ಜಮೀನಿನ ಪಹಣಿಯಲ್ಲಿ ಜಂಟಿ ಖಾತೆಯಿದ್ದರೂ ಸಹ ಬಹುತೇಕ ರೈತರು ಬದಲಾಯಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಇತ್ತೀಚೆಗೆ ಎಲ್ಲವೂ ಆನ್ಲೈನ್ ಕೆಲಸವಾಗುತ್ತಿರುವುದರಿಂದ ಜಂಟಿಖಾತೆಯಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರೈತ ತನ್ನ ಜಮೀನಿನನಲ್ಲಿ ಉಳುಮೆ ಮಾಡುತ್ತಿದ್ದರೂ ಸಹ ಸಹೋದರರ ಅಥವಾ ಅಕ್ಕಪಕ್ಕದ ಜಮೀನಿನ ಮಾಲೀಕರ, ಅಥವಾ ಇನ್ನಾರದೋ ಹೆಸರು ಸೇಪರ್ಡೆಯಾಗಿರುತ್ತದೆ. ಒಂದೇ ಪಹಣಿಯಲ್ಲಿ ಜಂಟಿ ಖಾತೆಯಿದ್ದರೆ ಅಥವಾ ಜಂಟಿಖಾತೆಯಿದ್ದರೆ ಅದನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ

ಜಂಟಿ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆ ಹೇಗೆ?

ಪಹಣಿಯ ಕಾಲಂನ 9 ರಲ್ಲಿ ಹಲವಾರು ರೈತರ ಅಥವಾ ಖಾತೆದಾರರ ಹೆಸರು ಇರುತ್ತದೆ. ಅಂತಹವರು ಮೊದಲು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಜಮೀನಿಗೆ ಭೂಮಾಪಕರು ಬಂದು ಸರ್ವೆ ಮಾಡಿ ಅಳತೆ ಮಾಡುತ್ತಾರೆ. ನಂತರ ಜಮೀನಿಗೆ ದಾಖಲೆಗಳನ್ನು ಸಿದ್ದಪಡಿಸುತ್ತಾರೆ. ಪೋಡಿ ಕಾರ್ಯ ಮುಗಿದ 21 ದಿನಗಳ ನಂತರ ಸರ್ವೆ ಇಲಾಖೆಯಿಂದ 11 ಇ ನಕ್ಷೆ ಪಡೆದುಕೊಂಡು ನೋಂದಣಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಸಬ್ ರಿಜಸ್ಟರ್  ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಜಂಟಿ ಖಾತೆಯನ್ನು ಬದಲಾವಣೆ ಮಾಡುವುದು ಹೇಗೆ?

ಒಂದು ವೇಳೆ ಪೌತಿ ಖಾತೆಯಡಿ ಹಲವಾರು ಜನರ ಜಂಟಿ ಖಾತೆಯಿದ್ದರೆ ಪಹಣಿಯಲ್ಲಿರುವ ಎಲ್ಲರೂ ಪರಸ್ಪರ ಮಾತುಕತೆ ಒಪ್ಪಿಗೆ ಮೂಲಕ ನೇರವಾಗಿ ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಬೇಕು. ಭೂ ಮಾಪಕರು ಅಳತೆ ಕಾರ್ಯಕ್ಕೆ ಬರುತ್ತಾರೆ. ಪಹಣಿಯಲ್ಲಿರುವ ಎಲ್ಲರ ಹಾಜರಿರಬೇಕು. 11 ಇ ನಕ್ಷೆ ಮಾಡಿಸಿಕೊಳ್ಳಬೇಕು. 11 ನಕ್ಷೆಯೊಂದಿಗೆ ಇನ್ನಿತರ ದಾಖಲೆಗಳೊಂದಿಗೆ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಒಂದು ವೇಳೆ ಪಹಣಿಯಲ್ಲಿ ಫಾರಂ ನಂ 10 ಇದ್ದಲ್ಲಿ ಅದರೆ ಪ್ರತ್ಯೇಕ ನಕ್ಷೆಯಿದ್ದಲ್ಲಿ ಒಬ್ಬರು ದಾನಪತ್ರದ ಮೂಲಕ ನೋಂದಣಿ ಮಾಡಿಸಬಹುದು. ಈ ಮೂಲಕ ಸಹ ಜಂಟಿ ಖಾತೆಯಿಂದ ಸಿಂಗಲ್ ಖಾತೆಯಾಗಿ ಹೆಸರು ಬದಲಾಯಿಸಬಹುದು.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಜಮೀನಿಗೆ 11 ಇ ನಕ್ಷೆ ಇಲ್ಲದಿದ್ದಲ್ಲಿ 11 ಇ ನಕ್ಷೆ ಮಾಡಿಸಿ ನಂತರ ದಾನ ಮತ್ತು ವಿಭಾಗ ಮಾಡಿಕೊಳ್ಳಬಹುದು.

