ಓಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸರಿಯಿದೆಯೇ? ಚೆಕ್ ಮಾಡಿ

Written by Ramlinganna

Updated on:

voters list on your mobile ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಿದೆಯೇ? ತಂದೆಯ ಹೆಸರು, ಹುಟ್ಟಿದ ದಿನಾಂಕ ಸೇರಿದಂತೆ ಇನ್ನಿತರ ಮಾಹಿತಿಯನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಮನೆಯಲ್ಲಿಯೇ ಕುಳಿತು ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಹಾಗೂ ಏನಾದರೂ ತಪ್ಪಾಗಿದೆಯೋ ಎಂಬುದನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಚುನಾವಣಾ ಪಟ್ಟಿಯಲ್ಲಿ ಹೆಸರಿರುವುದನ್ನುಪರಿಶೀಲಿಸಬಹುದು.

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕವೂ ವೋಟರ್ ಐಡಿ ಪಡೆಯುವ ಹಾಗೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

voters list on your mobile ಚುನಾವಣಾ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಹೇಗೆ?

ಚುನಾವಣಾ ಪಟ್ಟಿಯಲ್ಲಿ ನಮ್ಮ ಹೆಸರಿರುವುದನ್ನು ಮೊಬೈಲ್ ನಲ್ಲೇ  ಚೆಕ್ ಮಾಡಲು ಈ

https://electoralsearch.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಚುನಾವಣಾ ಆಯೋಗದ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು ನಮೂದಿಸಬೇಕು. ವಯಸ್ಸು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿದಿದ್ದರೆ ನಿಮ್ಮ ಹುಟ್ಟಿದ ದಿನಾಂಕ ನಮೂದಿಸಬೇಕು.  ಪುರುಷರಾಗಿದ್ದರೆ ಮೇಲ್ ಸ್ತ್ರಿಯಾಗಿದ್ದರೆ ಫಿಮೇಲ್ ಆಯ್ಕೆ ಮಾಡಿಕೊಳ್ಳಬೇಕು. ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡನಂತರ ನಿಮ್ಮ ಮತದಾರರ ಕ್ಷೇತ್ರ ಅಂದರೆ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಮುಂದೆ ಕಾಣು ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು, ಚುನಾವಣಾ ಗುರುತಿನ ಚೀಟಿ ಸಂಖ್ಯೆ, ವಯಸ್ಸು, ತಂದೆಯ ಹೆಸರು, ರಾಜ್ಯ, ಜಿಲ್ಲೆ, ನಿಮ್ಮಚುನಾವಣಾ ಪೋಲಿಂಗ್ ಸ್ಥಳ, ತಾಲೂಕು ಹಾಗೂ ಜಿಲ್ಲೆ ಕಾಣುತ್ತದೆ.

ನಿಮ್ಮ ವೋಟರ್ ಐಡಿಯನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

ಚುನಾವಣಾ ಗುರುತಿನ ಚೀಟಿಯನ್ನು ಈಗ ಆನ್ಲೈನ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಹೌದು, ಈ

https://voterportal.eci.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, ಆಗ ಆಗ ಚುನಾವಣಾ ಆಯೋಗದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬಲ್ ನಂಬರ್ ಅಥವಾ ಈ ಮೇಲ್ ಐಡಿ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಲಾಗಿನ್ ಮಾಡಿಕೊಂಡಿರದಿದ್ದರೆ ಕ್ರಿಯೇಟ್ ಆ್ಯನ್ ಅಕೌಂಟ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಎರಡರಲ್ಲಿ ಯಾವುದಾದರೊಂದನ್ನು ನಮೂದಿಸಬೇಕು. ನಂತರ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.  ನಂತರ ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಡೌನ್ಲೋಡ್- ಇಪಿಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರ ಡಿಜಿಟಲ್ ಮತದಾರರ ಐಡಿಯನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಆಗುತ್ತದೆ.

ಒಂದು ವೇಳೆ ನಿಮಗೆ ತಾಂತ್ರಿಕ ತೊಂದರೆಯಾದರೆ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು. 1950 ಸಹಾಯವಾಣಿ ನಂಬರಿಗೆ ಕರೆ ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ

18 ವಯೋಮಾನದವರು ಒಂದು ವೇಳೆ ತಮ್ಮ ಹೆಸರು ನೋಂದಣಿ ಮಾಡಿಸಿದ್ದರೆ ಅವರು ಆನ್ಲೈನ್ ನಲ್ಲೇ ತಮ್ಮ ಹೆಸರು ಪರಿಶೀಲಿಸಬಹುದು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೆ ಆನ್ಲೈನ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಚುನಾವಣಾ ಗುರುತಿನ ಚೀಟಿ ಕೇವಲ ಮತಹಾಕಲು ಕೆಲಸಕ್ಕೆಬರುವುದಿಲ್ಲ. ಸರ್ಕಾರಿ ಕೆಲಸಗಳಿಗೆ ಗುರುತಿನ ಚೀಟಿಯಾಗಿಯೂ ಇದು ಉಪಯೋಗವಾಗುತ್ತದೆ. ಹಾಗಾಗಿ ಪಿಡಿಎಫ್ ಫೈಲ್ ನ್ನು ತಮ್ಮ ಮೊಬೈಲ್ ನಲ್ಲೇ ಸೇವ್ ಮಾಡಿಕೊಂಡು ತಮಗೆ ಬೇಕಾದಾಗ ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

Leave a Comment