ರಾಜ್ಯದಲ್ಲಿ ಇಂದಿನಿಂದ (ಏಪ್ರೀಲ್ 8 ರಿಂದ 12 ರವರೆಗೆ) (five days rain alert)  ಐದು ದಿನಗಳ ಕಾಲ  16 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರೀಲ್ 8 ರಿಂದ 12 ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಂಗಳೂರು, ಹಾಸನ,ಕೊಡಗು, ಮೈಸೂರು ಶಿವಮೊಗ್ಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಏಪ್ರೀಲ್ 11 ಹಾಗೂ 12 ರಂದು ಬೆಳಗಾವಿ, ಬೀದರ್, ಬಿಜಾಪುರ, ಬೆಳಗಾವಿ,ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದರೆ ಏಪ್ರೀಲ್ 8 ರಂದು ಕಲಬುರಗಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ, ತಣ್ಣನೆಯೆ ಗಾಳಿ ಬಿಸಲಿದೆ.

ಚಿತ್ರದುರ್ಗ, ಹಾಸನ , ಕೊಡಗು, 13 ಮತ್ತು 4 ರಂದು ಮೋಡ ಕವಿದ ವಾತಾವರಣ ಇರಲಿದೆ. ಯಾದಗಿರಿ, ಬಳ್ಳಾರಿ, ರಾಯಚೂರು, ವಿಜಯಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಯಾವುದೇ ಮಳೆಯಾಗುವ ಮುನ್ಸೂಚನೆಯಿಲ್ಲ. ಒಣಹವೆ ಮುಂದುವರೆಯಲಿದೆ.

Leave a Reply

Your email address will not be published. Required fields are marked *