ಜಂಟಿ ಖಾತೆಯಿಂದ ಏಕಮಾತ್ರ ಖಾತೆಗೆ ಬೇಕಾಗುವ ದಾಖಲೆಗಳು

ಸರ್ವೆ ಇಲಾಖೆ ಸರ್ವೆ ಮಾಡಿದ ನಂತರ ನೀಡುವ 11 ಇ ನಕ್ಷೆ, ಅಧಾರ್ ಕಾರ್ಡ್, ಸಾಕ್ಷಿದಾರರ ಹೆಸರು, ವಂಶಾವಳಿ ಪ್ರಮಾಣ ಪತ್ರ ಇರಬೇಕು. ಜಂಟಿಖಾತೆಯಿಂದ ಹೆಸರು ತೆಗೆಯಬೇಕಾದರೆ ಪಹಣಿಯಲ್ಲಿರುವ ಎಲ್ಲರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ  ಜಮೀನಿನ ಪ್ರತ್ಯೇಕ ಹಕ್ಕು ಪತ್ರ ಪಡೆಯಲು ಪಹಣಿ ಮತ್ತು ಫಾರ್ಮ್ ನಂ 10 ಕಡ್ಡಾಯವಾಗಿ ಬೇಕು.

ಜಂಟಿ ಖಾತೆಯಿಂದ ರೈತರಿಗಾಗುವ ಸಮಸ್ಯೆಗಳು

ಬ್ಯಾಂಕ್ ಗಳು ಸಾಲಸೌಲಭ್ಯ ನೀಡಲು ರೈತರ ಪಹಣಿ ಕೇಳುತ್ತಾರೆ. ಪಹಣಿಯಲ್ಲಿ ಜಂಟಿಖಾತೆಯಿದ್ದರೂ ಸಾಲ ಕೊಡಲು ಹಿಂಜರಿಯುತ್ತಾರೆ. ಅಷ್ಟೇ ಅಲ್ಲ ಸರ್ಕಾರಿ ಸೌಲಭ್ಯಗಳು ಸಿಗುವ ಸಾಧ್ಯತೆ ಕಡಿಮೆಯಿರುತ್ತದೆ. ಬೆಳೆ ಪರಿಹಾರ ಧನ ಸಿಗುವುದಿಲ್ಲ.  ಜಂಟಿ ಖಾತೆಯಿದ್ದರೆ ಜಮೀನನ್ನು ಮಾರಾಟ ಮಾಡಲು ಆಗುವುದಿಲ್ಲ.

ಜಮೀನಿನ ವಿಷಯದಲ್ಲಿ ಸಮಸ್ಯೆಗಳಿದ್ದರೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಆದಷ್ಟು ಬೇಗ ಜಮೀನಿನಲ್ಲಿ ಜಂಟಿ ಖಾತೆಯಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮುಂದಾಗುವ ತೊಂದರೆಗಳನ್ನು ಈಗಲೇ ಬಗೆಹರಿಸಿಕೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *