Ganga kalyan yojana ಯಡಿ ಉಚಿತ ಬೋರ್ವೆಲ್ ಕೊರೆಯಲು ಅರ್ಜಿ

Written by By: janajagran

Updated on:

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿಗೆ ಸಮಗ್ರ Ganga kalyan yojana ಯಡಿಯಲ್ಲಿ ಪರಿಶಿಷ್ಟ ಪಂಗಡದ ಸಣ್ಣ, ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಯಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿಯಲ್ಲಿ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಪಂಪ್ ಸೆಟ್ ಹಾಗೂ ಇತರ ಪೂರಕ ಸಾಮಗ್ರಿಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.

ಘಟಕದ ವೆಚ್ಚ 3.5 ಲಕ್ಷ ರೂಪಾಯಿ ಆಗಿದ್ದು, 3 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. 50 ಸಾವಿರ ರೂಪಾಯಿಯವರೆಗೆ ಸಾಲಸೌಲಭ್ಯವೂ ಇರತ್ತದೆ. 3 ಲಕ್ಷ ರೂಪಾಯಿಯ ಸಹಾಯಧನದಲ್ಲಿ 50 ಸಾವಿರ ರೂಪಾಯಿ ವಿದ್ಯುದ್ದೀಕಾರಣ ಬಾಬ್ತು ಒಳಗೊಂಡಿರುತ್ತದೆ. ನಿಗಮವು ನೀಡುವ ಸಾಲಕ್ಕೆ ವಾರ್ಷಿಕ ಶೇ. 6 ರಷ್ಟು ಬಡ್ಡಿ ಇದೆ. ಇದನ್ನು 6 ವರ್ಷಗಳಲ್ಲಿ ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.

ಅಂತರ್ಜಾಲಮಟ್ಟ ಕುಸಿದಿರುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚವನ್ನು 4.5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. 50 ಸಾವಿರ ರೂಪಾಯಿ ಸಾಲ ಒಳಗೊಂಡಿರುತ್ತದೆ. ಮೇಲೆ ತಿಳಿಸಿದ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಿಗೆ 3.5 ಲಕ್ಷ ರೂಪಾಯಿ ಘಟಕದ ವೆಚ್ಚ ನಿಗದಿಪಡಿಸಲಾಗಿದೆ.

ರೈತರು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಕೋರಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಯಸುವ ಆಸಕ್ತ ರೈತರು

https://kmvstdcl.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಸೇವೆಗಳು ಮತ್ತು ಯೋಜನೆಗಳು ಕೆಳಗಡೆ ಸಮಗ್ರ Ganga kalyan yojana ಮೇಲೆ ಕ್ಲಿಕ್ ಮಾಡಬೇಕು. ಆಗ ಗಂಗಾ ಕಲ್ಯಾಣ ಯೋಜನೆ ಪೇಜ್ ತೆರೆಯಲ್ಪಡುತ್ತದೆ. ಅಲ್ಲಿ ಎಲ್ಲಾ ಮಾಹಿತಿ ನೀಡಲಾಗಿರುತ್ತದೆ. ಎಲ್ಲಾ ಮಾಹಿತಿಗಳನ್ನು ಓದಿಕೊಳ್ಳಬೇಕು. ಸಮಗ್ರ ಗಂಗಾ ಕಲ್ಯಾಣ ಯೋಜನೆ ಮೇಲೆ ಆನ್ಲೈನ್ ನಲ್ಲಿ ಅನ್ವಯಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಅರ್ಜಿ ಓಪನ್ ಆಗುತ್ತದೆ.  ಅಥವಾ

http://kmvst.techverves.biz/online_application.php

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಅರ್ಜಿ ಓಪನ್ ಆಗುತ್ತದೆ. ಅಲ್ಲಿ ವರ್ಷ, ಜಿಲ್ಲೆ, ತಾಲೂಕು, ಹೆಸರು, ವಿಳಾಸ, ಗ್ರಾಮ, ಹೋಬಳಿ, ಆಧಾರ್ ಕಾರ್ಡ್, ಭೂಮಿ ವಿಸ್ತೀರ್ಣ ಸೇರಿದಂತೆ ಇನ್ನಿತರ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಬೇಕು.

ಇದನ್ನೂ ಓದಿ:ಗಂಗಾ ಕಲ್ಯಾಣ ಯೋಜನೆ (Ganga Kalyan Scheme) ಯಡಿ ಫಲಾನುಭವಿಗಳ ಆಯ್ಕೆ ಹೇಗೆ ಮಾಡುತ್ತಾರೆ ನಿಮಗೆ ಗೊತ್ತೇ..? ಇಲ್ಲಿದೆ ಸಂಪೂರ್ಣ ಮಾಹಿತಿ

ಈಗಾಗಲೇ ಗಂಗಾ ಕಲ್ಯಾಣ ಯೋಜನೆಡಯಲ್ಲಿ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೆಚ್ಚಿನ  ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಗೆ ಸಂಪರ್ಕಿಸಬಹುದು.  ಹಾವೇರಿ ಜಿಲ್ಲೆಯ ರೈತರು 08375-234408ಗೆ ಸಂಪರ್ಕಿಸಲು ಕೋರಲಾಗಿದೆ.

ಏತ ನೀರಾವರಿ ಯೋಜನೆಯಡಿ ಪಂಪ್ ಸೆಟ್, ಪೈಪ್ ಲೈನ್ ಅಳವಡಿಸಲು 6 ಲಕ್ಷ ಸಹಾಯಧನ

ಇದೇ ರೀತಿ ಏತ ನೀರಾವರಿ ಯೋಜನೆಯಡಿಯಲ್ಲಿ ನೈಸರ್ಗಿಕವಾದ ನದಿ, ತೊರೆ,  ನಾಲೆಗಳು, ಅಕ್ಕಪಕ್ಕದಳಿರುವ ಪರಿಶಿಷ್ಟ ಪಂಗಡದ ಕನಿಷ್ಟ 3 ಫಲಾನುಭವಿಗಳು ಸಣ್ಣ ಮತ್ತು ಅತೀ ಸಣ್ಣ ರೈತರುಗಳ ಜಮೀನುಗಳಿಗೆ ಪಂಪ್ ಸೆಟ್ ಮತ್ತು ಪೈಪ್ ಲೈನ್ ಅಳವಡಿಸಿ ಉಚಿತವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವುದು. ಈ ಯೋಜನೆಯಡಿಯಲ್ಲಿ ಘಟಕ ವೆಚ್ಚವು ಕನಿಷ್ಟ 8 ಎಕರೆ ಖುಷ್ಕಿ ಜಮೀನಿನ ಘಟಕಕ್ಕೆ 4 ಲಕ್ಷ ಮತ್ತು 15 ಎಕರೆ ಜಮೀನಿನ ಘಟಕಕ್ಕೆ 6 ಲಕ್ಷ ರೂಪಾಯಿ ಇರುತ್ತದೆ.

Leave a Comment