ಸರ್ಕಾರದ ಯೋಜನೆ, ಸಬ್ಸಿಡಿ, ಲಾಭ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಇದೀಗ ಲಾಕ್ಡೌನ್ ಜಾರಿಯಿದ್ದರಿಂದ ಬಹುತೇಕ ಎಲ್ಲಾ ನೆಟ್ ಸೆಂಟರ್ ಗಳು ಬಂದ್ ಆಗಿವೆ. ಹೀಗಾಗಿ ಡಿಜಿಟಲ್ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಬಹುತೇಕ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಹೊರಗಡೆ ಹೋದರೆ ಪೊಲೀಸರ ಭಯ, ಹೊದರೂ ಝಿರಾಕ್ಸ್ ಅಂಗಡಿಗಳು ಬಂದ್ ಆಗಿದ್ದರಿಂದ ಆಧಾರ್ ಕಾರ್ಡ್ ಪಡೆಯಲು ಕಷ್ಟಪಡುತ್ತಿರುವವರು ಈಗ ಮನೆಯಲ್ಲಿಯೇ ನಿಮ್ಮ ಮೊಬೈಲ್ ನಲ್ಲಿಯೇ (How to Download Aadhaar card)ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ…
ಹೌದು, ಯುಐಡಿಎಐಯ ವೆಬ್ ಸೈಟ್ uidai.gov.in ಮೂಲಕ ಅಥವಾ ಮೊಬೈಲ್ ಅಪ್ಲಿಕೇಷನ್ mAadhaarಮೂಲಕ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದೆ.
ಡಿಜಿಟಲ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? (Digital Aadhaar card)
ಮೊದಲಿಗೆ ಯುಐಡಿಎಐನ ಅಧಿಕೃತ ವೆಬ್ ಸೈಟ್ https://eaadhaar.uidai.gov.in/ ಮೇಲೆ ಕ್ಲಿಕ್ ಮಾಡಬೇಕು. ನಂತರ ಹೊಸ ಪುಟ ತೆರೆಯಲ್ಪಡುತ್ತದೆ. ಇಲ್ಲಿ ಇದರಲ್ಲಿ ಆಧಾರ್ ಸಂಖ್ಯೆ, ನೋಂದಣಿ ಸಂಖ್ಯೆ ಅಥವಾ ವರ್ಚುವಲ್ ಸಂಖ್ಯೆಯನ್ನು ನಮೂದಿಸಬೇಕು. ಕ್ಯಾಪ್ಚ್ಯಾ ಕೋಡ್ ನಮೂದಿಸಿದ ನಂತರ ಸೆಂಡ್ ಒಟಿಪಿ ಕ್ಲಿಕ್ ಮಾಡಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕೆಯ ಒಟಿಪಿ ಬರುತ್ತದೆ. ಅದನ್ನು ಹಾಕಿದ ಮೇಲೆ ವೆರಿಫೈ ಮತ್ತು ಡೌನ್ ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆಗ ಡಿಜಿಟಲ್ ಆಧಾರ್ ಡೌನ್ಲೋಡ್ ಆಗುತ್ತದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದ್ದನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