ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆಗೆ ಉಚಿತವಾಗಿ 10 ದಿನಗಳ ಕಾಲ ತರಬೇತಿ ನೀಡಲಾಗುವುದು.
ಹೌದು, ಕಲಬುರಗಿ ನಗರದ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಜೂನ್ 6 ರಿಂದ 15 ರವರೆಗೆ ಒಟ್ಟು 10 ದಿನಗಳ ಕಾಲ ತರಬೇತಿ ನೀಡಲಾಗುವುದು.
ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಗೆ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಎಸ್.ಬಿ.ಐ. ಸಂಸ್ಥೆಯ ಆರ್.ಸೆಟ್. ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತರಬೇತಿ ಸಂದರ್ಭದಲ್ಲಿ ರೈತರಿಗೆ ಉಚಿತವಗಿ ವಸತಿ ಸೌಲಭ್ಯ ನೀಡಲಾಗುವುದು. ನೀಡಲಾಗುವುದು. ಅಭ್ಯರ್ಥಿಗಳು ಕನಿಷ್ಠ 8ನೇ ತರಗತಿ ಪಾಸಾಗಿರಬೇಕು. ವಯೋಮೀತಿ 18 ರಿಂದ 45 ರೊಳಗಿರಬೇಕು. ಅಭ್ಯರ್ಥಿಯು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಎಮ್.ಜಿ.ಎನ್.ಆರ್.ಇ.ಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಜೂನ್ 4 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ ಜೂನ್ 4 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರವರೆಗೆ ನಡೆಯುವ ಸಂದರ್ಶನದಲ್ಲಿ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ತರಬೇತಿಯ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9243602888, 9886781239 ಹಾಗೂ 9900135705 ಗೆ ಸಂಪರ್ಕಿಸಲು ಕೋರಲಾಗಿದೆ.
ಗದಗ ಜಿಲ್ಲೆಯಲ್ಲಿ ಕುರಿ ಸಾಕಾಣಿಕೆಗೆ ಅರ್ಜಿ ಆಹ್ವಾನ
ಗದಗ ಜಿಲ್ಲೆಯ ಎಸ್.ಬಿ.ಐ ಎಎಸ್ಎಫ್ ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ತರಬೇತಿ ಸಂಸ್ಥೆ (ಗಿಟ್ ಸರ್ಡ್) ಹುಲಕೋಟಿ, ಗದಗ ಸಂಯುಕ್ತಾಶ್ರಯದಲ್ಲಿ ಜೂನ್ 6 ರಿಂದ ಉಚಿತವಾಗಿ ಕುರಿ ಸಾಕಾಣಿಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು 18 ರಿಂದ 45 ವಯಸ್ಸನೊಳಗಿರಬೇಕು. ಗ್ರಾಮೀಣ ಭಾಗದ ಯುವಕ ಯುವತಿಯರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಯನ್ನು ಆರ್.ಸಿ.ಟಿ (ಗಿಟಸರ್ಡ್) ಕೆವಿಕೆ ಆವರಣ ಹುಲಕೋಟೆ ಸಂಸ್ಥೆಯಲ್ಲಿ ಆಯೋಜಿಸಲಾಗುವುದು.
ಇದನ್ನೂ ಓದಿ: ರೈತರೇಕೆ ಬೆಳೆವಿಮೆ ಮಾಡಿಸಬೇಕು? ವಿಮೆ ಮಾಡಿಸುವುದರಿಂದಾಗುವ ಉಪಯೋಗ? ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಇಲ್ಲಿದೆ ಮಾಹಿತಿ
ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ. ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿರುತ್ತದೆ. ತರಬೇತಿ ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು. ಬಿಪಿಎಲ್ ಕಾರ್ಡ್ ಹೊಂದಿರಬೇಕು ಅಥವಾ ನರೇಗಾ ಕಾರ್ಡ್ ಹೊಂದಿರಬೇಕು. ವಿದ್ಯಾರ್ಹತೆ ಪ್ರಮಾಣ ಪತ್ರ ಇರಬೇಕು. ರೇಷನ್ ಕಾರ್ಡ್ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಆರ್.ಸಿಟಿ ಸಂಸ್ಥೆಯಲ್ಲಿ ದೊರೆಯುವ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ನಿರ್ದೇಶಕರು, ಆರ್.ಸಿ.ಟಿ ಸಂಸ್ಥೆ ಕೆ. ಎಚ್. ಪಾಟೀಲ್ ಕೃಷಿ ವಿಜ್ಞಾನ ಕೇಂದ್ರದ ಆವರಣ ಹುಲಕೋಟಿ ಇವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ದೂರವಾಣಿ ಸಂಖ್ಯೆ 9632287949, 9448874412, 8880169996 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶುಪಾಲಕರಿಗೆ ಉಚಿತ ಸಹಾಯವಾಣಿ
ಪಶುಪಾಲನೆಯಲ್ಲಿ ಆಸಕ್ತಿಯಿರುವ ಹಾಗೂ ಪಶುಪಾಲನೆ ಮಾಡುತ್ತಿರುವ ರೈತರಿಗಾಗಿ ಸರ್ಕಾರವು ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಹೌದು ರೈತರು 8277 100 200 ನಂಬರಿಗೆ ಕರೆ ಮಾಡಿ ಪಶುಪಾಲನೆ ಕುರಿತು ಮಾಹಿತಿ ಪಡೆಯಬಹುದು. ಈ ಉಚಿತ ಸಹಾಯವಾಣಿಯು ದಿನ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ರೈತರು ಕರೆ ಮಾಡಿದಾಗ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ವರ್ಗಾಯಿಸಲಾಗುವುದು. ನಂತರ ರೈತರಿಗೆ ಅಧಿಕಾರಿಗಳು ಅಗತ್ಯ ಮಾಹಿತಿ ನೀಡುತ್ತಾರೆ. ಇದಕ್ಕಾಗಿ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಇದು ರೈತರಿಗೆ ಸಂಪೂರ್ಣ ಉಚಿತವಾಗಿರುತ್ತದೆ.
ಪಶುಗಳಿಗೆ ತಗಲುವ ರೋಗ ನಿವಾರಣೆ, ತರಬೇತಿ ಕೇಂದ್ರಗಳು ಸೇರಿದಂತೆ ಇತರ ಎಲ್ಲಾ ಮಾಹಿತಿಯನ್ನು ರೈತರಿಗೆ ನೀಡಲಾಗುವುದು.