ಈ ಎಂಟು ಕಾರಣಗಳಿಂದ ಈ ರೈತರಿಗೆ ಪಿಎಂ ಕಿಸಾನ್ ಜಮೆಯಾಗಲ್ಲ

Written by Ramlinganna

Updated on:

pm kisan beneficiary not get benefit ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಜಮೆಗಾಗಿ ಕಾಯುತ್ತಿರುವ ರೈತರಿಗೆ ಕೆಳಗೆ ನೀಡಲಾದ ಎಂಟು ಕಾರಣಗಳಿಂದ ಜಮೆಯಾಗುವುದಿಲ್ಲ.

ಹೌದು, ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ಎಲ್ಲಾ ಫಲಾನುಭವಿಗಳಿಗೆ ಈ ಸಲ ಅಂದರೆ 12ನೇ ಕಂತಿನ ಹಣ ಜಮೆಯಾಗುವುದಿಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ಹಣ ಜಮೆ ಮಾಡಲು ಕೆಲವು ರೈತರ ಹೆಸರು ತಡೆಹಿಡಿಯಲಾಗಿದೆ. ಏಕೆಂದರೆ ನಿಜವಾದ ಫಲಾನುಭವಿಗಳಿಗೆ ಅಂದರೆ ಪಿಎಂ ಕಿಸಾನ್ ಯೋಜನೆಯ ನಿಯಮಕ್ಕೊಳಪಡುವ ರೈತರಿಗೆ ಈ ಯೋಜನೆ ಲಾಭ ತಲುಪಿಸುವುದಕ್ಕಾಗಿ ಈ ಕ್ರಮ ಕೈಗೊಂಡಿದೆ.

ನಿಜವಾದ ಫಲಾನುಭವಿಗಳು ಯಾರು ಅನರ್ಹ ರೈತರು ಯಾರು ಎಂಬುದು ಹೇಗೆ ಗೊತ್ತಾಗಿರಬಹುದು ಅಂದುಕೊಂಡಿದ್ದೀರಾ… ನಿಜವಾದ ಫಲಾನುಭವಿಗಳನ್ನು ಗುರುತಿಸುವುದಕ್ಕಾಗಿ ಸರ್ಕಾರವು ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿತ್ತು.  ನಿಜವಾದ ಫಲಾನುಭವಿಗಳು ಯಾರೆಂಬುದನ್ನು ಗುರುತಿಸುವುದಕ್ಕಾಗಿಯೇ ರೈತರಿಂದ ಇಕೆವೈಸಿ ಮಾಡಿಸಲಾಗಿತ್ತು.

ಆಧಾರ್ ಕಾರ್ಡ್ ಲಿಂಕ್ ದಿಂದಾಗಿ ಯಾರು ಸರ್ಕಾರಿ ನೌಕರರು, ಒಂದು ಕುಟುಂಬದಲ್ಲಿ ಯಾರು ಯಾರು ಸೌಲಭ್ಯ ಪಡೆಯುತ್ತಿದ್ದಾರೆ ಎಂಬುದು ಇಕೆವೈಸಿಯಿಂದ ಸರ್ಕಾರವು ಗುರುತಿಸಿದೆ. ಹಾಗಾದರೆ ಯಾವ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ. ಎಂಬುದರ ಪಟ್ಟಿ ಇಲ್ಲಿದೆ.

 pm kisan beneficiary not get benefit ಪಿಎಂ ಕಿಸಾನ್ ಈ ಎಂಟು ಕಾರಣಗಳಿಂದ ಈ ರೈತರಿಗೆ ಹಣ ಜಮೆಯಾಗಲ್ಲ

