1 ಗಿಡಕ್ಕೆ 19 ಕೆಜಿಯವರೆಗೆ ಇಳುವರಿ ಕೊಡುವ ಟೊಮ್ಯಾಟೋ ತಳಿ

Written by By: janajagran

Updated on:

ತರಕಾರಿ ಖರೀದಿ ಮಾಡುವವರು ಟೊಮ್ಯಾಟೋ ಇಲ್ಲದೆ ಮನೆಗೆ ಬರುವುದಿಲ್ಲ. ಇತ್ತೀಚೆಗೆ ಹುಣಸೆ ಸ್ಥಾನವನ್ನು ಟೊಮ್ಯಾಟೋ ಕಸಿದುಕೊಂಡಿದ್ದರಿಂದ ಟೊಮ್ಯಾಟೋಗೆ ಹೆಚ್ಚು ಬೇಡಿಗೆ ಬಂದಿದೆ. ಇತ್ತೀಚೆಗೆ ಹೆಚ್ಚು ಇಳುವರಿ ಕೊಡುವ (High yielding tomato varieties)ಸಾಕಷ್ಟು ತಳಿಗಳು ಬಂದಿವೆ.

ಆದರೆ ಕೆಲವು ರೈತರಿಗೆ ಹೆಚ್ಚು ಇಳುವರಿ ಕೊಡುವ ಟೊಮ್ಯಾಟೊ ಬಗ್ಗೆ ಮಾಹಿತಿ ಇರಲಿಕಿಲ್ಲ. ಅಬ್ಬಬ್ಬ ಎಂದರೆ ಒಂದು ಗಿಡ 5 ರಿಂದ 10 ಕೆಜಿಯವರೆಗೆ ಟೊಮ್ಯಾಟೋ ಇಳುವರಿ ಕೊಡುವುದರ ಬಗ್ಗೆ ಕೇಳಿರಬಹುದು. ಆದರೆ ನಾನು ಹೇಳುತ್ತಿರುವುದು ಒಂದು ಗಿಡಕ್ಕೆ ಸುಮಾರು 19 ಕೆಜಿಯವರೆಗೆ ಇಳುವರಿ ಕೊಡುವ ಟೊಮ್ಯಾಟೋ ತಳಿಗಳು ಇವೆ.  ಇದನ್ನು ನಂಬಲೇ ಬೇಕು.

ನಾವು ಇಲ್ಲಿ ಹೇಳುತ್ತಿರುವುದು  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ ಆರ್)  ಕಂಡು ಹಿಡಿದ ಹೊಸ ತಳಿ. ಇವು ಒಂದೊಂದು ಗಿಡ ಸುಮಾರು 19 ಕೆಜಿಯವರೆಗೆ ಇಳುವರಿ ಕೊಡುತ್ತವೆ. ಈ ತಳಿಯ  ಹೆಸರು “ARKA RAKSHAK ಇನ್ನೊಂದು ARKA SAMRAT.

High yielding tomato varieties ಅರ್ಕಾ ರಕ್ಷಕ್ (ARKA RAKSHAK):

ಅಧಿಕ ಇಳುವರಿ ನೀಡುವ ಈ ಹೈಬ್ರಿಡ್ ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು, ನಂಜುರೋಗ, ದುಂಡು ರೋಗಾಣುವಿನಿಂದ ಸೊರಗು ಹಾಗೂ ಎಲೆಚುಕ್ಕೆರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯುದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು, ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತದೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲ ಕಟಾವು ಮಾಡಬಹುದು. ಹಣ್ಣುಗಳು 80 ರಿಂದ 90 ಗ್ರಾಂ ಸರಾಸರಿ ತೂಕ ಇರುತ್ತದೆ. ಹಣ್ಣುಗಳು ದಟ್ಟ ಕೆಂಪು ಬಣ್ಣದ್ದಾಗಿರುತ್ತವೆ. ಕಟಾವು ಮಾಡಿದ ನಂತರ 20 ರಿಂದ 25 ದಿನಗಳ ವರೆಗೆ ಇಡಬಹುದು. ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಪ್ರತಿ ಹೆಕ್ಟೇರಿಗೆ 75 ರಿಂದ 80 ಟನ್ ಸರಾಸರಿ ಇಳುವರಿಯನ್ನು 140-145 ದಿನಗಳಲ್ಲಿ ನೀಡುತ್ತದೆ.

ಅರ್ಕಾ ಸಾಮ್ರಾಟ್ (ARKA SAMRAT)

ಅಧಿಕ ಇಳುವರಿ ನೀಡುವ ಈ ಹೈಬ್ರಿಡ್ ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು, ನಂಜುರೋಗ, ದುಂಡು ರೋಗಾಣುವಿನಿಂದ ಸೊರಗು ಹಾಗೂ ಎಲೆಚುಕ್ಕೆರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯುದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು, ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತದೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲ ಕಟಾವು ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಹಣ್ಣುಗಳು ಗುಂಡಾಗಿದ್ದು, ಪ್ರತಿ ಹಣ್ಣಿನ ತೂಕ ಸರಾಸರಿ 90 ರಿಂದ 100 ಗ್ರಾಂ ಇರುತ್ತದೆ. ಕಟಾವು ಮಾಡಿದ ನಂತರ 20 ರಿಂದ 25 ದಿನಗಳ ವರೆಗೆ ಇಡಬಹುದು. ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಪ್ರತಿ ಹೆಕ್ಟೇರಿಗೆ 80 ರಿಂದ 85 ಟನ್ ಸರಾಸರಿ ಇಳುವರಿಯನ್ನು 140-145 ದಿನಗಳಲ್ಲಿ ನೀಡುತ್ತದೆ.

ಅರ್ಕಾ ಅನನ್ಯ (ARKA ANANYA)

ಅರ್ಕಾ ಅನ್ಯ ಸಹ ಅಧಿಕ ಇಳುವರಿ ಕೊಡುವ ಸಂಕರಣ ತಳಿಯಾಗಿದ್ದು, ಎಲೆ ಮುದುಡುಹಾಗೂ ದುಂಡಾಣು ಸೊರಗು ರೋಗ ನಿರೋಧಕ ಶಕ್ತಿಯನ್ನು ಪಡೆದಿದೆ. ಹಣ್ಣುಗಳು ಗುಂಡಾಗಿದ್ದು ಗಟ್ಟಿಯಾಗಿರುತ್ತವೆ. ಕಾಯಿಗಳು ಹಣ್ಣಾದಾಗ ಕಡು ಕೆಂಪು ಬಣ್ಣಕ್ಕೆ ತಿರುಗತ್ತವೆ. 140 ದಿನಗಳಲ್ಲಿ ಪ್ರತಿ ಹೆಕ್ಟೇರಿಗೆ ಸುಮಾರು 65 ರಿಂದ 70 ಟನ್ ಇಳುವರಿ ಕೊಡುತ್ತದೆ.

ಇವಷ್ಟೇ ಅಲ್ಲ ಇನ್ನೂ ಹೆಚ್ಚು ಇಳುವರಿ ಕೊಡುವ ಟೊಮ್ಯೊಟೋ ತಳಿಗಳು ಬಂದಿವೆ. ಖರೀದಿ ಮಾಡುವಾಗ ಇಳುವರಿ ಬಗ್ಗೆ ಮಾಹಿತಿ ಪಡೆದು ಖರೀದಿಸಿ ಹೆಚ್ಚು ಆದಾಯ ಗಳಿಸಿಕೊಳ್ಳಿ.

Leave a Comment