ಮನೆಯಲ್ಲಿಯೇ ಬೀಜಾಮೃತ ಮಾಡಿ ಬೀಜೋಪಚಾರ ಮಾಡುವುದು ಹೇಗೆ?

Written by By: janajagran

Updated on:

ಇಳುವರಿ ಹೆಚ್ಚಿಸುವದಕ್ಕಾಗಿ ರೈತರು ಮನೆಯಲ್ಲಯೇ ಬೀಜಾಮೃತ ಮಾಡುವ ಅತ್ಯಂತ ಸರಳವಿಧಾನವಾಗಿದೆ. ಬೀಜಾಮೃತ (beejamrutha) ಸಾವಯವ ವಿಧಾನವಾಗಿದ್ದು,ಇದು ಬೀಜಗಳ ಮೊಳಕೆಯೊಡೆಯುವಿಕೆಯನ್ನು ಹೆಚ್ಚಿಸುತ್ತದೆ, ಬೀಜಗಳ ಮೂಲಕ ಹಾಗೂ ಮಣ್ಣಿನ ಮೂಲಕ ರೋಗ ಹರಡುವಿಕೆಯನ್ನು ತಡೆಯುತ್ತದೆ ಹಾಗೂ ಸಸಿಗಳ ಬೆಳವಣಿಗೆ ಉತ್ತಮಗೊಳಿಸಿ ಇಳುವರಿಯನ್ನು ಹೆಚ್ಚಿಸುತ್ತದೆ.

ಸಾವಯವ ಕೃಷಿಗೆ ಬೀಜೋಪಚಾರ ಸಹಿತ ಬಿತ್ತನೆ ಅತ್ಯಗತ್ಯ. ಇದರಿಂದ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಿಸುವ ಹಾಗೂ ರಂಜಕ ಕರಗಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ. ಸಾವಯವ ಕೃಷಿ ಪದ್ಧತಿಯಲ್ಲಿ ಜೀವಾಮೃತ ಬಳಸುವುದರಿಂದ ಭೂಮಿ ಮಣ್ಣಿನ ಸತ್ವ ಹೆಚ್ಚುತ್ತದೆ.

ಬೀಜಾಮೃತ ಎಂದರೇನು (What is beejamrutha)?

ಬೀಜ ಬಿತ್ತನೆಗೂ ಮೊದಲು ಬೀಜೋಪಚಾರ ಮಾಡಲು ಗೋಮೂತ್ರ, ಗೋಮಾಯ ಮತ್ತು ಸುಣ್ಣ ಸೇರಿಸಿ ಮಾಡುವ ಮಿಶ್ರಣಕ್ಕೆ ಬೀಜಾಮೃತ ಎಂದು ಕರೆಯುತ್ತಾರೆ.

ಹಾಗಾದರೆ ಬೀಜಾಮೃತ ತಯಾರಿಸುವುದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸರಳವಿಧಾನ….

ಬೀಜಾಮೃತ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: ನೀರು, ದೇಸೀ ಹಸುವಿನ ಸಗಣಿ, ದೇಸಿ ಹಸುವಿನ ಗೋಮೂತ್ರ ಹಾಗೂ ಸುಣ್ಣ.

ಬೀಜಾಮೃತ ತಯಾರಿಸುವುದು ಹೇಗೆ? (How to prepare Beejamrutha)

