ಹೊಸವರ್ಷಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಹೊಸವರ್ಷಕ್ಕೆ ಎಂತಹ ಶುಭಾಷಯಗಳನ್ನು ಕಳಿಸಿಬೇಕೆಂಬ ಆಲೋಚನೆಯಲ್ಲಿದ್ದರೆ ನಿಮಗಾಗಿ ಇಲ್ಲಿ ಕೆಲವು ಶುಭಾಷಯಗಳನ್ನು ಪಟ್ಟಿ ಮಾಡಲಾಗಿದೆ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿ ನೀವು ನಿಮ್ಮ ಸ್ನೇಹಿತರಿಗೆ, ಬಂಧುಬಳಗದವರಿಗೆ, ಗೆಳತಿಯರಿಗೆ ಕಳಿಸಬಹುದು.

ನಿಮಗಾಗಿ ಇಲ್ಲಿ ಕೆಲವು ಶುಭಾಷಯಗಳ ಪಟ್ಟಿಯನ್ನು ಕೊಡಲಾಗಿದೆ.

ಬಂತು ಹೊಸ ವರುಷ…. ತಂತು ಹೊಸ ಹರುಷ….. 2021ಕ್ಕೆ ವಿದಾಯ… 2022ಕ್ಕೆ ಸ್ವಾಗತ

 1. ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ,

ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ

ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಸಲಿ

ಹೊಸ ವರುಷದ ಸುಭಾಶಯಗಳು

 1. ಹೊಸ ತಿಂಗಳು, ಹೊಸ ವರುಷ, ಹೊಸ ಸಂಭ್ರಮ

ಹೊಸ ಗುರಿ, ಹೊಸ ಉಲ್ಲಾಸ, ಹೊಸ ಅಧ್ಯಾಯ

ಹೊಸ ವರುಷ ನಿಮ್ಮ ಬಾಳಿನಲ್ಲಿ ಹರುಷ ತರಲಿ

3, ಹೊಸ ದಿನ ಹೊಸ ವರುಷ ಹೊಸತನದ ಭರವಸೆಯು

ಹೊಮ್ಮುತಿರಲಿ ನಿಮ್ಮ ಜೀವನದಲಿ, ಹುಸಿಯಾಗದರಿಲಿ ಕಂಡ ಕನಸು

 1. ಹಳೆತನದ ಪೊರೆಯ ಬಿಟ್ಟು, ಹೊಸತನದ ಉಡುಗೆ ತೊಟ್ಟು

ತಿಂದ ಕಹಿಯ ಮರೆತು ಉಂಡ ಸಿಹಿಯ ನೆನೆದು ಹೊಸವರ್ಷಕ್ಕೆ ಕಾಲಿಡೋಣ

 1. ಹಳೆಯ ಕಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ, ಎಲ್ಲ ಬಾಳ ಅಂಧಕಾರ ಕಳೆಯಲಿ

