ಹಿಂದೆ ಪ್ರತಿಯೊಂದು ಹೊಲಕ್ಕೂ ಹೋಗಿ ಬರಲು ಕಾಲುದಾರಿ, ಬಂಡಿದಾರಿಗಳಿರುತ್ತಿದ್ದವು. ಆದರೆ ಇತ್ತೀಚೆಗೆ ದಾರಿಗಳಿಲ್ಲದೆ ರೈತರು ತಮ್ಮ ಜಮೀನಿಗೆ ಹೋಗಲು ಪರದಾಡುವಂತಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ಹೊಲಕ್ಕೂ ದಾರಿಯಿರುತ್ತದೆ. ಒಂದು ವೇಳೆ ನಿಮ್ಮ ಹೊಲಕ್ಕೆ ದಾರಿಯಿಲ್ಲದಿದ್ದರೆ ಕಾನೂನು ಪ್ರಕಾರ ದಾರಿ ಪಡೆದುಕೊಳ್ಳಬಹುದು. ಅದು ಹೇಗೆ ಅಂದೊಂಡಿದ್ದೀರಾ….. ಇಲ್ಲಿದೆ ಮಾಹಿತಿ.
ಕರ್ನಾಟಕ ಸರ್ಕಾರ ಭೂಕಂದಾಯ ಅಧಿನಿಯಮ ಕಾಯ್ದೆ ಪ್ರಕಾರ ಯಾವುದೇ ಜಮೀನಿಗೆ ಹೋಗಿ ಬರಲು ದಾರಿ ಇದ್ದೇ ಇರುತ್ತದೆ. ದಾರಿಯಿಲ್ಲದ ಜಮೀನು ಇರಲ್ಲ. ಅನೇಕ ತಪ್ಪುಗಳಿಂದ ಇಂದು ಜಮೀನಿಗೆ ದಾರಿಯಿಲ್ಲದಂತಾಗಿದೆ. ಅಧಿಕೃತ ದಾರಿ ಒಂದು ವೇಳೆ ಇಲ್ಲದಿದ್ದರೆ ರೈತರು ಅಕ್ಕಪಕ್ಕದ ರೈತರೊಂದಿಗೆ ಮೊದಲು ಮಾತುಕತೆ ಮೂಲಕ ಬಗೆಹರಿಸಕೊಳ್ಳಬಹುದು. ಒಂದು ವೇಳೆ ಮಾತುಕತೆಯ ಮೂಲಕ ಬಗೆಹರಿಯದಿದ್ದರೆ ಕಾನೂನು ಮೂಲಕ ದಾರಿ ಪಡೆದುಕೊಳ್ಳಬಹುದು… ಇಲ್ಲಿದೆ ಸಂಕ್ಷೀಪ್ತ ಮಾಹಿತಿ.
ಯಾವ ಯಾವ ದಾಖಲೆಗಳು ಬೇಕು?
ನಿಮ್ಮ ಜಮೀನಿಗೆ ಹೋಗಿ ಬರಲು ಕಾಯ್ದೆ ಪ್ರಕಾರ ದಾರಿ ಮಾಡಿಕೊಳ್ಳಲು ಕೆಲವು ದಾಖಲೆಗಳು ಬೇಕಾಗುತ್ತವೆ. 1 ನಿಮ್ಮ ಜಮೀನಿನ ಪೂರ್ಣ ಸರ್ವೆಯ ನಕ್ಷೆ, 2. ನಿಮ್ಮ ಸರ್ವೆ ನಂಬರಿನ ಅಕ್ಕಪಕ್ಕದ ನಾಲ್ಕು ದಿಕ್ಕಿನ ಸರ್ವೆ ಸ್ಕೆಚ್., 3. ನಿಮ್ಮ ಸರ್ವೇ ನಂಬರಿನ ಟಿಪ್ಪಣಗಳು 4. ಪಹಣಿ ಮತ್ತು ಆಧಾರ್ ಕಾರ್ಡ್ ಬೇಕು. 5. ನಿಮ್ಮ ಜಮೀನಿನ ಎದುರುಗಡೆಯಿರುವವರ ಪಹಣಿ ಮತ್ತು ವಿಳಾಸ 6 ದಾರಿಯಿಲ್ಲದಿರುವ ಕುರಿತು ಪ್ರಮಾಣ ಪತ್ರವನ್ನು ತಾಲೂಕು ಸರ್ವೆ ಕಚೇರಿಯಿಂದ ಪಡೆಯುವುದು ಕಡ್ಡಾಯವಾಗಿದೆ. 7. ಜಮೀನಿಗೆ ಹೋಗಿ ಬರಲು ದಾರಿಯಿಲ್ಲವೆಂದು ಅರ್ಜಿ ಬರೆಯಬೇಕು.
ದಾಖಲೆಗಳನ್ನು ಯಾರಿಗೆ ಸಲ್ಲಿಸಬೇಕು?
ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ನಿಮ್ಮ ಜಿಲ್ಲೆಯ ಡಿಡಿಎಲ್ಆರ್ (Deputy Director Land Records) ಉಪ ನಿರ್ದೇಶಕರು ಭೂ ದಾಖಲೆಗಳು ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಕಾರ ಭೂ ದಾಖಲೆಗಳ ಉಪನಿರ್ದೇಶಕರು ರೈತರ ಜಮೀನಿಗೆ ದಾರಿ ಮಾಡಿಕೊಡಲು ಪುನಃ ಸರ್ವೆ ಮಾಡಲು ಆದೇಶಿಸಬಹುದು. ಅಥವಾ ರೆವಿನ್ಯೂ ಇನ್ಸ್ ಪೆಕ್ಚರ್ ಮತ್ತು ವಿಲೇಜ್ ಅಕೌಂಟೆಂಟ್ ಮೂಲಕ ವರದಿ ಕೇಳಬಹುದು. ವರದಿ ಆಧರಿಸಿ ಎದುರುದಾರರಿಗೆ ನೋಟಿಸ್ ಕಳಿಸಲಾಗುತ್ತದೆ. ಇವರೆಲ್ಲರ ಹೇಳಿಕೆ ಆಧರಿಸಿ ದಾರಿ ಸೃಷ್ಟಿಸಬಹುದು. ಒಂದು ವೇಳೆ ಕ್ಲಿಷ್ಟಕರ ಪರಿಸ್ಥಿತಿಯಿದ್ದರೆ ಡಿಡಿಎಲ್ಆರ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರೈತರಿಗೆ ಸೂಕ್ತ ದಾರಿ ಮಾಡಿಕೊಡಲು ಸಹಾಯ ಮಾಡುತ್ತಾರೆ.
ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ಹೋಗುವ ದಾರಿ, ಕೆರೆಕಟ್ಟೆ, ನಿಮ್ಮ ಸರ್ವೆನಂಬರ್ ನೋಡಬೇಕೆ… ಇಲ್ಲಿದೆ ಮಾಹಿತಿ