ಇಂದು ಈ ಜಿಲ್ಲೆಗಳಲ್ಲಿ ಗುಡುಗು ಮಿುಂಚಿನ ಭಾರಿ ಮಳೆ

Written by Ramlinganna

Updated on:

Heavy rain alert in these districts ರಾಜ್ಯದ ವಿವಿಧೆಡೆ ಶುಕ್ರವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಕಲಬುರಗಿ, ವಿಜಯಪುರ, ಯಾದಗಿರಿ ಗದಗ, ಬೆಳಗಾವಿ, ಕೊಪ್ಪಳ, ಹಾವೇರಿ, ಧಾರವಾಡ,  ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಂತರ, ಬೆಂಗಳೂರು ನಗರ, ಹಾಸನ, ಕೊಡಗು, ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ ನಗರ, ಮೈಸೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆ ಒಂದೆರಡು ಕಡೆ ಮಳೆಯಾಗಲಿದೆ. ಈ ಜಿಲ್ಲೆಯಲ್ಲಿ ಶನಿವಾರವೂ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯ ಉಳಿದೆ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ.

ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಬೀದರ್ ಜಿಲ್ಲೆಯ ಒಂದೆರಡು ಕಲೆ ಆಲಿಕಲ್ಲು ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯಾಗಬಹುದು.

ಕರಾವಳಿಯ ಎಲ್ಲಾ ಜಿಲ್ಲೆಗಳು ಸೇರಿದಂತೆ ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಗದಗ ಹಾವಿ ಜಿಲ್ಲೆಗಳಲ್ಲಿ ಏಪ್ರಲ್ 8 ರಂದು ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿ ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಹಾಸನ, ಮೈಸೂರು, ಚಿತ್ರದುರ್ಗ, ದಾವಣೆಗೆರೆ, ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏಪ್ರೀಲ್ 8 ರಂದು ಸಾಧಾರಣ ಮಳೆಯಾಗಲಿದೆ. ಏಪ್ರೀಲ್ 9 ಮತ್ತು 10 ರಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ- ಏ. 11 ರವರೆಗೆ ಹೆಸರು ಸೇರಿಸಲು ಅವಕಾಶ

ಯಾದಗಿರಿ, ಕಲಬುರಗಿ, ವಿಜಯಪುರ ಾಹಗೂ ಬೀದರ್ ಜಿಲ್ಲೆಯ ಕೆಲವು ಕಡೆ ಆಲಿಕಲ್ಲು ಮಳೆಯಾಗಬಹುದು.

ನಿಮ್ಮೂರಿನಲ್ಲಿ ಯಾವಾಗ ಮಳೆಯಾಗುತ್ತದೆ ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಿ

ಸಾರ್ವಜನಿಕರು ತಮ್ಮೂರಿನಲ್ಲಿ ಯಾವಾಗ ಮಳೆಯಾಗುತ್ತದೆ ಎಂಬ ಮಾಹಿತಿ ಕೇಳಲು ವರುಣಮಿತ್ರ ಸಹಾಯಾಣಿಗೆ ಕರೆ ಮಾಡಿದರೆ ಸಾಕು,  ಹೌದು

Heavy rain alert in these districts 92433 45433 ನಂಬರಿಗೆ ಕರೆ ಮಾಡಿ ಮಳೆಯ ಮಾಹಿತಿ ಪಡೆಯಿರಿ.

ಕಲಬುರಗಿಯಲ್ಲಿ ತಂಪೆರದ ಮಳೆರಾಯ ಬಿಸಿಲಿನಿಂದ ಬಸವಳಿದಿದ್ದ ಕಲಬುರಗಿ ಜನತೆಗೆ ಶನಿವಾರ ಬೆಳಗ್ಗೆ ಗುಡುಗು ಮಿಂಚಿನ ಆರ್ಭದದೊಂದಿಗೆ ಮಳೆಯಾಗಿದೆ. ಗುರುವಾರ ರಾತ್ರಿ ಮೋಡ ಕದವಿ ವಾತಾವರಣವಿತ್ತು. ಸಾಯಂಕಾಲ ಅಲ್ಲಲ್ಲಿ ಮಿಂಚಿನೊಂದಿಗೆ ತಂಪಾದ ಗಾಳಿಯೂ ಬೀಸುತ್ತಿತ್ತು. ಮಧ್ಯರಾತ್ರಿ ನಂತರ ಗುಡುಗು ಮಿುಂಚಿನ ಆರ್ಭಟ ಮುಂದುವರೆಯಿತು. ಬೆಳಗ್ಗೆ 5 ರ ಸುಮಾರು ಗುಡುಗು ಮಿಂಚಿನ ಆರ್ಭಟ ಜೋರಾಗಿತ್ತು. ಹಲವು ಕಡೆ ಸಾಧಾರಣ ಮಳೆಯಾಗಿದ್ದರೂ ಗುಡುಗು ಮಿಂಚಿನ ಆರ್ಭಟಕ್ಕೆ ಜನ ಹೆದರುವಂತಿತ್ತು.  ಬೆಳಗ್ಗೆ 8.30 ವರೆಗೆ ಸೂರ್ಯನ ದರ್ಶನವಿರಲಿಲ್ಲ. ಕಲಬುರಗಿ ನಗರವು ಸಾಧಾರಣ ಮಳೆಯೊಂದಿಗೆ ತಂಪಾದ ಅನುಭವ ನೀಡಿತು. ಇದರಿಂದಾಗಿ ಕಲಬುರಿಗಿ ಮಂದಿ ಮಳೆರಾಯ ಮುದನೀಡಿತು. ಏಕೆಂದರೆ ಈ ಭಾಗದಲ್ಲಿ ಬಿಸಲು ಕಾದು ಕೆಂಡವಾಗಿರುತ್ತದೆ. ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಕಲಬುರಗಿ ಜನಕ್ಕೆ ಮಳೆರಾಯ ತಂಪಾದ ವಾತಾವರಣ ನೀಡಿದರೆ ಅದಕ್ಕಿಂತ ಖುಶಿ ಮತ್ತೊಂದಿರುವುದಿಲ್ಲ.

ಗುರುವಾರ ಮಧ್ಯಾಹ್ನ ಸೇಡಂ ತಾಲೂಕಿನಲ್ಲಿಯೂ ಗುಡುಗು ಮಿಂಚಿನೊಂದಿಗೆ ಸಾಧಾರಣ ಮಳೆಯಾಗಿದೆ.

ಕೊಡಗಿನಲ್ಲಿಯೂ ಮಳೆ

ಕೊಡಗು ಜಿಲ್ಲೆಯಲ್ಲಿಯೂ ವರುಣ ತಂಪೆರದಿದ್ದು, ಹಲವು ಕಡೆ ಉತ್ತಮ ಮಳೆಯಾಗಿದೆ. ವಿರಾಜಪೇಟೆ, ಮಗ್ಗಲ, ಅರ್ಜಿ, ಬೇಟೋಳಿ, ಕೆದಮುಳ್ಳೂರು, ಆಮ್ಮತ್ರಿ, ಭಾಗಗಗಳಲ್ಲಿ ಸಾಧಾರಣ ಮಳೆಯಾಗಿದೆ.

Leave a Comment