ಹೊಸ ವರುಷವು  ನಿಮ್ಮ ಮತ್ತು ಕುಟುಂಬದ ಬಾಳು ಸದಾ ಬೆಳಗಲಿ

 1. ಹಸಿರಾಗಲಿ ನಿಮ್ಮ ಬಾಳು ಹೊಸವರುಷದ ಸಂಭ್ರಮದಲಿ

ನೋವೆಲ್ಲ ಬತ್ತು ಹೋಗಿ ಸಂತೋಷದ ಕಾರಂಜಿ ಚಿಮ್ಮಲಿ

 1. ನಿಮ್ಮ ಹೃದಯದಲ್ಲಿ ಪ್ರೀತಿ ಇರಲಿ, ಮನಸ್ಸಿನಲ್ಲಿ ಖುಷಿ ಇರಲಿ

ತುಟಿಯಲ್ಲಿ ನಗುವಿರಲಿ, ಕಂಗಳಲ್ಲಿ ಹೊಸ ಕನಸುಗಳಿರಲಿ

 1. ಕಷ್ಟನಷ್ಟ ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ

ಹೊಸ ವರುಷಕ್ಕೆ ನೀವು ಕಂಡ ಕನಸು ನನಸಾಗಲಿ

ಹಿಂದೆ ಸಂಭವಿಸಿದ ಕಷ್ಟಗಳನ್ನೆಲ್ಲಾ ಮರೆತುಹೋಗಲಿ ಮುಂದೆ ಕಾಣುವ ಕನಸು ನನಸಾಗಲಿ

ಹಾದಿ ಮುಳ್ಳುಗಳು ಹೂವುಗಳಾಗಲಿ, ಹೊಸ ವರುಷದ ಎಲ್ಲಾ ದಿನಗಳು ನಿಮಗೆ ಶುಭವಾಗಲಿ

 1. ಹೊಸತು ಎಂದರೆ ಸಂಭ್ರಮ, ಹೊಸತು ಎಂದರೆ ಉಲ್ಲಾಸ, ಹೊಸತು ಎಂದು ಉತ್ಸಾಹ

ಹೊಸತು ಎಂದು ಉತ್ಸವ ಎಲ್ಲಾ ಹೊಸತನಕ್ಕೆ ಮುನ್ನುಡಿಯಾಗಲಿ 2022ನೇ ವರುಷ

 1. ಹೊಸ ವರುಷ ಒಳಿತನ್ನು ಮಾಡಲಿ ನಿಮ್ಮ ಕನಸುಗಳ ನನಸಾಗಲಿ

ಪ್ರೀತಿ, ಅದೃಷ್ಟ, ಶಾಂತಿನ, ನೆಮ್ಮದಿ ಎಲ್ಲವೂ ನಿಮ್ಮದಾಗಲಿ

ಹೊಸ ವರುಷಕ್ಕೆ ನಿಮ್ಮ ಜೀವನವೆಲ್ಲಾ ಶುಭವಾಗಲಿ

ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 1. ಹೊಸ ವರುಷದೊಂದಿಗೆ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ

ನಿಮ್ಮ ಆಸೆಗಳೆಲ್ಲಾ ಈಡೇರಲಿ, ಜಾರಿದ ಸಿಹಿ ಕ್ಷಣಗಳೆಲ್ಲಾ ಮರಳಿ ನಿಮ್ಮ ಕೈ ಸೇರಲಿ

 1. ಮೂಡಲಿ ಖುಷಿಯ ಚಿತ್ತಾರ, ದೂರವಾಗಲಿ ಬದುಕಿನ ಅಂಧಕಾರ,

ಮರೆಯಾಗಲಿ ಕಷ್ಟದ ಸಾಗರ ತುಂಬಲಿ ನಿಮ್ಮ ಜೀವನದಲ್ಲಿ ಸಡಗರ

 1. ಪ್ರತಿವರ್ಷ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ, ಆದರೆ ನಮ್ಮ ಬದುಕು ಇದ್ದಲ್ಲಿಯೇ ಇರುತ್ತದೆ

ಆದರೆ ಒಳ್ಳೆಯ ಸಂದೇಶ ನಮ್ಮ ಜೀವನದಲ್ಲಿ ಸದಾ ಹುರುಪು ನೀಡುತ್ತದೆ ಎಂಬ ಆಶಯ ನನ್ನದಿರುತ್ತದೆ.

 1. ಬದುಕಿನಲ್ಲಿ ಕಷ್ಟ-ನಷ್ಟ, ಸುಖ-ದುಃಖ ಇದ್ದೇ ಇರುತ್ತದೆ.

ಆದರೆ ಕೆಟ್ಟದ್ದು ಮರೆತುಹೋಗಿ ಒಳ್ಳೆಯದ್ದು ಸದಾ ನೆನಪಿರಲಿ

 1. ಬರೀ ಕನಸುಗಳನ್ನು ಕಾಣುತ್ತಾ ಕುಂತರೆ ಕನಸುಗಳು ನನಸಾಗುವುದಿಲ್ಲ.

ಬದುಕಲು ಬೇಕಾದಷ್ಟು ಬಯಲಯ್ತಿ,  ಕನಸು ನನಸಾಗಬೇಕಾದರೆ ಕೆಲಸ ಮಾಡಬೇಕಯ್ತಿ

ಇನ್ನೇಕೆ ತಡ ನಿಮಗೆ ಇಷ್ಟವಾದ ಯಾವುದಾದರೊಂದು ಶುಭಾಷಯಗಳನ್ನು ಆಯ್ಕೆ ಮಾಡಿಕೊಂಡು ಹೊಸ ವರುಷಕ್ಕೆ ನಿಮ್ಮ ಸ್ನೇಹಿತರಿಗೆ, ಬಂಧು ಬಳಗದವರಿಗೆ ಶುಭಾಷಯ ಕಳಿಸಲು ನಿಮ್ಮ ಫೋಟೊ, ಹೊಸ ಹೊಸ ಡಿಸೈನ್ ನಲ್ಲಿ ರಡಿ ಮಾಡಿಕೊಳ್ಳಿ

Leave a Reply

Your email address will not be published. Required fields are marked *