ಬರ ಪರಿಹಾರ ಜಮೆ- ನಿಮಗೆಷ್ಟು ಜಮೆ? ಇಲ್ಲೆ ಚೆಕ್ ಮಾಡಿ

Written by Ramlinganna

Updated on:

First installment Drought amount  ಬರಗಾಲ ಪರಿಹಾರದ (ಮೊದಲ ಕಂತಿನ ಹಣ) ರಾಜ್ಯದ ಬಹುತೇಕ ರೈತರ ಖಾತೆಗೆ ಜಮೆಯಾಗಿದೆ. ಹೌದು. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಖಾತೆಗೆ ಬರಗಾಲ ಪರಿಹಾರದ ಮೊದಲ ಕಂತು ಜಮೆಯಾಗಿದೆ.

ಹೌದು, ಯಾವ ಯಾವ ರೈತರಿಗೆ ಎಷ್ಟು ಬರಗಾಲ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಅರ್ಹ ಫಲಾನುಭವಿಗಳು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಬೆಳೆ ಹಾನಿ ಸಂಬಂಧ ತಾತ್ಕಾಲಿಕ ಪರಿಹಾರ ಮೊತ್ತ 2 ಸಾವಿರ ರೂಪಾಯಿಗಳನ್ನುಬರಗಾಲ ಪೀಡಿತ ತಾಲೂಕುಗಳ ರೈತರಿಗೆ ಪಾವತಿಸಲಾಗುತ್ತಿದೆ. ಫ್ರೂಟ್ಸ್ ಐಡಿ ಮಾಡಿ ರೈತರ ಖಾತೆಗೆ ಬರಗಾಲ ಪರಿಹಾರದ ಮೊದಲ ಕಂತಿನ ಹಣ ಜಮೆ ಮಾಡಲಾಗುತ್ತಿದೆ.

First installment Drought amount  ಯಾವ ಬೆಳೆಗೆ ಎಷ್ಟುಹಣ ಜಮೆಯಾಗಲಿದೆ?

ಪ್ರತಿ ಹೆಕ್ಟೇರ್ ಮಳೆ ಆಶ್ರಿತ ಬೆಳೆಗಳಿಗೆ 8500 ರೂಪಾಯಿ ನೀಡಲಾಗುವುದು. ಅದೇ ರೀತಿ ನೀರಾವರಿ ಬೆಳೆಗಳಿಗೆ 17 ಸಾವಿರ ರೂಪಾಯಿ ನೀಡಲಾಗುವುದು. ಬಹುವಾರ್ಷಿಕ ಬೆಳೆಗಳಿಗೆ 22500 ರೂಪಾಯಿ ಪರಿಹಾರ ನಿಗದಿ ಮಾಡಿದೆ. ಸರ್ಕಾರ ಮಾರ್ಗ ಸೂಚಿಯನ್ವಯ ರೈತರಿಗೆ 2 ಹೆಕ್ಟೇರ್ ವರೆಗೆ ಮಾತ್ರ ಬೆಳೆ ಹಾನಿ ಪರಿಹಾರ ವಿತರಿಸಲಾಗುವುದು.

First installment Drought amount ಜಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಕಾಣಿಸುತ್ತದೆ. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಅಥವಾ ಡ್ರಾಟ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2023ನೇ  ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನನ ಮ್ಯಾಪ್ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಕಳೆದ ಸಾಲಿನಲ್ಲಿ ಪ್ರವಾಹದಿಂದಾಗಿ ಉಂಟಾದ ಮಳೆಯಿಂದ ರೈತರ ಬೆಳೆಹಾಳಾಗಿತ್ತು. ಆಗ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡುವುದರೊಂದಿಗೆ ಪ್ರಸಕ್ತ ವರ್ಷದ ಬೆಳೆ ಹಾನಿ ಪರಿಹಾರ ಅತೀ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಆಗ ರೈತರು  ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನುಚೆಕ್ ಮಾಡಬಹುದು.

ಮೊಬೈಲ್ ನಲ್ಲಿ ರೈತರು ಫ್ರೂಟ್ಸ್ ಐಡಿಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು?

ಪ್ರೂಟ್ಸ್ ಐಡಿಗಾಗಿ ರೈತರು ಅರ್ಜಿ ಸಲ್ಲಿಸಲು ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ ಐಡಿ ಓಪನ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಒಂದು ವೇಳೆ ನೋಂದಣಿ ಮಾಡಿಸಿದ್ದರೆ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಹಾಕಿ ತಮ್ಮ ಫ್ರೂಟ್ಸ್ ಐಡಿ ಚೆಕ್ ಮಾಡಬಹುದು. ಪಾಸ್ವರ್ಡ್ ಮರೆತಿದ್ದರೆ Reset Password ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಬೇಕು. ನಂತರ ನೀವು ಪಾಸ್ವರ್ಡ್ ಕ್ರಿಯೆಟ್ ಮಾಡಿ ಲಾಗಿನ್ ಆಗಬಹುದು.

ಒಂದು ವೇಳೆ ನೀವು ಫ್ರೂಟ್ಸ್ ಐಡಿಗೆ ನಿಮ್ಮಹೆಸರು ಹೊಸದಾಗಿ ನೋಂದಣಿ ಮಾಡಿಸುತ್ತಿದ್ದರೆ citizen Registration ಮೇಲೆ ಕ್ಲಿಕ್ ಮಾಡಬೇಕು ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ನಮೂದಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ ಹಾಕಬೇಕು. ಐ ಅಗ್ರಿ ಬಾಕ್ಸ್ ಆಯ್ಕೆಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ಹಾಕಬೇಕು. ನಿಮ್ಮ ಮೇಲ್ ಐಡಿಯಿದ್ದರೆ ಯಸ್ ಇಲ್ಲದಿದ್ದರೆ ನೋ ಆಯ್ಕೆ ಮಾಡಿಕೊಳ್ಳಬೇಕು. ಆಮೇಲೆ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿದನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ಓಪನ್ ಆಗುವ ಪೇಜ್ ನಲ್ಲಿ ಕೇಳಲಾದ ಮಾಹಿತಿ ಭರ್ತಿಮಾಡಿ ಫ್ರೂಟ್ಸ್ ಐಡಿ ಪಡೆದುಕೊಳ್ಳಬಹುದು.

Leave a Comment