ಕೆಲಸಕ್ಕೆ ಬಾರದ ಕತ್ತಾಳೆ ಎಂದು ಸೋಮಾರಿ ಜನ  ಕತ್ತಾಳೆಯನ್ನು ಮೂದಲಿಸುವುದನ್ನು ಕೇಳಿದ್ದೇವೆ. ಕಾಕ್ಟಸ್ ಜಾತಿಗೆ ಸೇರಿದ ಈ ಕತ್ತಾಳೆ ಶುಷ್ಕ ಹಾಗೂ ಮಳೆ ಪ್ರಮಾಣ ಅತ್ಯಂತ ಕಡಿಮೆಯಿರುವ ಪ್ರದೇಶಗಳಲ್ಲಿ ಬೆಳೆಯುವ ಗಿಡವಾಗಿದೆ. ರೈತಪಯೋಗಿ  ಈ ಕತ್ತಾಳೆ ಈಗ ಕಣ್ಮರೆಯಾಗುತ್ತಿದೆ.

ಕತ್ತಾಳೆ ನಾರಿನ ವಾಸನೆ ಒಂಥರವಾಗಿರುತ್ತದೆ. ಮಳೆ ಕೊರತೆಯಿಂದ ಬೆಳೆ ಬೆಳೆಯಲಾಗದೆ ಸಂಕಷ್ಟದಲ್ಲಿರುವ ಸಣ್ಮ ರೈತರ, ಕೃಷಿ ಕುಟುಂಬಗಳಿಗೆ ಇದು ಆದಾಯ ನೀಡುವ ಉಪಕಸಬಾಗಿತ್ತು. ಬೇಸಿಗೆ ಗಾಲದಲ್ಲಿ ಮನೆಯಂಗಳದಲ್ಲಿ ಕುಳಿತು ಹಗ್ಗ ನೆಯುವುದು ಸರ್ವೆ ಸಾಮಾನ್ಯವಾಗಿತ್ತು. ಈಗ ತಂತ್ರಜ್ಞಾನ ಬೆಳೆದಿದ್ದರಿಂದ ಕತ್ತಾಳೆ ನಾರಿನ ಬೇಡಿಕೆ ಕಡಿಮೆಯಾಗಿದೆ. ಸುಲಭವಾಗಿ ದೊರೆಯುವ ಪ್ಲಾಸಿಕ್ಟ್ ಬ್ಯಾಗ್ ಗಳ ನಾರಿನಿಂದಾಗಿ ಈಗ ಹಗ್ಗ ತಯಾರಿಸಲಾಗುತ್ತಿದೆ.

ರಸ್ತೆ, ಹೊಲಗಳ ಬದಿ ಬೆಳೆದು ಕೆಲಸಕ್ಕೆ ಬಾರದ ಈ ಗಿಡ ರೈತರಿಗೆ ತುಂಬಾ ಉಪಯೋಗಕಾರಿಯಾಗಿತ್ತು, ಹಿಂದೆ ರೈತರು ಈ ಸಸ್ಯವನ್ನು ಹೊಲ, ತೋಟಗಳ ರಕ್ಷಣೆಗೆ ಬೇಲಿಯಂತೆ ಬಳಸುತ್ತಿದ್ದರು. ಆದರೆ ಈಗ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದೆ.

ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಲಗಳಿಗೆ ಕಬ್ಬಿಣದ ಬೇಲಿ ಹಾಕಲಾಗುತ್ತಿದೆ. ಆದರೆ ಹಿಂದೆ ಯಾವುದೇ ಖರ್ಚಿಲ್ಲದೆ ಬೇಲಿಗೆ ಕತ್ತಾಳೆ ಗಿಡಗಳನ್ನು ಹಾಕುತ್ತಿದ್ದರು.  ಇದು  ಹೊಲ ಅಥವಾ ತೋಟಕ್ಕೆ ಬಲಿಷ್ಠವಾದ ಬೇಲಿ ದೊರೆತಂತಾಗುತ್ತಿತ್ತು. ಈ ಸಸಿಗಳು ಅತ್ಯಂತ ದಟ್ಟವಾಗಿ ಬೆಳೆಯುವುದರಿಂದ ಹಾಗೂ ಎರಡೂ ಬದಿಯಲ್ಲಿ ಮುಳ್ಳುಗಳಿರುವುದರಿಂದ ಯಾವುದೇ ಜನಜಾನುವಾರು ಹೊಲಗಳಿಗೆ ಪ್ರವೇಶಿಸುತ್ತಿರಲಿಲ್ಲ. ಬೇಸಿಗೆಯಲ್ಲೂ ಬಾಡದೆ ಹೊಲಕ್ಕೆ ರಕ್ಷಣೆ ನೀಡುತ್ತಿತ್ತು. ಈ ಗಿಡಕ್ಕೆ ಸಾಮಾನ್ಯವಾಗಿ ಯಾವುದೇ ರೋಗ ತಗಲುವುದಿಲ್ಲ.

