Gruhajyothi application status ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ತಮ್ಮ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿದ ಫಲಾನುಭವಿಗಳು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Gruhajyothi application status ಅರ್ಜಿ ಸ್ವೀಕೃತವಾಗಿದೆಯೋ ಅಥವಾ ರದ್ದಾಗಿದೆಯೋ? ಚೆಕ್ ಮಾಡುವುದು ಹೇಗೆ?
200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ
https://sevasindhu.karnataka.gov.in/StatucTrack/Track_Status
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಗೃಹ ಜ್ಯೋತಿ ಸ್ಟೇಟಸ್ ಚೆಕ್ ಮಾಡುವ Track you status Application ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು Select Escom name ನಲ್ಲಿ ನೀವು ಯಾವ ವಿಭಾಗದವರು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಲಬುರಗಿ ವಿಭಾಗದವರಾಗಿದ್ದರೆ ನೀವು ಕಲಬುರಗಿ ವಿಭಾಗದವರಾಗಿದ್ದರೆ Gescom ಮೈಸೂರು ವಿಭಾಗದವರಾಗಿದ್ದರೆ Mescome ಹುಬ್ಬಳ್ಳಿ ವಿಭಾಗದವರಾಗಿದ್ದರೆ Hescome ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಲೈಟ್ ಬಿಲ್ ನಲ್ಲಿರುವ ಅಕೌಂಟ್ ಐಡಿಯನ್ನು ನಮೂದಿಸಿ check status ಮೇಲೆ ಕ್ಲಿಕ್ ಮಾಡಬೇಕು. ಇನ್ನೊಂದು ಪೇಜ್ ಓಪನ್ ಆಗುತ್ತದೆ. ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ಯಾವ ದಿನಾಂಕದಂದು ಸ್ವೀಕೃತವಾಗಿದೆ. ಸ್ಟೇಟಸ್ ಎದುರುಗಡೆ ನಿಮ್ಮ ಅರ್ಜಿ ಗೃಹಜ್ಯೋತಿ ಯೋಜನೆಗೆ ಸ್ವೀಕೃತವಾಗಿದೆ Your Application for Gruhajyoti scheme is received and sent to esome for processing ಎಂಬ ಮೆಸೆಜ್ ಕಾಣಿಸುತ್ತದೆ.
ಗೃಹಜ್ಯೋತಿಗೆ ಈ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರೆ ಮುಂದಿನ ತಿಂಗಳು ಅಂದರೆ ಆಗಸ್ಟ್ ತಿಂಗಳಲ್ಲಿ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದು.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?
ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಮನೆಯ ಒಡತಿಯ ಅಂದರೆ ಪತ್ನಿಯ ಆಧಾರ್ ಕಾರ್ಡ್ ನಂಬರ್ ಬೇಕಾಗುತ್ತದೆ. ಇದರೊಂದಿಗೆ ವಿದ್ಯುತ್ ಬಿಲ್ ನ ಐಡಿ ನಂಬರ್ ಹಾಗೂ ಮೊಬೈಲ್ ನಂಬರ್ ಬೇಕಾಗುತ್ತದೆ.
ಇದನ್ನೂ ಓದಿ : ಈ ಪಟ್ಟಿಯಲ್ಲಿರುವವರಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ- ಚೆಕ್ ಮಾಡಿ ಅರ್ಜಿ ಸಲ್ಲಿಸಿ
ಗೃಹಜ್ಯೋತಿಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಹೆಸರು ಕಾಣಿಸುತ್ತದೆ. ಸೆಲೆಕ್ಟ್ ಎಸ್ಕಾಂ ನಲ್ಲಿ ನಿಮ್ಮ ವಿಭಾಗ ಆಯ್ಕೆ ಮಾಡಿಕೊಂಡು ಅಕೌಂಟ್ ಐಡಿ ನಮೂದಿಸಬೇಕು. ನಿಮ್ಮ ವಿಳಾಸ ನಮೂದಿಸಬೇಕು. ನೀವು ಮನೆಯ ಮಾಲಿಕರು, ಕುಟುಂಬ ಸದಸ್ಯರೋ ಅಥವಾ ಬಾಡಿಗೆದಾರರೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮಮೊಬೈಲ್ ಅರ್ಜಿ ಗೃಹ ಜ್ಯೋತಿಗೆ ಸ್ವೀಕೃತವಾಗುತ್ತದೆ.
ಅರ್ಜಿ ಸಲ್ಲಿಸಬಯಸುವವರು ಕೊನೆಯ ದಿನಾಂಕದವರೆಗೆ ಕಾಯದೆ, ಇನ್ನೆರಡು ದಿನಗಳಲ್ಲಿ ಅರ್ಜಿಸಲ್ಲಿಸಬಹುದು. ಆಗ ನೀವು ಮುಂದಿನ ತಿಂಗಳ ಉಚಿತ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ. ಹಾಗಾಗಿ ತಡಮಾಡದೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು.