ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಪಹಣಿಯಲ್ಲಿ ಹೆಸರು ತಪ್ಪಾಗಿರುವುದನ್ನು ಸಹ ಸರಿಪಡಿಸಬಹುದು. ಪಹಣಿಯಲ್ಲಿ ಹೆಸರು ತಪ್ಪಾಗಿರುವುದನ್ನು ಬಹುತೇಕ ರೈತರು ಗಮನಿಸುವುದಿಲ್ಲ. ಆದರೆ ಎಲ್ಲಾ ದಾಖಲಾತಿಗಳಂತೆ ಪಹಣಿಯಲ್ಲಿ ರೈತರ ಹೆಸರು ಅಥವಾ ತಂದೆಯ ಹೆಸರು ತಪ್ಪಾಗಿದ್ದರೆ ಅದನ್ನು ಸರಿಪಡಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.
ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು
ಪಹಣಿಯಲ್ಲಿ ಹೆಸರು ತಿದುಪಡಿ ಮಾಡಬೇಕಾದರೆ ರೈತರು 1964 ರಿಂದ ಪಹಣಿಗಳನ್ನು ಪಡೆಯಬೇಕು. ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು 20 ರೂಪಾಯಿಯ ಇ ಸ್ಟ್ಯಾಂಪ್ ಪೇಪರ್ ಪಡೆದುಕೊಳ್ಳಬೇಕು. ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವ ಕುರಿತು ಮಾದರಿ ಅರ್ಜಿ ಬೇಕು. ತಹಶೀಲ್ದಾರ ಕಚೇರಿಯ ಎದುರುಗಡೆ ಟೈಪಿಸ್ಟ್ ಕೇಂದ್ರಗಳಲ್ಲಿ ಅರ್ಜಿಯ ಮಾದರಿ ಸಿಗುತ್ತದೆ. ಅರ್ಜಿಯಲ್ಲಿ ಏನೇನು ಬರೆಯಬೇಕೆಂಬುದನ್ನು ಅವರೇ ತಿಳಿಸುತ್ತಾರೆ. ಇದರೊಂದಿಗೆ ರೈತನ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಬೇಕು. ಆಧಾರ್ ಕಾರ್ಡ್ ನಲ್ಲಿ ಹೆಸರು ತಂದೆಯ ಹೆಸರು ಇರುವಂತೆ ಪಹಣಿಯಲ್ಲಿಯೂ ಬದಲಾವಣೆಯಾಗುತ್ತದೆ.
ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಅರ್ಜಿ ಎಲ್ಲಿ ಸಲ್ಲಿಸಬೇಕು?
ಪಹಣಿಯಲ್ಲಿ ಹಸೆರು ತಿದ್ದುಪಡಿ ಮಾಡಲು 1964 ರಿಂದ ಪಹಣಿಗಳು, 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್, ಅರ್ಜಿ ಹಾಗೂ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ತಾಲೂಕು ಕಚೇರಿಯಲ್ಲಿರುವ ಭೂಮಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಭೂಮಿ ಕೇಂದ್ರದವರು ಗ್ರಾಮಕ್ಕೆಸಂಬಂಧಿಸಿದ ಗ್ರಾಮ ಲೆಕ್ಕಿಗರು ಬಳಿ ಸದರಿ ದಾಖಲೆಗಳು ಕಳಿಸುತ್ತಾರೆ. ಆಗ ಗ್ರಾಮ ಲೆಕ್ಕಿಗರು ದಾಖಲೆಗಳನ್ನು ಪರಿಶೀಲಿಸುತ್ತಾರೆ. ದಾಖಲೆಗಳು ತಪ್ಪಾಗಿದ್ದರೆ ಗ್ರಾಮ ಲೆಕ್ಕಿಗರು ಅರ್ಜಿಯನ್ನು ತಿರಸ್ಕರಿಸಬಹುದು.
ಇದನ್ನೂ ಓದಿ: ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಅತ್ಯಂತ ಸರಳ ವಿಧಾನದ ಮಾಹಿತಿ
ಅರ್ಜಿಯೊಂದಿಗೆ ಸಲ್ಲಿಸಿದ ಎಲ್ಲಾ ದಾಖಲಾತಿಗಳು ಸರಿಯಿದ್ದರೆ ಪರಿಶೀಲಿಸಿ ಹೆಸರು ತಿದ್ದುಪಡಿ ಮಾಡಲು ಗ್ರಾಮ ಲೇಖಪಾಲಕರು ಭೂಮಿ ಕೇಂದ್ರಕ್ಕೆ ಕಳುಹಿಸುತ್ತಾರೆ.. ಆಗ ಭೂಮಿ ಕೇಂದ್ರದವರು ಅರ್ಜಿಯಲ್ಲಿ ನಮೂದಿಸಿರುಂತೆ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುತ್ತಾರೆ. ಈ ರೀತಿಯಲ್ಲಿ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಬಹುದು.
ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದರಿಂದ ಆಗುವ ಉಪಯೋಗಗಳು
ರೈತರಿಗೆ ಅತ್ಯಂತ ಅಮೂಲ್ಯವಾದ ದಾಖಲೆ ಪಹಣಿಯಾಗಿರುತ್ತದೆ. ಪಹಣಿಯಲ್ಲಿ ಹೆಸರು, ತಂದೆಯ ಹೆಸರು, ಸರ್ವೆ ನಂಬರ್, ಮುಟೇಷನ್, ಖಾತಾ ಇದ್ದರೆ ಯಾವುದೇ ತೊಂದರೆಯಾಗುವುದಿಲ್ಲ. ಜಮೀನನ್ನು ಮಾರುವಾಗ, ಕೊಳ್ಳುವಾಗ ಜಮೀನು ನೋಂದಣಿಯಾಗುತ್ತದೆ. ಆಗ ಖರೀದಿ ಮತ್ತು ಮಾರಲು ತಕರಾರು ಆಗುವುದಿಲ್ಲ. ಜಮೀನಿನಲ್ಲಿ ಹೆಸರು ಸರಿಯಿದ್ದರೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ಸಿಗುವುದು. ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಬೆಳೆ ಬೆಳೆ ಸಾಲ ಪಡೆದುಕೊಳ್ಳುವಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಪಹಣಿಯಲ್ಲಿ ರೈತನ ಮತ್ತು ತಂದೆಯ ಹೆಸರು ಆಧಾರ್ ಕಾರ್ಡ್ ನಂತೆ ಇರದಿದ್ದರೆ ಸಾಲ ಸಿಗುವ ಸಾಧ್ಯತೆಯೂ ಕಡಿಮೆಯಿರುತ್ತದೆ.
ಇದನ್ನೂ ಓದಿ: ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಿ.. ಇಲ್ಲಿದೆ ಸಂಪೂರ್ಣ ಮಾಹಿತಿ