ಬೀಜ ಬಿತ್ತುವ ಒಂದು ದಿನ ಮೊದಲು ಐದು ಕೆಜಿ ಸಗಣಿಯನ್ನು ಒಂದು ಕಾಟನ್ ಬಟ್ಟೆಯಲ್ಲಿ ಅಥವಾ ಚೀಲದಲ್ಲಿ ಗಂಟುಕಟ್ಟಿ ಅದನ್ನು 20 ಲೀಟರ್ ನೀರಿನಲ್ಲಿ 12 ಗಂಟೆಗಳ ಕಾಲ ನೆನೆಸಿಡಬೇಕು.  ಇನ್ನೊಂದು  ಒಂದು ಲೀಟರ್ ನೀರಿನಲ್ಲಿ 50 ಗ್ರಾಂ ಸುಣ್ಣವನ್ನು ಬೆರೆಸಿ ರಾತ್ರಿ ನೆನೆಸಿಡಬೇಕು. ಮರುದಿನ  ಬೆಳಗ್ಗೆ ಹಸುವಿನ ಸಗಣಿಯ ಮೂಟೆಯನ್ನು ಮೂರು ಬಾರಿ ನೀರಿನಲ್ಲಿ ಚೆನ್ನಾಗಿ ಕುಲುಕಿಸಬೇಕು. ಇದರಿಂದ ಸಗಣಿಯ ಸತ್ವವು ಆ ನೀರಿನಲ್ಲಿ ಸಂಗ್ರಹವಾಗುವಂತೆ ತಯಾರಿಸಿದ ನೀರಿನ ದ್ರಾವಣದಲ್ಲಿ ಸ್ವಲ್ಪ ಮಣ್ಣನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಕುಲುಕಿಸಬೇಕು. ಕೊನೆಯದಾಗಿ ತಯಾರಿಸಿದ ದ್ರಾವಣದಲ್ಲಿ 5 ಲೀಟರ್ ದೇಶಿ ಹಸುವಿನ ಮೂತ್ರ ಮತ್ತು ಸುಣ್ಣದ ನೀರುನ್ನು ಸೇರಿಸಿ ಚೆನ್ನಾಗಿ ಕಲಿಕಿದರೆ ಬೀಜಾಮೃತ ಸಿದ್ದವಾಗುತ್ತದೆ.

ಬೀಜಾಮೃತದಿಂದ ಆಗುವ ಉಪಯೋಗ (Benefit of beejamrutha)

ಬೀಜಾಮೃತವು ಮಣ್ಣಿನಿಂದ ಹರಡುವ ಮತ್ತು ಬೀಜದಿಂದ ಹರಡುವ ರೋಗಕಾರಗಳಿಂದ ಬೆಳೆಯನ್ನು ರಕ್ಷಿಸುತ್ತದೆ. ಬೀಜಗಳು ಉತ್ತಮವಾಗಿ ಮೊಳಕೆಯೊಡೆಯುತ್ತವೆ.ಸಸಿಗಳು ಏಕಕಾಲದಲ್ಲಿ ಮೊಳಕೆಯೊಡೆದು ಹುಲುಸಾಗಿ ಬೆಳೆಲು ಮತ್ತು ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗುವುದು.

ಬೀಜೋಪಚಾರ ಹೇಗೆ ಮಾಡಬೇಕು (How to prepare seed treatment)

ಪ್ಲಾಸ್ಟಿಕ್ ಮೇಲೆ ಅಥವಾದ ನೆಲದ ಮೇಲೆ ಬೀಜಗಳನ್ನುಹರಡಿ ಆ ಬೀಜಗಳ ಮೇಲೆ ಬೀಜಾಮೃತ ಸಿಂಪಡಿಸಿ ಬೀಜಗಳನ್ನು ಸರಿಯಾಗಿ ಬೆರೆಸಿ ಬೀಜೋಪಚಾರ ಮಾಡಬೇಕು.

ದ್ವಿದಳ ಧಾನ್ಯಗಳನ್ನು ತುಂಬಾ ಎಚ್ಚರಿಕೆಯಿಂದ ಬೆರೆಸಬೇಕು. ಅವುಗಳನ್ನು ಗಟ್ಟಿಯಾಗಿ ಉಜ್ಜಬಾರದು, ಗಟ್ಟಿಯಾಗಿ ಉಜ್ಜಿದರೆ ಬೀಜದ ಮೇಲಿನ ಪದರು ಕಿತ್ತುಹೋದರೆ ಮೊಳಕೆಯೊಡೆಯುವುದಿಲ್ಲ.

Leave a Comment