯರು ಸಂವಿಧಾನಿಕ ಹುದ್ದೆಯಲ್ಲಿರಬಾರದು. ಜಿಪಂ ಅಧ್ಯಕ್ಷರಾಗಿರಬಾರದು. ಮೇಯರ್ ಆಗಿರಬಾರದು.ಶಾಸಕ, ಸಂಸದರಾಗಿರಬಾರದು. ಕುಟುಂಬದ ಸದಸ್ಚರು ಪ್ರತಿ ತಿಂಗಳು 10 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವವರಾಗಿರಬಾರದು. ನೋಂದಣಿ ಮಾಡಿಸಿದ ನಂತರ ರೈತರು ಪಿಎಂ ಕಿಸಾನ್ ಯೋಜನೆಯ ಮುಖಪುಟದಲ್ಲಿರುವ Status of Self Registration farmer/CSC farmers ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುವುದು ಅಲ್ಲಿಆಧಾರ್ ನಂಬರ್ ಹಾಕಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.