Job card list ನಿಂದ ಯಾರ ಹೆಸರು ಕ್ಯಾನ್ಸಲ್ ಆಗಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Published on:

Gram panchayats jobcard list ಮನರೇಗಾ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರು ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ)ಯೋಜನೆಯಡಿಯಲ್ಲಿ ನೀಡಲಾಗುವುದು ಜಾಬ್ ಕಾರ್ಡ್ ಯಾರ ಹೆಸರನ್ನು ಸೇರಿಸಲಾಗಿದೆ? ಯಾರ ಯಾರ ಹೆಸರುಗಳನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ನಿಮ್ಮ ಪ್ರಶ್ನೆಗೆ ಉತ್ತರ ಹೌದು, ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಜಾಬ್ ಕಾರ್ಡ್ ಲಿಸ್ಟ್ ಚೆಕ್ ಮಾಡಬಹುದು.

Gram panchayats jobcard list ನಲ್ಲಿ ಹೆಸರಿರುವುದನ್ನು ಚೆಕ್ ಮಾಡುವುದು ಹೇಗೆ? 

ರೈತ ಕಾರ್ಮಿಕರು ಜಾಬ್ ಕಾರ್ಡ್ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://nregastrep.nic.in/netnrega/loginframegp.aspx?salogin=Y&state_code=15

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಹಾತ್ಮಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯಮೆಂಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಕೆಲವು ಆಯ್ಕೆಗಳನ್ನು ಮಾಡಬೇಕಾಗುತ್ತದೆ. ನಮ್ಮ ರಾಜ್ಯ ಕರ್ನಾಟಕ ಅಲ್ಲಿ ಗೋಚರಿಸುತ್ತದೆ. ಅದರ ಕೆಳಗಡೆ ಪ್ರಸಕ್ತ 2022-23 ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ  ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ಬ್ಲಾಕ್ ಆಯ್ಕೆಯಲ್ಲಿ ನಿಮ್ಮ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು Proceed ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಜಾಬ್ ಕಾರ್ಡ್ ನೋಂದಣಿ (job card/Registration)

ಜಾಬ್ ಕಾರ್ಡ್ ರೆಜಿಸ್ಟ್ರೇಶನ್ ಕೆಳಗಡೆ Registration caste wise, job card not in use, list of worker with aadhar no, job card employment registration, Registration application Register ಹೀಗೆ ನಿಮಗೆ ಕೆಲವು ಆಯ್ಕೆಗಳು ಕಾಣುತ್ತವೆ. ಅದರಲ್ಲಿ Job card/Employment Register ಮೇಲೆ ಕ್ಲಿಕ್ ಮಾಡಬೇಕು. ಆಗ ಜಾಬ್ ಕಾರ್ಡ್ ಹೊಂದಿರುವವರ ಪಟ್ಟಿ ಕಾಣಿಸುತ್ತದೆ. ಅಲ್ಲಿ ಕ್ರಮ ಸಂಖ್ಯೆ ಪ್ರಕಾರ ಹೆಸರಿರುತ್ತದೆ. ಅಲ್ಲಿ ಕಾಣುವ ಹೆಸರುಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

Pending job cards to be verified ( ಬಾಕಿ ಉಳಿದಿರುವ ಜಾಬ್ ಕಾರ್ಡ್ ಪರಿಶೀಲಿಸಿ)

ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರು ತಮ್ಮ ಹೆಸರು ಇನ್ನೂ ಬಾಕಿ ಉಳಿದಿರುವ ಪಟ್ಟಿಯಲ್ಲಿದೆಯೇ ಎಂಬುದನ್ನು ಚೆಕ್ ಮಾಡಲು ಪೆಂಡಿಂಗ್ ಜಾಬ್ ಕಾರ್ಡ್ಸ್ ಟು ಬಿ ವೆರಿಫೈಡ್  ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ : PM KISAN ಯೋಜನೆಯ ಹೊಸ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಲಾಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಯಾರು ಯಾರು ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೋ ಅವರ ಹೆಸರು ಇನ್ನು ಪೆಂಡಿಗ್ ಲಿಸ್ಟ್ ನಲ್ಲಿರುವ ಹೆಸರುಗಳು ಕಾಣುತ್ತವೆ.

MNREGA ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ (Apply online for job card)

ಮನರೇಗಾ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಗಾಗಿ ಕಾರ್ಮಿಕರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಹಬಹುದು. ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದವರು 100 ದಿನಗಳ ಕಾಲ ದೈಹಿಕ ದುಡಿಮೆಗೆ ಅರ್ಹರಾಗಿರುತ್ತಾರೆ. ಕಾರ್ಮಿಕರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಜಾಬ್ ಕಾರ್ಜ್ ಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು, ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು.

Leave a Comment