Havamana ilakhe ಇಂದಿನಿಂದ 3 ದಿನ ಗುಡುಗು ಸಿಡಿಲು ಸಹಿತ ಮಳೆ

Written by Ramlinganna

Updated on:

Havana ilakhe ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿದೆ.

ರಾಜ್ಯದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ತುಮಕೂರು, ಚಾಮರಾಜನಗರ,ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕಪ್ಪಳ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಳ್ಳಾರಿ,  ಬಾಗಲಕೋಟೆ ಜಿಲ್ಲೆಗಳಲ್ಲಿ ಏಪ್ರೀಲ್ 22 ರವರೆಗೆ ಗುಡುಗು ಮಿಂಚು ಸಹಿತ  ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : ಮುಟೇಶನ್ ಪ್ರಕಾರ ನಿಮಗೆಷ್ಟು ಎಕರೆ ಜಮೀನಿದೆ? ಇಲ್ಲೇ ಚೆಕ್ ಮಾಡಿ

Havana ilakhe ಸಿಡಿಲು ಬಡಿಯುವ ಐದು ನಿಮಿಷ ಮೊದಲೇ ಮೊಬೈಲಿಗೆ ಮಾಹಿತಿ ನೀಡುತ್ತದೆ ದಾಮಿನಿ ಆ್ಯಪ್-

ಸಿಡಿಲು ಬೀಳುವ ಮೊದಲೇ ಸಾರ್ವಜನಿಕರಿಗೆ ಎಲ್ಲಿಸಿಡಿಲು ಬೀಳುತ್ತದೆ? ಎಂಬ ಮಾಹಿತಿ ನೀಡುತ್ತದೆ ದಾಮಿನಿ ಆ್ಯಪ್. ಈ ಆ್ಯಪ್ ಹೇಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ದಾಮಿನಿ ಆ್ಯಪ್?

ಸಿಡಿಲಿನಿಂದ ಪಾರಾಗಲು ಹಾಗೂ ಸಿಡಿಲು ಕುರಿತು ಮುಂಚಿತವಾಗಿ ಮುನ್ಸೂಚನೆ ನೀಡುವುದು ದಾಮಿನಿ ಆ್ಯಪ್. ಈ ಆ್ಯಪ್ ನ್ನು ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಅಧೀನದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

ಪುಣೆಯಲ್ಲಿರುವ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ಸಿಡಿಲಿನ ಅನಾಹುತ ತಪ್ಪಿಸಲು ಸಿಡಿಲು ಪತ್ತೆಹಚ್ಚಲು ಸಂವೇದಕಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದೆ. ಹಾಗಾಗಿ ಒಂದು ಸ್ಥಳದ ಸುತ್ತಮುತ್ತಲಿನ 20 ರಿಂದ 40 ಕಿ. ಮೀ ದೂರದವರೆಗೆ 15 ನಿಮಿಷಗಳ ಒಳಗೆಡ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ.

ದಾಮಿನಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ದಾಮಿನಿ ಆ್ಯಪ್ ನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ Damini app ಎಂದು ಟೈಪ್ ಮಾಡಬೇಕು. ಆಗ ದಾಮಿನಿ ಆ್ಯಪ್ ಮೇಲ್ಗಡೆ ಕಾಣಿಸುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿಕೊಳ್ಳಬಹುದು. ಅಥವಾ  ಈ

https://play.google.com/store/apps/details?id=com.lightening.live.damini

ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಭಾ ಷೆ  ಕನ್ನಡ ಆಯ್ಕೆ ಮಾಡಿಕೊಂಡ ನಂತರ ಸರಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ಸಕ್ರಿಯಗೊಳಿಸಿದರೆ ಜಿಪಿಎಸ್  ಎಂಬ ಸಂದೇಶ ಕಾಣಿಸುತ್ತದೆ. ಜಿಪಿಎಸ್ ಆನ್ ಇದ್ದರೆ ಸಿಡಿಲಿನ ಸ್ಥಳ ಗುರುತಿಸಲು ಸುಲಭವಾಗುತ್ತದೆ. ಇದಕ್ಕೆ ನಾನು ಒಪ್ಪುತ್ತೇನೆ ಬಾಕ್ಸ್ ಆಯ್ಕೆ ಮಾಡಿಕೊಂಡು ಜಿಪಿಎಸ್ ನ್ನು ಸಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿ ಆ್ಯಪ್  ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮಗೆ ಒಂದು ಸರ್ಕಲ್ ಕಾಣಿಸುತ್ತದೆ. ಅಲ್ಲಿಎ ಷ್ಟು ನಿಮಿಷದೊಳಗೆ ನೀವು ಇರುವ ಸುತ್ತಮತ್ತಲಿನ ಪ್ರದೇಶದ ಎಲ್ಲೆಲ್ಲಿ ಸಿಡಿಲು ಬೀಳುವ ಸಾಧ್ಯತೆ ಎಂಬುದು ಕಾಣಿಸುತ್ತದೆ. ಕೆಳಗಡೆ ನಿಮಿಷ ಕಾಣಿಸುತ್ತದೆ. ಅದಕ್ಕೆ ಬಣ್ಣವನ್ನು ಸಹ ಗುರುತಿಸಲಾಗಿರುತ್ತದೆ. ಆ ಆಧಾರದ ಮೇಲೆ  7 ನಿಮಿಷದೊಳಗೆ ಎಲ್ಲೆಲ್ಲಿ 14 ನಿಮಿಷದೊಳಗೆ ಎಲ್ಲೆಲ್ಲಿ ಹಾಗೂ 21 ನಿಮಿಷದೊಳಗೆ ಎಲ್ಲೆಲ್ಲಿ ಸಿಡಿಲು ಬೀಳುತ್ತವೆ ಎಂಬ ಮಾಹಿತಿ ಕಾಣಿಸುತ್ತದೆ.

Leave a Comment