ಮಹಿಳೆಯರು ಈ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು: ಇಲ್ಲಿದೆ ಸಂಪೂರ್ಣ ಮಾಹಿತಿ

Written by Ramlinganna

Published on:

ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಎಲ್ಲಾ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಯೋಜನೆಯನ್ನು ಘೋಷಣೆ ಮಾಡಿದೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾಣವನ್ನು ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟದ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣದ ಯೋಜನೆಯ ಶಕ್ತಿ ಯೋಜನೆಯನ್ನು ಮುಖ್ಯಮುಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ.

ಇದೇ ತಿಂಗಳ ಜೂನ್ 11 ರಿಂದ ಹವಾ ನಿಯಂತ್ರಿತ ಬಸ್ (ಎ.ಸಿ) ಮತ್ತು ಐಷರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆಎಸ್.ಆರ್.ಟಿ.ಸಿ  ಬಸ್ ಗಳಲ್ಲಿ ಪ್ರಯಾಣ ಮಾಡಬಹುದು ಎಂದು ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಪುರುಷರಿಗೆ ಶೇ. 50 ರಷ್ಟು ಮೀಸಲಾತಿ ಘೋಷಿಸಲಾಗಿದೆ.

ಬಿಎಂಟಿಸಿ, ಕೆಎಸ್.ಆರ್.ಟಿ.ಸಿ, ಎನ್.ಡಬ್ಲೂಕೆಆರ್.ಟಿ.ಸಿ ಮತ್ತು ಕೆಕೆಆರ್.ಟಿ.ಸಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಅದಲ್ಲದೆ ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಯವರೆಗೂ ಬೇಕಾದರೂ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ.

ಉಚಿತ ಪ್ರಯಾಣಕ್ಕಿರುವ ನಿಯಮಗಳು

ಎ.ಸಿ, ಐಷರಾಮಿ ಬಸ್ ಗಳನ್ನು ಹೊರತುಪಡಿಸಿ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಕೆಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಶೇ. 50 ರಷ್ಟು ಪುರುಷರಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ.

ಬಿಎಂಟಿಸಿ ಬಸ್ ಗಳಲ್ಲಿ ಮಾತ್ರ ಪುರುಷರಿಗೆ ಮೀಸಲಾತಿ ಇಲ್ಲ. ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ನೀಡಲಾಗುವುದು. ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಈ ಶಕ್ತಿ ಯೋಜನೆ ಅನ್ವಯವಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೆ ಯಾವುದೇ ಕಂಡಿಶನ್ ಇಲ್ಲದೆ ಪ್ರಯಾಣಿಸಲು ಅವಕಾಶವಿದೆ.

ಕಾಂಗ್ರೆಸ್ ಪಕ್ಷವು ಚುನಾವಣೆ ಮೊದಲು ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ ಶಕ್ತಿ ಯೋಜನೆ ಅಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡುವ ಯೋಜನೆಯೂ ಒಂದಾಗಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವ ವಿಧಾನ ಬದಲಾವಣೆ- ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ರಾಜ್ಯ ಸಾರಿಗೆ ಬಸ್ ಗಳಲ್ಲಿ ಪುರುಷರಿಗೂ ಶೇ. 50 ಸೀಟ್ ಗಳು ರಿಸರ್ವ್ ಇರುತ್ತದೆ. ಪ್ರೀ ಬಸ್ ಸೇವೆಗಳಿಂದ ಪುರುಷ ಪ್ರಯಾಣಿಕರಿಗೆ ತೊಂದರೆಯಾಗದಿರಲು ಈ ರಿಸರ್ವೇಶನ್ ಘೋಷಣೆ ಮಾಡಲಾಗಿದೆ. ಪುರುಷರಿಗೆ ಸೀಟ್ ಗಳನ್ನು ರಿಸರ್ವ್ ಮಾಡುವ ಮೂಲಕ ಇಷ್ಟು ದಿನಗಳ ಕಾಲ ಮಹಿಳೆಯರು, ವಿಕಲಚೇತನರು, ಮತ್ತು ಹಿರಿಯ ನಾಗರಿಕರಿಗೆ ಇದ್ದ ಸೌಲಭ್ಯ ಇನ್ನೂ ಮುಂದೆ ಪುರುಷರಿಗೂ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಚಿತಪಡಿಸಿದ್ದಾರೆ.

ಜೂನ್ 11 ರಿಂದ ಎಸಿ ಬಸ್, ರಾಜಹಂಸ, ಐರಾವತ ಸ್ಲೀಪರ್ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಇರುವುದಿಲ್ಲ. ಆದರೆ ಕೆಎಸ್.ಆರ್.ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರು ಕಿಲೋ ಮೀಟರ್ ಮಿತಿಯಲ್ಲಿದೆ ಉಚಿತವಾಗಿ ಪ್ರಯಾಣ ಮಾಡಬಪುದು ಎಂದು ಘೋಷಿಸಿದ್ದಾರೆ.

ಪ್ರಸ್ತುತ ಈ ಯೋಜನೆಯಲ್ಲಿ ಯಾವುದೇ ನಿರ್ಭಂದವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಒಂದಷ್ಟು ಬದಲಾವಣೆ ತರಬಹುದು ಎನ್ನಲಾಗುತ್ತಿದೆ. ಇದು ಕೇವಲ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ಯಯವಾಗುತ್ತದೆ.ಇತರ ರಾಜ್ಯದ ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಪಾಸ್ ನೀಡಲಾಗುತ್ತದೆಯೋ ಅಥವಾ ಬೇರೆ ಯಾವುದಾದರೂ ಕಾರ್ಡ್ ನೀಡಲಾಗುತ್ತದೆಯೋ ಎಂಬುದರ ಕುರಿತು ಅತೀ ಶೀಘ್ರದಲ್ಲಿ ಸರ್ಕಾರ ತಿಳಿಸಲಿದೆ. ಇದರೊಂದಿಗೆ ಯಾವ ಯಾವ ದಾಖಲೆಗಳನ್ನು ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಬಿ.ಪಿಎಲ್, ಎಪಿಎಲ್ ಕಾರ್ಡ್ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಜೂನ್ 11 ರಿಂದ ಯಾವ ಯಾವ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂಬುದು ಗೊತ್ತಾಗಲಿದೆ.

Leave a Comment