2021-22ನೇ ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷ ಘಠಕ ಯೋಜನೆಯಡಿಯಲ್ಲಿ ಧಾರವಾಡಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಕುರಿ ಸಾಕಾಣಿಕೆಗೆ ಸಹಾಯಧನ ನೀಡಲು (goat farming subsidy) ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದ್ದು, ಆಸಕ್ತರು ನಿಗದಿತ ನಮೂನೆ ಅರ್ಜಿ ಭರ್ತಿ ಮಾಡಿ ದಾಖಲೆಗಳೊಂದಿಗೆ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆಗೆ ಸಲ್ಲಿಸಬಹುದು.ಈ ಯೋಜನೆಯಡಿಯಲ್ಲಿ ಜಿಲ್ಲೆಗೆ ಪರಿಶಿಷ್ಟಜಾತಿಗೆ -6 ಹಾಗೂ ಪರಿಶಿಷ್ಟ ಪಂಗಡ-2 (ಹುಬ್ಬಳ್ಳಿ ಮತ್ತು ನವಲಗುಂದ) ತಾಲೂಕಿನ ಫಲಾನುಭವಿಗಳಿಗೆ ಆಡು, ಕುರಿ ಸಾಕಾಣಿಕೆಗೆ ಸಹಾಯ ಧನ ನೀಡಲಾಗುವುದು. ಕುರಿ ಸಾಕಾಣಿಕೆಗೆ (40,500 ಹಾಗೂ ಫಲಾನುಭವಿಯ ವಂತಿಗೆ 4500 ರೂಪಾಯಿ)  ಒಟ್ಟು 45000 ರೂಪಾಯಿ ಆರ್ಥಿಕ ಸೌಲಭ್ಯದೊಂದಿಗೆ ಸಹಾಯಧನ ನಿಡಲಾಗುವುದು. ನಿಗಮದ ನೋಂದಾಯಿತ ಸದಸ್ಯರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ತಾಲೂಕು ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುರಿ ಸಾಕಾಣಿಕೆದಾರರಿಗೆ ಉಚಿತ ಟೆಂಟ್, ಪರಿಕರಗಳ ವಿತರಣೆಗೆ ಅರ್ಜಿ ಆಹ್ವಾನ

2021-22 ನೇ ಸಾಲಿನ ಕರ್ನಾಟಕ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಎಸ್ಸಿ, ಎಸ್ಟಿ ಪಂಗಡದ ಸಂಚಾರಿ ಮತ್ತು ವಲಸೆ ಕುರಿಗಾರರಿಗೆ ಉಚಿತವಾಗಿ ಟೆಂಟ್ ಮತ್ತ್ ಸಂಬಂಧಿತ ಪರಿಕರಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಜುಲೈ 15 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಜಿಲ್ಲೆಯ 10 ಫಲಾನುಭವಿಗಳಿಗೆ ಟೆಂಟ್ ವಿತರಿಸಲು ಗುರಿ ಹೊಂದಲಾಗಿದೆ. ಆಸಕ್ತ ಅರ್ಜಿದಾರರು ಕನಿಷ್ಟ 2 ಕುರಿ, ಮೇಕೆಗಳನ್ನು ಮತ್ತು ನಿಗಮದಿಂದ ನೀಡಲಾದ ಪಾಸ್ ಬುಕ್ ಹೊಂದಿರಬೇಕು. ಸಂಚಾರಿ ಅಥವಾ ವಲಸೆ ಕುರಿಗಾರನಾಗಿದ್ದು, ಸಂಘದ ಚಾಲ್ತಿ ಸದಸ್ಯರಾಗಿರುವ ಪ್ರಮಾಣ ಪತ್ರ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮಕ್ಕೆ ಸಂಬಂಧಿಸಿದ ಪಶು ವೈದ್ಯಾಧಿಕಾರಿಗಳ್ನು ಸಂಪರ್ಕಿಸಲು ಕೋರಲಾಗಿದೆ.

ಕುರಿ ಸಾಕಾಣಿಕೆ ಮಾಹಿತಿ ನೀಡಲು (FREE HELPLINE FOR GOAT FARMING)ಉಚಿತ ಸಹಾಯವಾಣಿ

ಶುಪಾಲನೆ, ಕುರಿ ಸಾಕಾಣಿಕೆ ಅಷ್ಟೇ ಅಲ್ಲ, ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೊಲ ಸಾಕಾಣಿಕೆ ಹಾಗೂ ಹಂದಿ ಸಾಕಾಣಿಕೆ ಕುರಿತು ಸಹ  ಸಂಪೂರ್ಣ ಮಾಹಿತಿ ಪಡೆಯಬಹುದು. ಇದಕ್ಕಾಗಿ ನೀವು ಯಾವುದೇ ಕರೆ ಶುಲ್ಕ ಪಾವತಿಸುವ ಅವಶ್ಯಕತೆಯಿಲ್ಲ. ಪಶು ಇಲಾಖೆಯ ತಜ್ಞರಿಂದ ಮಾಹಿತಿ ಪಡೆಯಲು ಬಯಸಿದ್ದರೆ ಈ ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ನಿಮ್ಮ ಜಿಲ್ಲೆಯ, ತಾಲೂಕಿನ ಪಶು ಇಲಾಖೆಯ ಸಿಬ್ಬಂದಿಯೊಂದಿಗೆ ಸಂಪರ್ಕ ನೀಡಲಾಗುವುದು. ನಿಮಗೆ ಬೇಕಾದ ಮಾಹಿತಿ ಪಶು ಇಲಾಖೆಯ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಕುಳಿತು ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ  ಸಂಪೂರ್ಣ ಮಾಹಿತಿ.

ರೈತರು ದೂರವಾಣಿ ಸಂಖ್ಯೆ (farmer toll free number) 1800 425 0012 (ಉಚಿತ) ಅಥವಾ 080-23417100 ಕ್ಕೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕರೆ ಮಾಡಿ ಪಶುವೈದ್ಯರು ಮತ್ತು  ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯಬಹುದು. ವಾಟ್ಸ್ ಅ್ಯಪ್ ನಂಬರ್ ದಿಂದ ಮಾಹಿತಿ ಪಡಯಲಿಚ್ಚಿಸುವವರು ಮೊ.948 391 4000 ಗೆ ಕೋರಿಕೆ ನೀಡಬಹುದು.

Leave a Reply

Your email address will not be published. Required fields are marked *