ನಿಮ್ಮ ಜಮೀನಿನ ಪಹಣಿ ಯಾರಿಂದ ಯಾರಿಗೆ ವರ್ಗಾವಣೆ ಆಗಿದೆ? ಚೆಕ್ ಮಾಡಿ

Written by Ramlinganna

Updated on:

ರೈತರ ದಾಖಲೆಗಳಲ್ಲಿ ಅತೀ ಮುಖ್ಯವಾದ ದಾಖಲೆಯಾಗಿರುವ ಪಹಣಿ ಯಾವ ವರ್ಷದಿಂದ ಅವರ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಕರ್ನಾಟಕ ಸರ್ಕಾರವು ರೈತರಿಗೆ ತಮ್ಮ ಜಮೀನಿನ ಮಾಹಿತಿಗಳನ್ನು ಆನ್ಲೈನ್ ನಲ್ಲೇ ಒದಗಿಸುವುದಕ್ಕಾಗಿ ಭೂಮಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ಭೂಮಿ ತಂತ್ರಾಂಶದ ಮೂಲಕ ರೈತರು ತಮ್ಮ ಜಮೀನಿನ ಪಹಣಿ, ಮುಟೇಶನ್, ಖಾತಾ, ಮೋಜಿನಿ, ಆಕಾರ ಬಂದ್ ಸೇರಿದಂತೆ ಇನ್ನಿತರ ಜಮೀನಿನ ದಾಖಲೆಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಜಮೀನಿನ ಪಹಣಿಯ ಸರ್ವೆ ನಂಬರ್ ನಮೂದಿಸಿದರೆ ಸಾಕು, ಆ ಜಮೀನು ಯಾರ ಹೆಸರಿನಲ್ಲಿದೆ? ಜಮೀನು ಜಂಟಿಯಾಗಿದೆಯೇ? ಅಥವಾ ಮಾಲೀಕರು ಒಬ್ಬರಾಗಿದ್ದಾರೆಯೇ? ಜಂಟಿಯಾಗಿದ್ದರೆ ಯಾರ ಯಾರ ಹೆಸರಿನ್ಲಲಿ ಜಮೀನು ಜಂಟಿಯಾಗಿದೆ? ಎಷ್ಟು ಎಕರೆ ಜಮೀನಿದೆ ಎಂಬಿತ್ಯಾದಿ ಮಾಹಿತಿಗಳನ್ನು ನೋಡಬಹುದು. ಜಮೀನು ಯಾವ ವರ್ಷದಲ್ಲಿನಿಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಅಂದರೆ ನಿಮ್ಮ ಹೆಸರಿಗಾಗಿದೆ ಎಂಬುದನ್ನು ನೋಡಬಹುದು.

ಯಾವ ವರ್ಷದಿಂದ ಪಹಣಿ ರೈತರ ಹೆಸರಿಗಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಯಾವ ವರ್ಷದಿಂದ ರೈತರ ಹೆಸರಿಗಾಗಿದೆ ಎಂಬುದನ್ನು ಮೊಬೈಲ್ ನಲ್ಲೇ  ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ದಾಖಲೆಗಳನ್ನು ನೋಡುವ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಕರೆಂಟ್ ಇಯರ್ ಪಕ್ಕದಲ್ಲಿರುವ Old Year  ಬಾಕ್ಸ್ ಮೇಲೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಯಾವ ಜಿಲ್ಲೆಯವರು ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಬೇಕು. ಇದಾದ ಮೇಲೆ Go ಮೇಲೆ ಕ್ಲಿಕ್ ಮಾಡಬೇಕು. ಸೆಲೆಕ್ಟ್ ಸರ್ನೋಕ್ ನಲ್ಲಿ (ಸ್ಟಾರ್) * ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಹಿಸ್ಸಾನಲ್ಲಿ ನಿಮ್ಮ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.

ಒಂದು ವೇಳೆ ನಿಮಗೆ ನಿಮ್ಮ ಹಿಸ್ಸಾ ನಂಬರ್ ಗೊತ್ತಿಲ್ಲದಿದ್ದರೆ ಅಲ್ಲಿ ಕಾಣುವ ನಾಲ್ಕೈದು ಹಿಸ್ಸಾ ನಂಬರ್ ಗಳಲ್ಲಿ ಒಂದೊಂದಾಗಿ ಆಯ್ಕೆ ಮಾಡಿ ಚೆಕ್ ಮಾಡಬಹುದು. ಸೆಲೆಕ್ಟ್ ಪಿರಿಯಡ್ ನಲ್ಲಿ ಮೇಲ್ಗಡೆ ಕಾಣುವ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಇಯರ್ ನಲ್ಲಿಯೂ ಮೇಲ್ಗಡೆ ಕಾಣುವ ವರ್ಷ ಆಯ್ಕೆಮಾಡಿಕೊಳ್ಳಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಹಿಸ್ಸಾ ನಂಬರ್ ನಲ್ಲಿರುವ ಮಾಲಿಕರ ಹೆಸರು ಕಾಣುತ್ತದೆ.

ಹಿಸ್ಸಾ ನಂಬರ್ ನಲ್ಲಿ ಹೆಸರು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನಲ್ಲಿ ಜಂಟಿಯಾಗಿದೆಯೋ ಅವರ ಹೆಸರು ಕಾಣುತ್ತದೆ. ಜಮೀನಿನ ಮಾಲಿಕರು ಒಬ್ಬರೆ ಆಗಿದ್ದರೆ ಅವರ ಹೆಸರು ಕಾಣುತ್ತದೆ. ಇದಾದ ನಂತರ ಡಿಟೇಲ್ಸ್ ನಲ್ಲಿ ಗ್ರಾಮ, ಸರ್ವೆ ನಂಬರ್, ಹಿಸ್ಸಾ ನಂಬರ್, ನೀವು ನಮೂದಿಸಿದ ವರ್ಷ ಕಾಣುತ್ತದೆ.

ಇದನ್ನೂ ಓದಿ : ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೋ? ಮೊಬೈಲ್ ನಲ್ಲೇ ಚೆಕ್ ಮಾಡಿ 

ಅಲ್ಲಿ View ಮೇಲೆ ಕ್ಲಿಕ್ ಮಾಡಬೇಕು. ಆಗ ಪಹಣಿ ಓಪನ್ ಆಗುತ್ತದೆ. Valid From  ಮುಂದುಗಡೆ ದಿನಾಂಕ, ತಿಂಗಳು ಹಾಗೂ ವರ್ಷ ಅಂದರೆ ಯಾವ ವರ್ಷದಲ್ಲಿ ನಿಮ್ಮ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ. ನೀವು ನಮೂದಿಸಿದ ಸರ್ವೆ ನಂಬರಿನಲ್ಲಿರುವ ಹಿಸ್ಸಾ ನಂಬರಿಗೆ ಎಷ್ಟು ಎಕರೆ ಜಮೀನಿದೆ? ಜಮೀನು ಮಾಲಿಕರ ಹೆಸರು ಕಾಣುತ್ತದೆ.  ನೀವು ಬೆಳೆದ ಬೆಳೆಗಳ ಸಮೀಕ್ಷೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿಯೂ ಪಹಣಿಯ ಕೊನೆಯಲ್ಲಿ ಕಾಣುತ್ತದೆ.

Leave a Comment