ಬೆಂಬಲ ಬೆಲೆ ಹೆಚ್ಚಳ

Written by By: janajagran

Updated on:

Green gram purchase under MSP ರಾಜ್ಯದಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಹೆಸರು ಹಾಗೂ ಉದ್ದು ಖರೀದಿಯನ್ನು ಕೂಡಲೇ ಆರಂಭಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಬೆಂಬಲ ಬೆಲೆ ಆಧಾರದ ಮೇಲೆ 30 ಸಾವಿರ ಟನ್ ಹೆರು ಹಾಗೂ 10 ಸಾವಿರ ಟನ್ ಉದ್ದು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ರಾಜ್ಯದಲ್ಲಿ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆದು 90 ದಿನಗಳ ಕಾಲ ಅವಧಿಯಲ್ಲಿ ರೈತರಿಂದ ಬೆಂಬಲ ಬೆಲೆ ಆಧಾರದ ಮೇಲೆ ಗದಗ, ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ಚಿತ್ರದುರ್ಗ, ತುಮಕೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪ್ರತಿ ಕ್ವಿಂಟಾಲಿಗೆ 7275 ರೂಪಿಯಂಗಳಂತೆ ಹೆಸರು ಕಾಳು ಖರೀದಿಸಬೇಕು. ಪ್ರತಿ ಎಕರೆಗೆ 4 ಕ್ವಿಂಟಾಲ್ ಗರಿಷ್ಠ ಪ್ರತಿ ರೈತರಿಂದ 6 ಕ್ವಿಂಟಾಲ್ ಹೆಸರು ಖರೀದಿ ಮಾಡಬೇಕು. ಉದ್ದಿನ ಕಾಳು ಪ್ರತಿ ಎಕರೆಗೆ 3 ಕ್ವಿಂಟಾಲ್ ಪ್ರತಿ ರೈತರಿಂದ 6 ಕ್ವಿಂಟಾಲ್ ಖರೀದಿಸಲು ಸೂಚನೆ ನೀಡಿದೆ.

ಹೆಸರುಕಾಳು ಮತ್ತು ಉದ್ದನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಿ ಪ್ರತಿ ಕ್ವಿಂಟಾಲ್ ಹೆಸರುಕಾಳನ್ನು 7275 ರೂಪಾಯಿಗಳಿಗೆ ಹಾಗೂ ಪ್ರತಿ ಕ್ವಿಂಟಾಲ್ ಉದ್ದನ್ನು 6300 ರೂಪಾಯಿಗಳಿಗೆ ಖರೀದಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ
ಖರೀದಿ ಕೇಂದ್ರಗಳನ್ನು ಆರಂಭಿಸಿದ ದಿನಗಳಿಂದ 3 ತಿಂಗಳವರೆಗೆ ಹೆಸರುಕಾಳು ಮತ್ತು ಉದ್ದನ್ನು ಖರೀದಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆಯಾ ರಾಜ್ಯಗಳಲ್ಲಿ ಕೊಯ್ಲಿನ ಅವಧಿಯನ್ನು ನೋಡಿಕೊಂಡು ಆಯಾ ರಾಜ್ಯಗಳೇ ಖರೀದಿ ಕೇಂದ್ರಗಳ ಆರಂಭದ ದಿನಾಂಕವನ್ನು ನಿರ್ಧರಿಸುವಂತೆ ಸೂಚಿಸಲಾಗಿದೆ.

Green gram purchase under MSP ಕಬ್ಬು ಖರೀದಿ ದರ 290 ರೂಪಾಯಿಗೆ ಹೆಚ್ಚಳ

ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲಿಗೆ ನೀಡುವ ಕನಿಷ್ಟ ದರವನ್ನು ಕೇಂದ್ರ ಸರ್ಕಾರ 5 ರೂಪಾಯಿಗೆ ಹೆಚ್ಚಿಸಿದ್ದು, 2021-22ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲಿಗೆ 290 ರೂಪಾಯಿಯಂತೆ ರೈತರಿಂದ ಖರೀದಿಸಬೇಕೆಂದು ತಿಳಿಸಿದೆ.

ಇದು ಇದುವರೆಗಿನ ಗರಿಷ್ಠ ಬೆಲೆಯಾಗಿದ್ದು,  ಇಧರಿಂದಾಗಿ 5 ಕೋಟಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಆದರೆ ಈ ನಿರ್ಧಾರದಿಂದಾಗಿ ಸಕ್ಕರೆ ಮಾರಾಟ ದರದಲ್ಲಿ ತಕ್ಷಣದಲ್ಲಿ ಯಾವುದೇ ಏರಿಕೆ ಆಗುವುದಿಲ್ಲ. ಏಕೆಂದರೆ ಕನಿಷ್ಟ ಮಾರಾಟ ದರ (ಎಂಎಸ್ಪಿ) ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವರ್ಷದ ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಕಾರ್ಖಾನೆಗಳು ‍ಪ್ರತಿ ಕ್ವಿಂಟಲ್‌ಗೆ ಕನಿಷ್ಠ ಖರೀದಿ ದರ 290 ರೂ. ಪಾವತಿಸಬೇಕಿದೆ.

ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ಹೋಗುವ ದಾರಿ, ಕೆರೆಕಟ್ಟೆ, ನಿಮ್ಮ ಸರ್ವೆನಂಬರ್ ನೋಡಬೇಕೆ… ಇಲ್ಲಿದೆ ಮಾಹಿತಿ

ಈ ಬಗ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಶ್‌ ಗೋಯಲ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 2021-22ನೇ ಸಾಲಿಗೆ ಅನ್ವಯವಾಗುವಂತೆ ‘ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ’ (ಎಫ್‌ಆರ್‌ಪಿ) ಹೆಚ್ಚಿಸಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯು ಬುಧವಾರ ಒಪ್ಪಿಗೆ ನೀಡಿದೆ. ಕಳೆದ ವರ್ಷ ಕೇಂದ್ರವು ಪ್ರತಿ ಕ್ವಿಂಟಾಲ್‌ ಕಬ್ಬಿಗೆ 285 ರೂ. ಎಫ್‌ಆರ್‌ಪಿ ನಿಗದಿ ಮಾಡಿತ್ತು. ಕಬ್ಬಿನಿಂದ ಉತ್ಪಾದನೆ ಆಗುವ ಸಕ್ಕರೆ ಪ್ರಮಾಣವು ಶೇ.10ರಷ್ಟಿದ್ದರೆ 290 ರೂ. ಎಫ್‌ಆರ್‌ಪಿ ಸಿಗಲಿದೆ

Leave a Comment