ಏನಿದು ಜೀವಾಮೃತ (Jeevamrutha)? ಇಲ್ಲಿದೆ ಮಾಹಿತಿ

Written by By: janajagran

Updated on:

ಸಾವಯವ ಕೃಷಿಯಲ್ಲಿ ರೈತರು ಮನೆಯಲ್ಲಿಯೇ ಸುಲಭವಾಗಿ ಜೀವಾಮೃತವನ್ನು (jeevamrutha) ತಯಾರಿಸಬಹುದು. ಹೌದು, ಇದಕ್ಕಾಗಿ ಯಾವುದೇ ಮಾರುಕಟ್ಟೆಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿರುವ ದೇಸಿ ಹಸುವಿನ ಸೆಗಣಿ, ಗೋಮೂತ್ರ, 2 ಕೆಜಿ ಬೆಲ್ಲ, 2 ಕೆಜಿ ಹಿಟ್ಟು ಹಾಗೂ ಬೊಗಸೆ ಮಣ್ಣಿದ್ದರೆ ಸಾಕು, ಅತ್ಯಂತ ಸರಳವಾಗಿ ಮನೆಯಲ್ಲಿಯೇ ಜೀವಾಮೃತ ತಯಾರಿಸಬಹುದು. ಹಾಗಾದರೆ ಜೀವಾಮೃತ ತಯಾರಿಸುವುದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸರಳ ಉಪಾಯ.

ಜೀವಾಮೃತ ತಯಾರಿಸಲು ಏನೇನು ಬೇಕು (What are the ingredients of Jeevamrutha?

200 ಲೀಟರ್ ನೀರು, 10 ಕೆಜೆ ದೇಸಿ ಹಸುವಿನ ಸೆಗಣಿ,  10 ಲೀಟರ್ ಗೋಮೂತ್ರ, 2 ಕೆಜಿ ಬೆಲ್ಲ,  2 ಕೆಜಿ ಧಾನ್ಯದ ಹಿಟ್ಟು, ಒಂದು ಬೊಗಸೆ ಮಣ್ಣು

ಜೀವಾಮೃತ ತಯಾರಿಸುವುದು ಹೇಗೆ? (How to prepare jeevamrutha)

ಜೀವಾಮೃತವನ್ನು ನೆರಳಿರುವ ಸ್ಥಳದಲ್ಲಿ ಮಾಡುವುದು ಸೂಕ್ತ. ಮನೆಯ ಮುಂದಿರುವ ಗಿಡದ ಕೆಳಗಡೆ ಸ್ಥಳ ಆಯ್ಕೆ ಮಾಡಿಕೊಂಡರು ಅತ್ಯುತ್ತಮ ಎಂದು ತಜ್ಞರು ಹೇಳುತ್ತಾರೆ.

ಒಂದು ಬ್ಯಾರೆಲ್ ನಲ್ಲಿ 200 ಲೀಟರ್ ನೀರು ಹಾಕಬೇಕು. ಅದರಲ್ಲಿ 10 ಕೆಜಿ ದೇಸಿ ಹಸುವಿನ ಸೆಗಣಿ ಬೆರೆಸಬೇಕು. 10 ಲೀಟರ್ ಹಸುವಿನ ಮೂತ್ರವನ್ನು ಬೆರೆಸಬೇಕು. 2 ಕೆಜಿ ಬೆಲ್ಲ ಹಾಗೂ ಎರಡು ಕೆಜಿ ಧಾನ್ಯ ಹಿಟ್ಟು ಮತ್ತು ಜಮೀನಿನ ಬದುಗಳಿಂದ ಅಥವಾ ತೋಟದ/ ಆಲದಮರ /ಬನ್ನಿಗಿಡಗಳ ಬುಡದ ಒಂದು ಬೊಗಸೆ ಮಣ್ಣನ್ನು ನೀರಿನಲ್ಲಿ ಬೆರೆಸಬೇಕು. ಹಸುವಿನ ಸೆಗಣಿ, ಹಸುವಿನ ಮೂತ್ರ, ಬೆಲ್ಲ ಹಾಗೂ ಧಾನ್ಯದ ಹಿಟ್ಟು, ಬೊಗಸೆ ಮಣ್ಣನ್ನು ಬ್ಯಾರೆಲ್ ನಲ್ಲಿರುವ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು. ಇದನ್ನು  7 ದಿನ ನೆರಳಿನಲ್ಲಿಟ್ಟು ಪ್ರತಿ ದಿನ ಬೆಳಗ್ಗೆ ಮತ್ತು ಸಾಯಂಕಾಲ ದ್ರಾವಣವನ್ನು ಚೆನ್ನಾಗಿ ಕಲಕಬೇಕು. ಆಗ ಜೀವಾಮೃತ ತಯಾರಾಗುತ್ತದೆ. 7 ದಿನಗಳ ನಂತರ ಈ ದ್ರಾವಣವನ್ನು ಬೆಳೆಗಳಿಗೆ ನೀರಾವರಿ ಮೂಲಕ ಅಥವಾ ಬೆಳೆ ಮೇಲೆ ಸಿಂಪರಣೆ ಮಾಡುವ ಮೂಲಕ ನೀಡಬಹುದು. ಒಂದು ಎಕರೆಗೆ 200 ಲೀಟರ್ ಜೀವಾಮೃತ ಸಾಕಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿಯೇ ಬೀಜಾಮೃತ (Beejamrutha) ಮಾಡಿ ಬೀಜೋಪಚಾರ ಮಾಡುವುದು ಹೇಗೆ?….. ಇಲ್ಲಿದೆ ಸಂಪೂರ್ಣ ಮಾಹಿತಿ

