Pahani Adhar link ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಇದರೊಂದಿಗೆ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಹೇಗೆ ಲಿಂಕ್ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ
ನಿಮ್ಮ ಪಹಣಿಗೆ ಆಧಾರ್ ಕಾರ್ಡ್ ನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಲಿಂಕ್ ಮಾಡಬಹುದು. ಇದರಿಂದಾಗಿ ಯಾವುದೇ ಮ್ಯುಟೇಷನ್ ವಿನಂತಿಯು ನೋಂದಾಯಿತ ಸರ್ವೆ ನಂಬರ್ ಗಳ ಮೇಲೆ ಪ್ರಾರಂಭವಾದರೆ ಸ್ವಯಂಚಾಲಿತ ಎಚ್ಚರಿಕೆಯ ಸಂದೇಶ ಬರುತ್ತದೆ. ಪಹಣಿಯಲ್ಲಾಗುವ ಎಲ್ಲಾ ಮಾಹಿತಿಗಳನ್ನು ಮೊಬೈಲ್ ನಲ್ಲಿಯೇ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ?
ಇತ್ತೀಚೆಗೆ ಎಲ್ಲವೂ ಆನ್ಲೈನ್ ಆಗುತ್ತಿದೆ. ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್, ಪ್ಯಾನ್ ಕಾರ್ಡ್ ಗೆ ಮೊಬೈಲ್ ನಂಬರ್, ಬ್ಯಾಂಕ್ ಪಾಸ್ಬುಕ್ ಗೆ ಆಧಾರ್ ಲಿಂಕ್ ಹೀಗೆ ಒಂದಕ್ಕೆ ಮತ್ತೊಂದು ಲಿಂಕ್ ಸಾಮಾನ್ಯವಾಗಿದೆ. ರೈತರ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಸಹ ಅತ್ಯಗತ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ.
Pahani Adhar link ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ರೈತರು ಮೊದಲು ಈ
https://landrecords.karnataka.gov.in/service4
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಭೂಮಿ ಆನ್ಲೈನ್ ಸಿಟಿಜನ್ ರೆಜಿಸ್ಟ್ರೇಷನ್ ಪೇಜ್ ಓಪನ್ ಆಗುತ್ತದೆ.
ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ಮೊಬೈಲ್ ನಂಬರ್ ನಮೂದಿಸಿ ಜೆನರೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಅಲ್ಲಿ ಓಟಿಪಿ ನಮೂದಿಸಿ ವೆರಿಫೈ ಮೇಲೆ ಕ್ಲಿಕ್ ಮಾಡಬೇಕು.
ಆಗ ಭೂಮಿ ಆನ್ಲೈನ್ ನಾಗರಿಕ ನೋಂದಣಿ ಎಸ್ಎಂಎಸ್ ಎಚ್ಚರಿಕೆಗಾಗಿ ಎಂಬ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರ ವಿವರಗಳ ಕಾಲಂನಲ್ಲಿ ನಾಗರಿಕನ ಹೆಸರು ಬಂದಿರುತ್ತದೆ. ತಂದೆಯ ಹೆಸರು, ವಿಳಾಸ, ಚುನಾವಣೆ ಗುರುತಿನ ಚೀಟಿ ಸಂಖ್ಯೆ ನಮೂದಿಸಬೇಕು. ಪಿನ್ ಕೋಡ್ ನಂಬರ್ ನಮೂದಿಸಿ ಪರ್ಯಾಯ ಮೊಬೈಲ್ ಸಂಖ್ಯೆ ನಿಮ್ಮ ಮನೆಯ ಇನ್ನೊಂದು ನಂಬರ್ ಪತ್ನಿ, ಅಥವಾ ಮಕ್ಕಳಿದ್ದರೆ ಆ ನಂಬರ್ ನಮೂದಿಸಬೇಕು. ನಂತರ ಡಾಕುಮೆಂಟ್ ಅಪ್ಲೋಡ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಅಪ್ಲೋಡ್ ಮಾಡಬೇಕು. ಆಗ ಅಪ್ಲೋಡ್ ಸಕ್ಸೆಸ್ ಫುಲ್ ಎಂಬ ಮೆಸೆಜ್ ಬರುತ್ತದೆ. ಆಮೇಲೆ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಸರ್ವೆ ಸಂಖ್ಯೆ ವಿವರಗಳಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ನಿಮ್ಮ ಪಹಣೆಯ ಸರ್ವೆ ನಂಬರ್ ಹಾಕಬೇಕು. ಸ್ಟಾರ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ಹಾಕಬೇಕು. ಕೆಳಗಡೆ ಕ್ಯಾಪ್ಚ್ಯಾ ನಮೂದಿಸಿದ ನಂತರ ಮಾಲೀಕರ ಹಸೆರು ಕಾಣುತ್ತದೆ. ಆಗ ನಿಮ್ಮ ಹೆಸರು ಬಾಕ್ಸ್ ಮೇಲೆ ಕ್ಲಿಕ್ ಮಾಡಿಬೇಕು. ಕೆಳಗಡೆ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸೇರಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ Added successfully ಎಂದು ಕಾಣುತ್ತದೆ ಒಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಜಿಲ್ಲೆ, ತಾಲೂಕು, ಗ್ರಾಮ, ಮಾಲೀಕನ ಹೆಸರು, ಸರ್ವೆನಂಬರ್, ಹಿಸ್ಸಾ ನಂಬರ್ ಎಲ್ಲವೂ ಕಾಣುತ್ತದೆ. ಉಳಿಸು ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಆಧಾರ್ ಕಾರ್ಡ್ ಪಹಣಿಗೆ ಲಿಂಕ್ ಆಗಿರುತ್ತದೆ. ಇದಕ್ಕೆ ಯಾರ ಸಹಾಯವೂ ಬೇಕಿಲ್ಲ.