  1. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಕುಟುಂಬದಲ್ಲಿ ತೆರಿಗೆ ಕಟ್ಟುತ್ತಿದ್ದರೆ ಆ ಕುಟುಂಬದ ಯಾವ ಸದಸ್ಯರಿಗೂ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವುದಿಲ್ಲ. ಕುಟುಂಬದಲ್ಲಿ ಮೂರ್ನಾಲ್ಕು ಜನ ನೋಂದಣಿ ಮಾಡಿಸಿದ್ದರೆ ಎಲ್ಲಾ ಸದಸ್ಯರಿಗೂ ಈ ಸಲ ಪಿಎಂ ಕಿಸಾನ್ ಹಣ ಜಮೆ ಮಾಡುವುದನ್ನು ತಡೆಹಿಡಿಯಲಾಗುವುದು ಎನ್ನಲಾಗುತ್ತಿದೆ.
  2. ಗಂಡ, ಹೆಂಡತಿ ಅಥವಾ ಮಕ್ಕಳೂ ಈ ಮೂರರಲ್ಲಿ ಯಾರಾದರೊಬ್ಬರು, ಸರ್ಕಾರಿ ನೌಕರರರಾಗಿದ್ದರೂ ಸಹ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ.
  3. ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ಒಂದೇ ರೀತಿಯಾಗಿರುವ ಫಲಾನುಭವಿಗಳಿಗೆ ಜಮೆಯಾಗಲಿದೆ. ಆಧಾರ್ ಕಾರ್ಡ್ ಹಾಗೂ ಪಹಣಿ ಮತ್ತು ಬ್ಯಾಂಕ್ ಮೂರರಲ್ಲಿ ಹೆಸರು ಹೊಂದಾಣಿಕೆಯಾಗದಿದ್ದರೆ ಅಂತಹವರಿಗೆ ಜಮೆಯಾಗುವುದಿಲ್ಲ.
  4. ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ವೈದ್ಯರು, ಇಂಜಿನಿಯರ್, ವಕೀಲರಿದ್ದರೆ ಆ ಕುಟುಂಬದವರಿಗೂ ಪಿಎಂ ಕಿಸಾನ್ ಯೋಜನೆಯ ಹಣ ಬರುವುದಿಲ್ಲ.
  5. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗೆ ಪ್ರತಿ ವರ್ಷ 10 ಸಾವಿರ ರೂಪಾಯಿ ಪಿಂಚಣಿ ಬರುತ್ತಿದ್ದರೆ ಅಂತಹ ರೈತರಿಗೆ ಹಣ ಜಮೆಯಾಗುವುದಿಲ್ಲ.
  6. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗೆ 5 ಎಕರೆಗಿಂದ ಹೆಚ್ಚು ಜಮೀನಿದ್ದರೆ ಆ ರೈತರಿಗೆ ಈ ಯೋಜನೆಯ ಹಣ ಜಮೆಯಾಗುವುದಿಲ್ಲ.
  7. ಕಳೆದ ವರ್ಷ ಇನಕಮ್ ಟ್ಯಾಕ್ಸ್ ಕಟ್ಟಿರುವ ರೈತರಾಗಿದ್ದರೆ ಅಂತಹವರಿಗೂ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವುದಿಲ್ಲ.
  8. ಯಾವ ರೈತರು ಇಕೆವೈಸಿ ಮಾಡಿಸಿಲ್ಲವೋ ಆ ರೈತರಿಗೂ ಇನ್ನೂ ಮುಂದೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯ ಪಟ್ಟಿಯಿಂದ ಹೊರಗಿಡಲಾಗುವುದು.

ಪಿಎಂ ಕಿಸಾನ್ ಇಕೆವೈಸಿ ಯಶಸ್ವಿಯಾಗಿದೆಯೋ ಇಲ್ಲವೋ ಎಂಬದುನ್ನು ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲೇ ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಹೌದು ರೈತರು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬೈಲ್ ನಂಬರ್ ಇಮೇಜ್ ಕೋಡ್ ಟೈಪ್ ಮಾಡಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ತೆರೆದುಕೊಳ್ಳುತ್ತದೆ.ಇಕೆವೈಸಿ ಸ್ಟೇಟಸ್ ಮುಂದುಗಡೆ ಇಕೆವೈಸಿ  ಸಕ್ಸೆಸ್ ಆಗಿದ್ದರೆ ಸಕ್ಸೆಸ್ ಎಂದು ಇನ್ನೂ ಆಗಿರದಿದ್ದರೆ ಪೆಂಡಿಂಗ್ ಎಂಬ ಮಾಹಿತಿ ಕಾಣುತ್ತದೆ. ಅದರ ಕೆಳಗಡೆ ಯಾವ ಕಾರಣದಿಂದಾಗಿ ಪಿಎಂ ಕಿಸಾನ್ ಯೋಜನೆ ನಿಮಗೆ ಸಿಗುವುದಿಲ್ಲ ಎಂಬ ಮಾಹಿತಿಯೂ ಇರುತ್ತದೆ.

ಇದನ್ನೂ ಓದಿ ಈ ರೈತರಿಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ

Leave a Comment