ಇತ್ತೀಚಿನ ಬ್ಯೂಸಿ ಸಮಯದಲ್ಲಿ ಗೆಳೆಯರ, ಬಂಧು- ಬಳಗದವರ ಮನೆಯ ವಿಳಾಸ ಹುಡುಕುವುದು ತುಂಬಾ ಸರಳವಾಗಿದೆ. ಹಿಂದಿನ ಕಾಲದಲ್ಲಿ ಫೋನ್ ಮಾಡಿ ಈ ಜಾಗದಲ್ಲಿ ನಿಂತಿರುತ್ತೇನೆ, ಅಲ್ಲಿಯೇ ಬಾ ಎಂದು ಹೇಳಿ ಗೆಳೆಯರಿಗಾಗಿ ಕಾದು ಕಾದು ಸಮಯ ವ್ಯರ್ಥ ಮಾಡಲಾಗುತ್ತಿತ್ತು.

ಆದರೆ ಈಗ ಲೋಕೇಶನ್ ಮ್ಯಾಪ್ ಕಳಿಸಿದರೆ ಸಾಕು, ವಿಳಾಸ ಹುಡುಕುವವರಿಗೆ ಸಮಸ್ಯೆಯಾಗುವುದಿಲ್ಲ, ಹಾಗೂ ನಿಮ್ಮ ಗೆಳೆಯರ, ಬಂಧುಬಳಗದವರಿಗಾಗಿ ಕಾಯುವ ಅವಶ್ಯಕತೆಯಿಲ್ಲ. ಹೌದು, ಮೊಬೈಲ್ ನ ವ್ಯಾಟ್ಸ್ಅಪ್ ನಲ್ಲಿಯೇ ಲೋಕೇಶನ್ ಮ್ಯಾಪ್ ಕಳಿಸಿದರೆ ಸಾಕು, ಗೂಗಲ್ ಮ್ಯಾಪ್ ಸಹಾಯದಿಂದ ನೀವಿದ್ದ ಸ್ಥಳಕ್ಕೆ ನಿಮ್ಮ ಗೆಳೆಯರು, ಬಂಧುಬಳಗದವರು ಬರುತ್ತಾರೆ.

ಲೋಕೇಶನ್ ಮ್ಯಾಪ್ ಕಳಿಸುವುದು ಹೇಗೆ (How to send location map)?

ಮೊಬೈಲ್ ನಲ್ಲಿ ವ್ಯಾಟ್ಸ್ ಅಪ್ ಆನ್ ಮಾಡಬೇಕು. ಅಲ್ಲಿ ನೀವು ಯಾರಿಗೆ ಲೋಕೇಶನ್ ಕಳಿಸಬೇಕೆಂದುಕೊಂಡಿದ್ದೀರೋ ಅವರ ಹೆಸರು ಓಪನ್ ಮಾಡಬೇಕು. ಕೆಳಗಡೆ ಟೈಪ್ ಮಾಡುವ ಸ್ಥಳದ ಬಲಗಡೆ ಕಾಣುವ ಫೈಲ್ ಅಟ್ಯಾಚ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಲೋಕೇಶನ್ ಆಯ್ಕೆಮಾಡಿಕೊಳ್ಳಬೇಕು. ಇಲ್ಲಿ ಒಂದು ಸಂಗತಿ ನೆನಪಡಿಬೇಕು.

ನಿಮ್ಮ ಮೊಬೈಲ್ ನೆಟ್ವರ್ಕ್ ಆನ್ ಇರಬೇಕು.ಆಗ  ನೀವಿದ್ದ ಸ್ಥಳ ಕರೆಕ್ಟ್ ಆಗಿ ಲೋಕೇಶನ್ ಆಗುತ್ತದೆ. ಫೈಲ್ ಅಟ್ಯಾಚ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಸೆಂಡ್ ಯುವರ್ ಕರೆಂಟ್ ಲೋಕೇಶನ್  ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾರಿಗೆ ಲೋಕೇಶನ್ ಕಳಿಸಬೇಕೆಂದುಕೊಂಡಿದ್ದೀರೋ ಅವರಿಗೆ ನೀವಿದ್ದ ಲೋಕಶನ್ ಹೋಗುತ್ತದೆ. ಆಗ ನಿಮ್ಮ ಸ್ನೇಹಿತರಿಗೆ ನೀವಿರುವ ಸ್ಥಳದ ಮಾಹಿತಿ ಕಾಣುತ್ತದೆ.

ನೀವು ಕಳಿಸುವ ಲೋಕೇಶನ್ ಮ್ಯಾಪ್ ಕೆಲವು ಸಮಯದವರಿಗೆ ಮಾತ್ರ ಇರುತ್ತದೆ.15 ನಿಮಿಷದಿಂದ ಇಂತಿಷ್ಟೇ ನಿಮಿಷದವರಿಗೆ ಇರುತ್ತದೆ. ನಿಮ್ಮ ಗೆಳೆಯರು ನಿಮ್ಮಮನೆಗೆ ಬರಲು ಅಥವಾ ನೀವು ನಿಮ್ಮ ಗೆಳೆಯರ ಮನೆಗೆ ಹೋಗಲು ಲೋಕೇಶನ್ ಮ್ಯಾಪ್ ಆನ್ ಮಾಡಿದಾಗ ಡೈರೇಕ್ಶನ್ ಕೇಳಗುತ್ತದೆ. ಅಂದರೆ ನೀವು ಬೈಕ್ ಮೇಲೆ ಹೋಗುತ್ತಿದ್ದೀರೋ, ಕಾರಲ್ಲಿಹೋಗುತ್ತಿದ್ದೀರೋ ಅಥವಾ ನಡೆದುಕೊಂಡು ಹೋಗುತ್ತಿದ್ದೀರೋ ಎಂಬ ಮಾಹಿತಿ ಕೇಳಲಾಗುತ್ತದೆ.

ಇದನ್ನೂ ಓದಿ : Swavalambi app ಬಳಸಿ ಮೊಬೈಲ್ ನಲ್ಲೇ 11ಇ ನಕ್ಷೆ, ತತ್ಕಾಲ್ ಪೋಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ನೀವು ಅದರಲ್ಲಿ ಯಾವುದರ ಮೂಲಕ ಹೋಗುತ್ತಿದ್ದೀರೆಂಬುದನ್ನು ಆಯ್ಕೆ ಮಾಡಿಕೊಂಡ ಚಲಿಸುತ್ತಾ ಹೋದರೆ ನಿಮಗೆ ಯಾವ ಕಡೆ ತಿರುಗಬೇಕು,  ಎಷ್ಟು ದೂರವಿದೆ, ಎಷ್ಟು ಸಮಯ ಬೇಕಾಗುತ್ತದೆ ಎಂಬಿತ್ಯಾದಿ ಮಾಹಿತಿ ವೈಸ್ ಮಾಹಿತಿ ಸಹ ನೀಡಲಾಗುತ್ತದೆ. ಲೈವ್ ವ್ಯಾಟ್ಸ್ ಅಪ್ ಸಹಾಯದಿಂದ ನೀವು ಸುಲಭವಾಗಿ ನಿಮ್ಮ ಬಂಧುಬಳಗದವರ ಮನೆಗೆ ಹೋಗಬಹುದು.

ಇದರೊಂದಿಗೆ ಲೋಕೇಶನ್ ಮ್ಯಾಪ್ ಅಂದರೆ ನೀವು ಯಾವ ಸ್ಥಳಕ್ಕೆ ಹೋಗುತ್ತಿದ್ದೀರಿ ಅಂದರೆ ಆ ಸ್ಥಳ ಗೂಗಲ್ ಮ್ಯಾಪ್ ನಲ್ಲಿದ್ದರೆ ಸುಲಭವಾಗಿ ಯಾರ ಸಹಾಯವಿಲ್ಲದೆ ಹೋಗಬಹುದು. ಬಹಳಷ್ಟು ಜನ ಗೂಗಲ್ ಮ್ಯಾಪ್ ಬಳಸಿ ಐತಿಹಾಸಿಕ ಪ್ರಸಿದ್ಧ ಸ್ಥಳ, ಗುಡಿ ಗುಂಡಾರಗಳಿಗೆ ಗೂಗಲ್ ಮ್ಯಾಪ್ ಬಳಸಿ ಹೋಗುತ್ತಾರೆ.

ಗೂಗಲ್ ಮ್ಯಾಪ್ ನಲ್ಲಿ ನೀವು ತೆರಳುವ ಸ್ಥಳ ಹುಡುಕಿ ಆಯ್ಕೆ ಮಾಡಿಕೊಳ್ಳಬೇಕು.ನಂತರ ನೀವು ಚಲಿಸುತ್ತಾ ಹೋದಂತೆ ನಿಮಗೆ ಗೂಗಲ್ ಮ್ಯಾಪ್ ಗೈಡ್ ಮಾಡುತ್ತಿರುತ್ತದೆ. ಗೂಗಲ್ ಮ್ಯಾಪ್ ಸಹಾಯದಿಂದ ಯಾರ ನೆರವೂ ಇಲ್ಲದೆ ಅಂದುಕೊಂಡ ಸ್ಥಳಕ್ಕೆ ಸುಲಭವಾಗಿ ತಲುಪಬಹುದು.

ಇಂದು ಮೊಬೈಲ್ ಕೈಯಲ್ಲಿದ್ದರೆ ಸಾಕು, ಇದರೊಂದಿಗೆ ನೆಟ್ವರ್ಕ್ ಆನ್ ಇರಬೇಕು. ಕೈಯಲ್ಲಿರುವ ಮೊಬೈಲ್ ಸಹಾಯದಿಂದ ನೀವು ಹೋಗುವ ಸ್ಥಳದ ದೂರ, ನೀವು ಹೋಗುತ್ತಿರುವ ವೇಗ, ನೀವು ಹೋಗಬಯಸುವ ಸ್ಥಳದ  ಇನ್ನೂ ಎಷ್ಟು ದೂರವಿದೆ ಎಂಬ ಮಾಹಿತಿಯನ್ನು ಸಹ ಪಡೆಯುತ್ತೀರಿ. ಬೆಂಗಳೂರು ನಂತಹ ದೊಡ್ಡ ನಗರದಲ್ಲಿ ಗೂಗಲ್ ಮ್ಯಾಪ್ ಬಳಸಿಯೇ ಟ್ಯಾಕ್ಸಿ, ಓಲಾದಂತಹ ವಾಹನಗಳು ಚಲಿಸುತ್ತವೆ.  ಗೂಗಲ್ ಮ್ಯಾಪ್ ಬಳಸಿ ಪ್ರಯಾಣಿಕರು ಹೇಳಿದ್ದ ಸ್ಥಳಕ್ಕೆ ಹೋಗುತ್ತಾರೆ. ಇಂದು ಗೂಗಲ್ ಮ್ಯಾಪ್ ಆತ್ಮೀಯ ಮಿತ್ರನಂತೆ ವರ್ತಿಸುತ್ತಿದೆ.

Leave a Reply

Your email address will not be published. Required fields are marked *