ರೈತರು ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಮುಂಗಾರು, ಹಿಂಗಾರು ಬೆಳೆಗಳಂತೆ ಬೇಸಿಗೆ ಬೆಳೆಗಳಿಗೂ ವಿಮೆ ಮಾಡಿಸಿದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಮೊಬೈಲ್ ನಲ್ಲೇ ಪರಿಶೀಲಿಸಬಹುದು.  ಮುಂಗಾರು ಹಿಂಗಾರು ಬೆಳೆಗಳಂತೆ ಬೇಸಿಗೆ ಬೆಳೆಗಳಿಗೂ ವಿಮೆ ಮಾಡಿಸಬಹುದು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರು ವಿಮೆ ಮಾಡಿಸಿದ ನಂತರ ರೈತರಿಗೆ ವಿಮೆ ಪರಿಹಾರ ಹಣ ಜಮೆಯಾಗುವುದು.

ರೈತರು ಬೇಸಿಗೆ ಹಂಗಾಮು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ರೈತರ ವಂತಿಗೆ ಎಷ್ಟು ಹಣ ಕಟ್ಟಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಂತಿಗೆ ಎಷ್ಟಿರುತ್ತದೆ. ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ ವಿಮಾ ಕಂಪನಿಯಿಂದ ಹಣ ಎಷ್ಟು ಜಮೆಯಾಗುವುದನ್ನು ನೋಡಬಹುದು.

ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ರೈತರು ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Premium calculator ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ

https://www.samrakshane.karnataka.gov.in/Premium/Premium_Chart.aspx

ಲಿಂಕ್ ಮೇಲ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ crop ಕಾಲಂನಲ್ಲಿ ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಿಕೊಡಿ ನೀವ ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಎಷ್ಟು ಎಕರೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅದನ್ನು ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು.  ಆಗ ಹೆಕ್ಟೇರಿಗೆ ಅಂದಾಜು ಎಷ್ಟು ವಿಮೆ ಹಣ ಜಮೆಯಾಗುತ್ತದೆ. ನಂತರ ನೀವು ನಮೂದಿಸಿದ ಎಕರೆಗೆ ಎಷ್ಟು ಹಣ ಜಮೆಯಾಗುತ್ತದೆ ಎಂಬುದು Sum insured  ಕೆಳಗಡೆ ಕಾಣುತ್ತದೆ. ನಂತರ ಗ್ರಾಸ್ ಪ್ರಿಮಿಯಂ ನಲ್ಲಿ ನಿಮ್ಮ ಪಾಲು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಒಟ್ಟು ಎಷ್ಟು ಪ್ರಿಮಿಯಂ ಕಟ್ಟಲಾಗುವುದು ಎಂಬುದು ಗ್ರಾಸ್ ಪ್ರಿಮಿಯಂ ಕಾಲಂನಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ PM kisan ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ: ಮೊಬೈಲ್ ನಲ್ಲೆ ಚೆಕ್ ಮಾಡಿ ಯಾವ ಪಟ್ಟಿಯಲ್ಲಿದೆ ನಿಮ್ಮ ಹೆಸರು

ಉದಾಹರಣೆಗೆ ನೀವು ಭತ್ತ ಬೆಳೆಗೆ ವಿಮೆ ಮಾಡಿಸುವುದಾದರೆ ಒಂದು ಎಕರೆಗೆ 34804 ರೂಪಾಯಿಯವರೆಗೆ ವಿಮೆ ಹಣ ಹೆಕ್ಟೇರಿಗೆ 86 ಸಾವಿರ ರೂಪಾಯಿ ಜಮೆಯಾಗುತ್ತದೆ. ನೀವು 522 ರೂಪಾಯಿ ಪಾವತಿಸಬೇಕು.

ಅದೇ ರೀತಿ ನೀವು ಶೇಂಗಾ (ನೆಲಗಡಲೆ) ಬೆಳೆಗೆ ವಿಮೆ ಮಾಡಿಸುವುದಾದರೆ ಎಕೆರೆಗ 346 ರೂಪಾಯಿ ಪಾವತಿಸಬೇಕು. ಬೆಳೆ ಹಾಳಾದ ನಂತರ ನಿಮಗೆ 23 ಸಾವಿರ ರೂಪಾಯಿಯವರೆಗೆ ವಿಮೆಯ ಹಣ ಜಮೆಯಾಗುತ್ತದೆ.

ಸೂರ್ಯಕಾಂತಿ ಬೆಳೆಗೆ ವಿಮೆ ಮಾಡಿಸುವುದಾದರೆ ರೈತರು ಎಕರೆಗೆ 254 ರೂಪಾಯಿ ವಿಮಾ ಹಣ ಪಾವತಿಸಬೇಕು. ಪ್ರಾಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ 16997 ರೂಪಾಯಿಯವರೆಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುತ್ತದೆ. ಹೆಕ್ಟೇರಿಗೆ 42 ಸಾವಿರ ರೂಪಾಯಿ ಜಮೆಯಾಗುತ್ತದೆ.

ಟೊಮ್ಯಾಟೋ ಬೆಳೆಗೆ ವಿಮೆ ಮಾಡಿಸುವದಾದರೆ ನೀವು ಎಕರೆಗೆ 2387 ರೂಪಾಯಿ ರೈತರ ವಂತಿಗೆ ವಿಮೆ ಹಣ ಪಾವತಿಸಬೇಕು. ರೈತ ಬೆಳೆ ಹಾನಿಯಾದಾಗ 47700 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗುತ್ತದೆ.

Leave a Reply

Your email address will not be published. Required fields are marked *