ಹೆಚ್ಚು ಇಳುವರಿ ಕೊಡುವ ಹೆಸರು ತಳಿಗಳ ಮಾಹಿತಿ ಇಲ್ಲಿದೆ

Written by By: janajagran

Updated on:

High yield Green gram varieties ಹೆಸರು ಕಡಿಮೆ ಅವಧಿಯ ಬೆಳೆಯಾಗಿದೆ. ಇದನ್ನು ಕಪ್ಪು, ಕೆಂಪು ಮಣ್ಣಿನ ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಬೆಳೆಯುವ ಬೆಳೆಯಾಗಿದೆ. ಬೇಸಿಗೆಯಲ್ಲಿ ನೀರಾವರಿಯಾಗಿ ಬೆಳೆಯಬಹುದು. ಆದರೆ ಕರ್ನಾಟಕದಲ್ಲಿ ಮುಂಗಾರಿಗೆ ಹೆಚ್ಚು ಬೆಳೆಯುತ್ತಾರೆ. ಇನ್ನೇನು ಮುಂದಿನ ವಾರ ಮುಂಗಾರು ಆರಂಭವಾಗವುದರಿಂದ ರೈತರಗೆ ಅನುಕೂಲವಾಗಲೆಂದು ಇಲ್ಲಿ ಹೆಚ್ಚು ಇಳುವರಿ ಕೊಡುವ (High yield Green gram varieties ) ಕೆಲವೊಂದು ಹೆಸರು ತಳಿಗಳ ಮಾಹಿತಿಯನ್ನು ನೀಡುತ್ತಿದ್ದೇನೆ.

High yield Green gram varieties ಹೆಚ್ಚು ಇಳುವರಿ ಕೊಡುವ ತಳಿಗಳು 

ಬಿಜಿಎಸ್-9,  ಪಿಎಸ್-16, ಪೂಸಾ ಬೈಸಾಕಿ, ಪಿಡಿಎಂ 84-178, ಕೆಕೆಎಂ-3 ತಳಿಗಳು ಹೆಚ್ಚು ಬೆಳೆಯಲಾಗುತ್ತದೆ. ಇವು ಹೆಚ್ಚಿನ ಉಷ್ಣತೆಗೆ ಸಹಿಷ್ಣುತೆ ಹೊದಿದೆ. ಅಲ್ಪಾವಧಿಯ ತಳಿಯಾಗಿದ್ದದು, ಮಧ್ಯಮ ಗಾತ್ರದ ಸಾಧಾರಣ ಹೊಳಪಿನ ಕಾಳು ಹೊಂದಿರುತ್ತೇವೆ. ಒಂದೇ ಹಂತದಲ್ಲಿ ಕಟಾವಿಗೆ ಬರುತ್ತವೆ.

ಬಿಜಿಎಸ್-9

ಇದು ಎಲ್ಲಾ ಹವಾಗುಣಕ್ಕೆ ಹೊಂದುವ ಮತ್ತು ಅಧಿಕ ಇಳುವರಿ ಕೊಡುವ ತಳಇಯಾಗಿದ್ದು, ಇದನ್ನು ಬೀದರ್ ನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕ ಡಾ. ಸಿ.ಆರ್. ಕೊಂಡಾ ಸಂಶೋಧಿಸಿದ್ದಾರೆ. ಇದು ಉದ್ದನೆಯ ಕಾಳಗಳನ್ನು ಹೊಂದಿರುತ್ತದೆ. ಬೀಜ ದಪ್ಪವಾಗಿರುತ್ತದೆ. ಮಿಂಚು ಹಸಿರು ಬಣ್ಣ ಹೊಂದಿದೆ.  65 ದಿನಗಳಲ್ಲಿ ಕಟಾವಿಗೆ ಬರುತ್ತದೆ.  ಎಕರೆಗೆ 5-7 ಕ್ವಿಂಟಾಲ್ ಇಳುವರಿ ಕೊಡುತ್ತದೆ. ಕಾಳುಗಳು ದಪ್ಪವಾಗಿರುವುದರಿಂದ ಬೆಲೆ ಹೆಚ್ಚು ಬರುತ್ತದೆ.

ಪಿಎಸ್-16 ತಳಿ:

ಇದು 65-70 ದಿನಗಳಲ್ಲಿ ಕಟಾವಿಗೆ ಬರುತ್ತದೆ.4 ರಿಂದ 5 ಕ್ವಿಂಟಾಲ್ ಪ್ರತಿ ಎಕರೆಗೆ ಇಳುವರಿ ಪಡೆಯಬಹುದು. ಹೆಚ್ಚಿನ ಉಷ್ಣತೆ ಸಹಿಷ್ಣುತೆ ಹೊಂದಿದೆ. ಮೇ ತಿಂಗಳಲ್ಲಿ ಬಿತ್ತಬಹುದು.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಪೂಸಾ ಬೈಸಾಕಿ, ಪಿಡಿಎಂ 84-178 ತಳಿಗಳು 70-75 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕೆಕೆಎಂ-3 ತಳಿ 65 ರಿಂದ 70 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಲೆಚುಕ್ಕೆ ರೋಗಕ್ಕೆ ಸಹಿಷ್ಣುತೆ ಹೊಂದಿದೆ. ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ತವಾದ ತಳಿಯಾಗಿದೆ. ಅಲ್ಪಾವಧಿ, ಮಧ್ಯಮ ಗಾತ್ರದ ಸಾಧಾರಣ ಹೊಳಪಿನ ಕಾಳು ಹೊಂದಿದೆ. ಒಂದೇ ಹಂತದಲ್ಲಿ ಕಟಾವಿಗೆ ಬರುತ್ತದೆ.

ಪ್ರತಿ ಎಕರೆಗೆ 4-5 ಕ್ವಿಟಾಂಲ್ )Green gram yield per acre)

ಹೆಸರು ಬೆಳೆ ಪ್ರತಿ ಎಕರೆಗೆ 4-5 ಎಕರೆ ಇಳುವರಿ ಕೊಡುತ್ತದೆ. ಇದು 65-70 ದಿನಗಳಲ್ಲಿ ಕಟಾವಿಗೆ ಬರುತ್ತದೆ.4 ರಿಂದ 5 ಕ್ವಿಂಟಾಲ್ ಪ್ರತಿ ಎಕರೆಗೆ ಇಳುವರಿ ಪಡೆಯಬಹುದು.

ಬೀಜೋಪಚಾರ (Seed treatment)

ಬಿತ್ತನೆ ಮೊದಲು ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ ರೈಜೋಬಿಯಂ ಹಾಗೂ 200 ಗ್ರಾಂ ರಂಜಕ ಕರಗಿಸುವ ಜೀವಾಣುವಿನಿಂದ ಉಪಚರಿಸಿ, 12 ಅಂಗುಲದ ಸಾಲುಗಳಲ್ಲಿ 4 ಅಂಗುಲದ ಅಂತರದಲ್ಲಿ ಬಿತ್ತನೆ ಮಾಡಬಹುದು. ಬಿತ್ತಿದ 40 ದಿನಗಳೊಳಗೆ 2 ಸಲ ಅಂತರ ಬೇಸಾಯ ಮಾಡಿ ಕಳೆ ತೆಗೆಯಬಹುದು.

ಹೆಸರು ಬೆಳೆಯ ಬೆಲೆ (green gram today price)

ಸಾಮಾನ್ಯವಾಗಿ ಇತರ ಬೆಳೆಗೆ ಹೋಲಿಕೆ ಮಾಡಿದರೆ ಹೆಸರು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಹಾಗೂ ಲಾಭ ಕೊಡುತ್ತದೆ. ಇದರ ಬೆಲೆಯೂ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 5000 ದಿಂದ 6500 ರೂಪಾಯಿಯವರೆಗೆ ಇರುತ್ತದೆ. ಉತ್ಪಾದನೆ ಕಡಿಮೆಯಾದಾಗ 8000 ರೂಪಾಯಿಯವರೆಗೂ ಮಾರಾಟವಾಗುತ್ತದೆ.

ಇದನ್ನೂ ಓದಿ: ಹೆಚ್ಚು ಇಳುವರಿ ಕೊಡುವ ಬೆಂಡೆಕಾಯಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ

Leave a Comment