ಇದನ್ನೂ ಓದಿ: ರೈತರಿಗೆ ಪಿಎಂ ಕುಸುಮ್ ಯೋಜನೆ (PM KUSUM Scheme) ಯಡಿ ಸೋಲಾರ್ ಪಂಪ್ಸೆಟ್ ಅಳವಡಿಸಲು ನೀಡಲಾಗುವ ಸಬ್ಸಿಡಿಗಳ ಮಾಹಿತಿ ಇಲ್ಲಿದೆ

ಕತ್ತಾಳೆ ಎಲೆಗಳಲ್ಲಿ ನಾರು ಹೆಚ್ಚಾಗಿರುತ್ತಿದ್ದರಿಂದ ಹಿಂದೆ ಇದರ ಎಲೆಗಳನ್ನು ಕತ್ತರಿಸಿ ಹತ್ತಿರದಲ್ಲಿರುವ ಹಳ್ಳಗಳಲ್ಲಿ ನೆನೆಹಾಕಲಾಗುತ್ತಿತ್ತು. ನಂತರ ಇದರಿಂದ ನಾರು ತೆಗೆದು ಒಣಗಿಸಿದನಂತರ ಈ ನಾರನ್ನು ಬಳಸಿ ರೈತರು ಬಗೆಬಗೆಯ ಹಗ್ಗಗಳನ್ನು ತಯಾರಿಸುತ್ತಿದ್ದರು. ಹಿಂದೆಲ್ಲಾ ಮಣ್ಣಿನ ಮಡಕೆ, ಗಡಿಗೆಗಳನ್ನು ಇರಿಸಲು ಬೇಕಿರುವ ಸಿಂಬೆಗಳನ್ನು ಈ ಕತ್ತಾಳೆ ನಾರಿನಿಂದಲೇ ತಯಾರಿಸುತ್ತಿದ್ದರು. ಅಷ್ಟೇ ಅಲ್ಲ, ಬಾರಕೋಲು, ಸುತಳಿ ಸಹ ಇದರಿಂದ ಮಾಡಲಾಗುತ್ತಿತ್ತು. ಈ ನಾರಿನಿಂದ ಹಲವು ಅಲಂಕಾರಿಕ ವಸ್ತುಗಳು, ಬ್ಯಾಗ್, ರೈತೋಪಕರಣಗಳನ್ನು ತಯಾರಿಸಲಾಗುತ್ತಿತ್ತು. ನಾರಿನ ಅಲಂಕಾರಿಕ ವಸ್ತುಗಳಿಗೆ ನಗರ ಪ್ರದೇಶಗಳಲ್ಲಿ ಇನ್ನೂ ಉತ್ತಮ ಬೇಡಿಕೆ, ಮಾರುಕಟ್ಟೆ ಎರಡೂ ಇದೆ.

ಕತ್ತಾಳೆ ನಾರು

ಕತ್ತಾಳೆ ನಾರು ತೆಗೆದ ನಂತರ ಉಳಿಯುವ ಸಿಪ್ಪೆ ಉತ್ತಮ ಗೊಬ್ಬರವಾಗುತ್ತದೆ. ನಾರು ತೆಗೆಯುವಾಗ ಹೊರ ಹೊಮ್ಮುವ ಬೆಳೆಗಳಿಗೆ ತಗಲುವ ರೋಗಕ್ಕೆ ಔಷಧವಾಗುತ್ತದೆ. ಈ ಗಿಡಕ್ಕಕೆ ಔಷಧೀಯ ಗುಣವಿರುವ ಕಾರಣಕ್ಕೆ ಹಿಂದೆ ಬೆಳೆಯಲಾಗುತ್ತಿತ್ತು. ಈಗಲೂ ಕೆಲವು ಕಡೆ ಇದನ್ನು ಬೆಳೆಸುತ್ತಾರೆ. ರೋಗ ನಿಯಂತ್ರಣದ ಜೊತೆಗೆ, ಉತ್ತಮ ಇಳುವರಿ ಬರುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ಐದು ದಿನಗಳ ಮೊದಲೇ ಮಳೆಯ ಮುನ್ಸೂಚನೆ ಪಡೆಯುವ (Meghdoot app) ಆ್ಯಪ್‌ ಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *