ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ- ಆರೇಂಜ್ ಅಲರ್ಟ್

Written by Ramlinganna

Updated on:

rain alert in uttara kannada ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಪ್ರವೇಶವಾಗಿದ್ದು, ಇನ್ನೂ ಮುಂದಿನ ಐದು ದಿನಗಳ ಕಾಲ ಇಂದಿನಿಂದ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಆರೇಂಜ್ ಅಲರ್ಟ್ ನೀಡಲಾಗಿದೆ.

ಉಳಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ್ಲಲಿ ಜೂನ್ 27 ರಿಂದ ಐದು ದಿನಗಳ ಕಾಲ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಮುಂದಿನ ಐದು ದಿನ ಉತ್ತಮ ಮಳೆಯಾಗುವ ಸಂಭವವಿದೆ. ಜುಲೈ 1 ರಂದು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅತ್ಯಧಿಕ ಮಳಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ 10 ರಂದು ರಾಜ್ಯಕ್ಕೆ ಮುಂಗಾರು ಮಳೆಯ ಪ್ರವೇಶವಾಗಿತ್ತು. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ರೂಪುಗೊಂಡ ಪರಿಣಾಮ ಮುಂಗಾರು ದುರ್ಬಲಗೊಂಡಿತ್ತು. ಹೀಗಾಗಿ ಮುಂಗಾರು ರಾಜ್ಯ ವ್ಯಾಪಿಸುವಲ್ಲಿಯೂ ವಿಳಂಬವಾಗಿತ್ತು. ಜೂನ್ 24 ರಂದು ಬೀದರ್ ಗೆ ಪ್ರವೇಶಿಸುವ ಮೂಲಕ ಇಡೀ ರಾಜ್ಯವನ್ನು ವ್ಯಾಪಿಸಿದೆ.

rain alert in uttara kannada ಉಡುಪಿಯಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆ

ಕರಾವಳಿಯಲ್ಲಿ ಇಂದು ಮತ್ತು ನಾಳೆ (ಮಂಗಳವಾರ ಹಾಗೂ ಬುಧವಾರ) ಭಾರಿ ಗಾಳಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ  : ಯಾವ ಬೆಳೆಗೆ ಯಾವ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ

ಸುಮಾರು 54.50 ರಿಂದ 115.50 ಮಿ. ಮೀ ನಷ್ಟು ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಾಳಿಯೂ ಬಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಭಾನುವಾರ ರಾತ್ರಿಯಿಡೀ ಉತ್ತಮ ಮಳೆಯಾಗಿತ್ತು.ೋಸಮವಾರ ಬೆಳಗ್ಗೆಯೂ ಮಳೆಯಾಗಿದೆ. ಅಂದು ಮಧ್ಯಾಹ್ನ ಮಳೆ ಸ್ವಲ್ಪ ಬಿಡುವು ನೀಡಿತ್ತು. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 42.ಮಿ.ಮೀ ಮಳೆಯಾಗಿದೆ.

ಕರಾವಳಿಯಲ್ಲಿ ಮುಂಗಾರು ಚುರುಕು

ರಾಜ್ಯದ ವಿವಿಧೆಡೆ ಮಳೆಯಾಗುತ್ತಿರುವುದರಿಂದ ಕರಾವಳಿಯಲ್ಲಿ ಮಂಗಾರು ಚುರುಕುಗೊಂಡಿದೆ. ಮುಂದಿನ ಐದು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂನ್ 30 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲೆನಾಡು ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.  ಮೋಡದ ವಾತಾವರಣ ಕಂಡು ಬರುತ್ತಿದ್ದರೂ ಇದು ಅಲ್ಪಕಾಲಿಕವಾಗಲಿದೆ.

ಜೂನ್  1 ರಿಂದ 25 ರವರೆಗೆ ರಾಜ್ಯಾದ್ಯತ ವಾಡಿಕೆಯಂತೆ 160 ಮಿ.ಮೀ ಮಳೆಯಾಗಬೇಕಿತ್ತು. ಆದರೆ 63 ಮಿ. ಮೀ ಮಳೆಯಾಗಿದ್ದು, ಶೇ. 61 ರಷ್ಟು ಮಳೆ ಕೊರತೆಯಾಗಿದೆ.

ಇದನ್ನೂ ಓದಿಬೆಳೆ ವಿಮೆಗೆ ಅರ್ಜಿ ಆಹ್ವಾನ : ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಚೆಕ್ ಮಾಡಿ

ಮೋಡದ ವಾತಾವರಣದಿಂದ ಮಳೆ ಬರಬಹುದು ಎಂಬ ವಿಶ್ವಾಸ ಇದ್ದರೂ ಆಷಾಡದ ಗಾಳಿ ಮೋಡವನ್ನು ಸರಿಸುತ್ತಿದೆ. ಇದರಿಂದ ಮಳೆ ಕ್ಷೀಣಿಸುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನಿಮ್ಮ ಜಿಲ್ಲೆಯ ಮಳೆ ಮಾಹಿತಿಗೆ ಕರೆ ಮಾಡಿ ವರುಣಮಿತ್ರ ಸಹಾಯವಾಣಿಗೆ

ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವರುಣಮಿತ್ರ ಸಹಾಯವಾಣಿಗೆ ರೈತರು ಮಳೆಯ ಮಾಹಿತಿ ಪಡೆಯಲು ಕರೆ ಮಾಡಬಹುದು. ರೈತರಿಗೆ, ಸಾರ್ವಜನಿಕರಿಗೆ ದಿನನಿತ್ಯದ ಹವಾಮಾನದ ಮಾಹಿತಿ ನೀಡಲು ವರುಣಮಿತ್ರ ಸಹಾಯವಾಣಿಯನ್ನು ಆರಂಭಿಸಲಾಗಿದೆ. 92433 45433 ಗೆ ಕರೆ ಮಾಡಿ ಹವಾಮಾನದ ಅಂದರೆ ವಿಶೇಷವಾಗಿ ಮಳೆಯ ಮಾಹಿತಿಯನ್ನು ರೈತರು ಮನೆಯಲ್ಲಿ ಕುಳಿತು ಒಂದು ಕರೆಯ ಮೂಲಕ ಪಡೆಯಬಹುದು.

Leave a Comment