ಜೀವಾಮೃತದ ದ್ರಾವಣವನ್ನು ಸೋಸಿ ನೇರವಾಗಿ ಬೆಳೆಗೆ ಎಲೆಗಳ ಮೂಲಕ ಸಿಂಪರಣೆ ಮಾಡಬಹುದು. ಅಲ್ಲದೆ ನೀರಾವರಿಯಲ್ಲಿ ನೀರು ಹಾಯಿಸುವಾಗ ನೀರಿನೊಂದಿಗೆ ಜೀವಾಮೃತ ಕೊಡುವುದು ಒಳ್ಳೆಯದು. ಇದರಿಂದ ಬೆಳೆಯ ಬೆಳವಣಿಗೆ ಚೆನ್ನಾಗಿರುತ್ತದೆ. ಅಲ್ಲದೆ, ಬೆಳೆಗೆ ಬರುವ ರೋಗ ಮತ್ತು ಕೀಟದ ಬಾಧೆ ಕಡಿಮೆಯಾಗಿ ಉತ್ತಮ ಇಳುವರಿ ಪಡೆಯಬಹುದು.

ಪ್ರಯೋಜನಗಳು (Benefit of jeevamrutha)

ಇದು ಸಸ್ಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ.  ಇಳುವರಿ ಹೆಚ್ಚಿಸುತ್ತದೆ.ಕೀಟ ಮತ್ತು ರೋಗಗಳ ವಿರುದ್ಧ ಪ್ರತಿರೋಧ ನೀಡುತ್ತದೆ. ಮಣ್ಣಿನಲ್ಲಿ  ಸಾವಯವ ಕಾರ್ಬನ್ ಹೆಚ್ಚಿಸುತ್ತದೆ. ಬೆಳೆಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡಲು ನೆರವಾಗಲು ಪಿ.ಎಸ್.ಬಿ ಬ್ಯಾಸಿಲಸ್, ಮೈಕ್ರೋರೈಜ್ ಸೇರಿದಂತೆ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗುತ್ತವೆ. ಸೂಕ್ಷ್ಮ ಜೀವಿಗಳ ಕ್ರಿಯೆ ವೃದ್ಧಿಯಾಗಿ ಭೂಮಿ ಫಲವತ್ತಾಗುತ್ತದೆ.

ದೇಸಿ ಹಸುವಿನ ಸೆಗಣಿ ಹಾಗೂ ಗಂಜಲು (ಗೋಮೂತ್ರ) ಲಕ್ಷಾಂತರ ಪ್ರಯೋಜನಕಾರಿ ಸೂಕ್ಷ್ಮಾಣು ಜೀವಿಗಳನ್ನು ಹೊಂದಿದೆ. ಏಳು ದಿನಗಳಲ್ಲಿ ಸೂಕ್ಷ್ಮಾಣು ಜೀವಿಗಳು ದ್ವಿಗುಣಗೊಂಡು ಬೆಳೆಗಳ ಬೆಳವಣಿಗೆಯನ್ನು ವೃದ್ಧಿಸುತ್ತದೆ. ಜೀವಾಮೃತವು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ವೃದ್ಧಿಸುತ್ತದೆ.

ಇಜನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ಆನ್‌ಲೈನ್ ನಲ್ಲಿಯೇ ಸ್ವಾಭಿಮಾನಿ ರೈತ ಕಾರ್ಡ್ (Swabhimani raita card) ನೋಂದಣಿಗೆ ಫ್ರೂಟ್ಸ್‌ (FRUITS) ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ.. ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment